"ಇದಿನ್ನೂ ಪ್ರಾಥಮಿಕ ಹಂತ ಅಷ್ಟೇ……"; ಸ್ಪೋಟಕ ಹೇಳಿಕೆ ನೀಡಿದ ಬಸವರಾಜ ಬೊಮ್ಮಾಯಿ

ವಿಜಯವಾಣಿ - 2024-01-25T162232.722
Published on

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸದ್ಯ ದೊಡ್ಡ ಬೆಳವಣಿಗೆ ಕಂಡುಬಂದಿದ್ದು, ಯಾವುದೇ ಮುನ್ಸೂಚನೆ ಇಲ್ಲದಂತೆ ಕಾಂಗ್ರೆಸ್​ನಲ್ಲಿದ್ದ ಜಗದೀಶ್​ ಶೆಟ್ಟರ್ ಇದೀಗ​ ದಿಢೀರ್​ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕೈ ತೊರೆದು ಕಮಲ ಹಿಡಿದ ಶೆಟ್ಟರ್​ ಬೆನ್ನಲ್ಲೇ ಲಕ್ಷಣ ಸವದಿ ಕೂಡ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗಳು ವ್ಯಾಪಕವಾಗಿ ಕೇಳಿಬಂದ ಹಿನ್ನೆಲೆ ಸುದ್ದಿಗೋಷ್ಟಿ ಕರೆದ ಸವದಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಜಗದೀಶ್ ಶೆಟ್ಟರ್​ ಯಾವ ಕಾರಣಕ್ಕೆ ಪಕ್ಷ ತೊರೆದರು ಎಂಬುದು ನನಗೆ ಗೊತ್ತಿಲ್ಲ ಎಂದ ಸವದಿ, "ಈಗಾಗಲೇ ಪಕ್ಷ ಬಿಡಲ್ಲ ಎಂದು ಹೇಳಿದ್ದೇನೆ. ಮತ್ತೇ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ಯಾವುದೇ ಕಾರಣಕ್ಕೂ ನಾನು ಹೋಗುವುದಿಲ್ಲ. ರಾಷ್ಟ್ರೀಯ ಪಕ್ಷಗಳು ಎಂದಿಗೂ ಒಬ್ಬರ ಮೇಲೆ ಅವಲಂಬಿತರಾಗುವುದಿಲ್ಲ" ಎಂದು ತಿಳಿಸಿದರು.

ಆದ್ರೆ, ಈ ಹೇಳಿಕೆಗಳು ಹೊರಬೀಳುತ್ತಿದ್ದಂತೆ ಸ್ಫೋಟಕ ಹೇಳಿಕೆ ನೀಡಿದ ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ, "ಇದಿನ್ನೂ ಪ್ರಾಥಮಿಕ ಹಂತ ಅಷ್ಟೇ, ಮುಂದೆ ಕಾದು ನೋಡಿ. ಬಿಜೆಪಿಗೆ ಇನ್ನು ಅನೇಕರು ಬರಲಿದ್ದಾರೆ. ಕಮಲ ತೊರೆದವರು ಮಾತ್ರವಲ್ಲ, ಕಾಂಗ್ರೆಸ್ಸಿಗರು ಬರ್ತಾರೆ" ಎಂದು ತಿಳಿಸಿದ್ದಾರೆ. ಒಟ್ಟಾರೆ ಈ ಎಲ್ಲಾ ಬೆಳವಣಿಗೆಗಳು ಯಾವ ಹಂತವನ್ನು ತಲುಪಲಿದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net