ಬಿಜೆಪಿ ಸೇರ್ಪಡೆ ವದಂತಿಯ ಬೆನ್ನಲ್ಲೇ ಸವದಿ ಭೇಟಿಯಾದ ಡಿಕೆಶಿ! ಶುರುವಾಯ್ತು ಭಾರೀ ಚರ್ಚೆ

ವಿಜಯವಾಣಿ - 2024-01-25T155801.824
Published on

ಬೆಂಗಳೂರು: ಕಾಂಗ್ರೆಸ್​ ತೊರೆದ ಜಗದೀಶ್ ಶೆಟ್ಟರ್​ ಬಿಜೆಪಿಗೆ ಸೇರ್ಪಡೆಗೊಂಡ ಬೆನ್ನಲ್ಲೇ ಇದೀಗ ಲಕ್ಷಣ ಸವದಿ ಕೂಡ ಬಿಜೆಪಿಯನ್ನು ಸೇರಲಿದ್ದಾರೆ ಎಂಬ ವದಂತಿ ಸದ್ಯ ಎಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಸುದ್ದಿ ತೀವ್ರವಾಗುತ್ತಿದ್ದಂತೆ ಸವದಿಯನ್ನು ಭೇಟಿಯಾದ ಡಿ.ಕೆ. ಶಿವಕುಮಾರ್​ ಕೆಲ ಸಮಯ ಸುದೀರ್ಘ ಚರ್ಚೆಯನ್ನು ನಡೆಸಿದ್ದಾರೆ.

ಜಗದೀಶ್​ ಶೆಟ್ಟರ್​ ಬಿಜೆಪಿ ಸೇರ್ಪಡೆ ಬಳಿಕ ಲಕ್ಷ್ಮಣ ಸವದಿ ಕೂಡಾ ಮತ್ತೆ ಬಿಜೆಪಿ ಸೇರುತ್ತಾರೆ ಎಂಬ ಚರ್ಚೆ ಪ್ರಾರಂಭವಾಗಿತ್ತು. ಇದಾದ ಬಳಿಕ ಸ್ವತಃ ಲಕ್ಷ್ಮಣ ಸವದಿ ಮಾಧ್ಯಮದ ಮುಂದೆ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಕಾರಕ್ಕೂ ನಾನು ಮತ್ತೆ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ವದಂತಿಗಳಿಗೆ ಪ್ರತಿಕ್ರಿಯಿಸಿದ ಸವದಿ, "ಈಗಾಗಲೇ ಪಕ್ಷ ಬಿಡಲ್ಲ ಎಂದು ಹೇಳಿದ್ದೇನೆ. ಮತ್ತೇ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ಯಾವುದೇ ಕಾರಣಕ್ಕೂ ನಾನು ಹೋಗುವುದಿಲ್ಲ. ಜಗದೀಶ್​ ಶೆಟ್ಟರ್​ ಯಾಕೆ ಹೋದರು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ" ಎಂದು ಹೇಳಿದರು.

"ಶೆಟ್ಟರ್​ ಬಿಜೆಪಿಗೆ ಹೋಗಿರುವುದರಿಂದ ಕಾಂಗ್ರೆಸ್​ಗೆ ಯಾವುದೇ ರೀತಿಯಲ್ಲೂ ಡ್ಯಾಮೇಜ್​ ಆಗುವುದಿಲ್ಲ. ರಾಷ್ಟ್ರೀಯ ಪಕ್ಷಗಳು ಎಂದಿಗೂ ಒಬ್ಬರ ಮೇಲೆ ಅವಲಂಬಿತರಾಗುವುದಿಲ್ಲ" ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net