ಸಹೋದರಿಯ ಎಂಗೇಜ್‌ಮೆಂಟ್: ಸಹಜ ಸುಂದರಿಯಾಗಿ ಗಮನಸೆಳೆದ ಸಾಯಿ ಪಲ್ಲವಿ..!

sai
Published on

ತಿರುವನಂತಪುರಂ: ದಕ್ಷಿಣ ಭಾರತದ ಪ್ರತಿಭಾನ್ವಿತ ನಟಿ ಸಾಯಿ ಪಲ್ಲವಿ ಸಹೋದರಿ ಪೂಜಾ ಕಣ್ಣನ್‌ ನಿಶ್ಚಿತಾರ್ಥ ಇತ್ತೀಚೆಗೆ ವೈಭವದಿಂದ ನಡೆದಿದ್ದು, ತನ್ನ ಕುಟುಂಬದಲ್ಲಿ ನಡೆದ ಕಾರ್ಯಕ್ರಮದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಾಯಿ ಪಲ್ಲವಿ ಹಳದಿ ಮತ್ತು ಕ್ರೀಮ್‌ ಬಣ್ಣದ ಸೀರೆಯಲ್ಲಿ ಸಹಜ ಸುಂದರಿಯಾಗಿ ಗಮನ ಸೆಳೆದಿದ್ದಾರೆ.

ಸಾಯಿ ಪಲ್ಲವಿಯ ಕಿರಿಯ ಸಹೋದರಿ ಪೂಜಾ ಕಣ್ಣನ್‌ ತನ್ನ ಬಾಯ್‌ಫ್ರೆಂಡ್‌ ವಿನೀತ್‌ ಜತೆ ನಿಶ್ಚಿತಾರ್ಥ ಕಳೆದ ಭಾನುವಾರ ನಡೆದಿದೆ. ಈ ಕಾರ್ಯಕ್ರಮದಲ್ಲಿ ಕುಟುಂಬದ ಆಪ್ತರು, ಬಂಧು ಬಳಗ ಪಾಲ್ಗೊಂಡಿತ್ತು. ನಿಶ್ಚಿತಾರ್ಥ ಕಾರ್ಯಕ್ರಮದ ಹಲವು ಫೋಟೋಗಳು ಈಗ ಲಭ್ಯವಾಗಿವೆ. ಪೂಜಾ ಕಣ್ಣನ್‌ ಸಹ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

"ದೊಡ್ಡ ಕುಟುಂಬ, ಆತ್ಮೀಯ ಕ್ಷಣಗಳು" ಎಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪೂಜಾ ಮತ್ತು ವಿನೀತ್‌ ಅವರು ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದಾರೆ. ಪೂಜಾ ಕಣ್ಣನ್‌ ಕಂದು ಬಣ್ಣದ ಸೀರೆ ಉಟ್ಟಿದ್ದರು. ಅದಕ್ಕೆ ಮ್ಯಾಚ್‌ ಆಗುವಂತಹ ಕುರ್ತಾವನ್ನು ವಿನೀತ್‌ ಧರಿಸಿದ್ದರು. ಇದೇ ಸಮಯದಲ್ಲಿ ಸಾಯಿ ಪಲ್ಲವಿ ಅವರು ಕ್ರೀಮ್‌ ಮತ್ತು ಯೆಲ್ಲೋ ಬಣ್ಣದ ಸೀರೆ ಉಟ್ಟಿದ್ದರು.

ನಿಶ್ವಿತಾರ್ಥದಲ್ಲಿ ತಮ್ಮ ಫೋಟೋಗಳು ಮಾತ್ರವಲ್ಲದೆ ಕುಟುಂಬದ ಫೋಟೋಗಳನ್ನು ಪೂಜಾ ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಸಾಯಿ ಪಲ್ಲವಿ ಮತ್ತು ಅವರ ಹೆತ್ತವರು ಇದ್ದಾರೆ. ಸಾಯಿ ಪಲ್ಲವಿಯ ಸಹೋದರಿ ಕೆಲವು ದಿನಗಳ ಹಿಂದಷ್ಟೇ ತಮ್ಮ ಈ ಪ್ರೇಮ ಸಂಬಂಧದ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದರು. ತನ್ನ ಮತ್ತು ವಿನೀತ್‌ನ ರೀಲ್‌ ಹಂಚಿಕೊಂಡು ತಾವು ಶೀಘ್ರದಲ್ಲಿಯೇ ಸಂಗಾತಿಗಳಾಗುವುದಾಗಿ ಘೋಷಿಸಿದ್ದರು.

ಪೂಜಾ ಕಣ್ಣನ್‌ ಚಿತ್ರರಂಗದಲ್ಲಿ ಯಶಸ್ಸು ಪಡೆಯುವ ಪ್ರಯತ್ನದಲ್ಲಿದ್ದಾರೆ. ಕಣ್ಣನ್‌ ತಮಿಳು ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಚಿತ್ತಿರಿ ಸೇವನಂ ಚಿತ್ರದಲ್ಲಿ ನಟಿಸಿದ್ದರು. ಎಜೆ ವಿಜಯ್‌ ನಿರ್ದೇಶನದ ಈ ಚಿತ್ರದಲ್ಲಿ ಸಮುದ್ರಕನಿ, ರೀಮಾ ಕಳ್ಳಿಂಗಲ್ ಕೂಡ ನಟಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net