ಸಚಿನ್ ವಾಜೆ ಸಹಾಯಕನನ್ನು ಬಂಧಿಸಿದ ಎನ್​ಐಎ: ರಿಯಾಜ್ ಖಾಜಿ ಬಿಚ್ಚಿಟ್ಟ ಸ್ಪೋಟಕ ಸತ್ಯ

mukesh
mukesh ambani
Published on

ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಪತ್ತೆಯಾಗಿದ್ದರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್​ ಸಿಕ್ಕಿದೆ.

ಪ್ರಕರಣದಲ್ಲಿ ಬಂಧಿತನಾಗಿರುವ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಸಹಾಯಕ ಹಾಗೂ ಮುಂಬೈ ಕ್ರೈಂ ಇಂಟಲಿಜೆನ್ಸ್ ಯುನಿಟ್ ಅಧಿಕಾರಿಯಾಗಿದ್ದ ರಿಯಾಜ್ ಖಾಜಿಯನ್ನು ಭಾನುವಾರ ಎನ್​ಐಎ ಬಂಧಿಸಿದೆ. ಮುಕೇಶ್ ಅಂಬಾನಿ ಮನೆ ಸ್ಪೋಟಕ ಇರಿಸಿದ್ದ ಕಾರ್​​ ನಂಬರ್ ಪ್ಲೇಟ್ ಬದಲಾವಣೆ ಮಾಡಿದ್ದ ಆರೋಪ ಹಾಗೂ ಸಾಕ್ಷ್ಯ ನಾಶದ ಆರೋಪವನ್ನು ಖಾಜಿ ಮೇಲೆ ಹೊರಿಸಲಾಗಿದೆ. ಸಚಿನ್ ವಾಜೆ ಅವರೇ ತನಗೆ ಎರಡು ಕಾರ್​​ಗಳ ನಂಬರ್​ ಪ್ಲೇಟ್ ಬದಲಾವಣೆ ಮಾಡಲು ಹೇಳಿದ್ದರು ಎಂಬುದಾಗಿ ರಿಯಾಜ್ ಬಾಯ್ಬಿಟ್ಟಿದ್ದಾನೆ.

ಫೆಬ್ರವರಿ 25 ರಂದು ಸ್ಕಾರ್ಪಿಯೋ ವಾಹನ ಒಂದು ಸ್ಪೋಟಕ ಹಾಗೂ ಬೆದರಿಕೆ ಪತ್ರ ಒಳಗೊಂಡು ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆಯಾದ ಅಂಟಿಲಿಯಾ ಬಳಿ ಪತ್ತೆಯಾಗಿತ್ತು. ಪತ್ತೆಯಾದ ಸ್ಕಾರ್ಪಿಯೋ ವಾಹನ ತನ್ನದು ಎಂದು ಹೇಳಿಕೊಂಡು ಮನ್ಸೂಕ್ ಹಿರೇನ್ ಎನ್ನುವ ವ್ಯಕ್ತಿ ಪೊಲೀಸ್​ ಮುಂದೆ ಹೊರಟಿದ್ದರು. ಆದರೆ ಮಾರ್ಚ್ 5 ರಂದು ಮನ್ಸೂಕ್ ಹಿರೇನ್ ಏಕಾಏಕಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು.

ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಎನ್​ಕೌಂಟ್​ರ್ ಪರಿಣಿತಿಯ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಎನ್​ಐಟ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. (ಏಜೇನ್ಸಿಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net