ಸಚಿನ್​ ಪೈಲಟ್​ಗಾಗಿ ಬಿಜೆಪಿ ಬಾಗಿಲು ತೆರೆದೇ ಇದೆ...; ಆಹ್ವಾನ ನೀಡಿದ ಮುಖಂಡ

Sachin Pilot 1
Published on

ಜೈಪುರ: ಸಚಿನ್​ ಪೈಲಟ್​ ಅವರನ್ನು ರಾಜಸ್ಥಾನ ಡಿಸಿಎಂ ಸ್ಥಾನ ಮತ್ತು ಪಿಸಿಸಿ ಅಧ್ಯಕ್ಷನ ಸ್ಥಾನದಿಂದ ಕಾಂಗ್ರೆಸ್​ ವಜಾಗೊಳಿಸಿದೆ. ಈ ಬೆನ್ನಲ್ಲೇ ಬಿಜೆಪಿ ಸಚಿನ್​ ಪೈಲಟ್​ ಅವರಿಗೆ ತೆರೆದ ತೋಳಿನ ಆಹ್ವಾನ ನೀಡಿದೆ.

ರಾಜಸ್ಥಾನ ಬಿಜೆಪಿ ನಾಯಕ ಓಂ ಮಾಥುರ್​ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಸಚಿನ್ ಪೈಲಟ್​ ಅವರು ಬಿಜೆಪಿಗೆ ಬರುವುದಾದರೆ ನಾವು ಖುಷಿಯಿಂದಲೇ ಆಹ್ವಾನಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜಸ್ಥಾನ ರಾಜಕೀಯ: ವಿಶ್ವಾಸಮತ ಯಾಚನೆಗೆ ಆಗ್ರಹಿಸಿದ ಪೈಲಟ್​ ಬೆಂಬಲಿಗರು

ಅಶೋಕ್​ ಗೆಹ್ಲೋಟ್​ ಅವರು ತಮಗೆ ಬಹುಮತ ಇದೆ. ನಮ್ಮ ಸರ್ಕಾರ ಸೇಫ್​ ಎನ್ನುತ್ತಿದ್ದಾರೆ. ಆದರೆ ಅವರು ವಿಶ್ವಾಸಮತ ಯಾಚನೆ ಮಾಡಬೇಕು. ತಮಗಿರುವ ಬಹುಮತವನ್ನು ಸಾಬೀತು ಪಡಿಸಬೇಕು ಎಂದು ಮಾಥುರ್​ ಹೇಳಿದ್ದಾರೆ.

ನಮ್ಮ ಪಕ್ಷದ ಬಾಗಿಲು ಸಚಿನ್​ ಪೈಲಟ್​ಗಾಗಿ ತೆರೆದೇ ಇದೆ. ಅವರೂ ಅಂತಲ್ಲ, ಯಾರೇ ಬಿಜೆಪಿ ಸೇರಲು ಇಷ್ಟಪಟ್ಟರೂ ಅವರನ್ನು ಸೇರಿಸಿಕೊಳ್ಳುತ್ತೇವೆ. ಆದರೆ ಅವರು ನಮ್ಮ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ ಇರಬೇಕು ಎಂದಿದ್ದಾರೆ. ಇದನ್ನೂ ಓದಿ: ರಾಜಸ್ಥಾನ ರಾಜಕೀಯ: ತುರ್ತುಸಭೆ ಸೇರಿದ ಬಿಜೆಪಿ ನಾಯಕರು

ಸಚಿನ್​ ಪೈಲಟ್​ ಹಾಗೂ ಅಶೋಕ್ ಗೆಹ್ಲೋಟ್​ ನಡುವಿನ ವಿವಾದ ಕಾಂಗ್ರೆಸ್​ನ ಆಂತರಿಕ ವಿಚಾರ. ಆದರೆ ಆ ಪಕ್ಷ ಸಚಿನ್​ ಪೈಲಟ್​ರಂತಹ ನಾಯಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.

ಆದರೆ ಸಚಿನ್​ ಪೈಲಟ್​ ಅವರು ಈಗಾಗಲೇ ತಾವು ಬಿಜೆಪಿಗೆ ಸೇರ್ಪಡೆಯಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net