

ರಾಯಚೂರು: ಬಿಜೆಪಿಯ ಚುನಾವಣಾ ಸಮಾವೇಶಕ್ಕೆ ಹೋಗಿದ್ದ ಕಾರ್ಯಕರ್ತನ ತಲೆಗೆ ಗಂಭೀರ ಗಾಯವಾಗಿರುವ ಪ್ರಕರಣ ನಡೆದಿದೆ. ಸಿಂಧನೂರು ಬಳಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಈ ಅವಘಡ ಸಂಭವಿಸಿದೆ.
ಕಾರಟಗಿ ತಾಲೂಕಿನ ಯರಡೋಣ ಗ್ರಾಮದ ರವಿ ಸಿಂಗ್ ಗಾಯಗೊಂಡಿರುವ ಕಾರ್ಯಕರ್ತ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಾಗತ ಕಾರ್ಯಕ್ರಮಕ್ಕೆ ಹೋಗಿದ್ದಾಗ ಈತ ಗಾಯಗೊಂಡಿದ್ದಾನೆ.
ಸಿಂಧನೂರು ಮೋದಿ ಸಮಾವೇಶದ ಹೆಲಿಪ್ಯಾಡ್ ಬಳಿ ಈ ಘಟನೆ ನಡೆದಿದೆ. ಹೆಲಿಪ್ಯಾಡ್ ಬಳಿ ನಿರ್ಮಾಣ ಮಾಡಿದ್ದ ಟೆಂಟ್, ಹೆಲಿಕಾಪ್ಟರ್ ಬರುತ್ತಿದ್ದಂತೆ ಗಾಳಿಗೆ ಹಾರಿ ಬಿದ್ದಿದೆ. ಹತ್ತಿರವೇ ಇದ್ದ ರವಿ ಸಿಂಗ್ ಇದರಿಂದ ಗಾಯಗೊಂಡಿದ್ದು, ಅವರನ್ನು ಕಾರಟಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.