'ಟಿಎಂಸಿಯ ಹೊಲಸು ರಾಜಕಾರಣಿಗಳು ನಮಗೆ ಬೇಕಿಲ್ಲ!' ಸಾಮೂಹಿಕ ಸೇರ್ಪಡೆ ಮಾಡಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ

tmc
Published on

ಕೋಲ್ಕತ: ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದಿಂದ ಬಿಜೆಪಿಗೆ ಬರಲಿಚ್ಛಿಸುವ ಎಲ್ಲ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗದು ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ. ಟಿಎಂಸಿಯ ಹೊಲಸು ರಾಜಕಾರಣಿಗಳು ನಮಗೆ ಬೇಕಿಲ್ಲ, ಇನ್ನು ಮುಂದೆ ಅವರನ್ನು ಸಾಮೂಹಿಕ ಸೇರ್ಪಡೆ ಮಾಡಿಸಿಕೊಳ್ಳಲಾಗದು ಎಂದು ತಿಳಿಸಲಾಗಿದೆ.

ಬಿಜೆಪಿಯನ್ನು ಟಿಎಂಸಿ ಪಕ್ಷದ ಬಿ ಟೀಂ ಮಾಡಲು ನಾವು ಸಿದ್ಧರಿಲ್ಲ. ಅಲ್ಲಿ ದೇಶದ್ರೋಹದ ಕೆಲಸ ಮಾಡಿ ಈಗ ನಮ್ಮ ಪಕ್ಷಕ್ಕೆ ಸೇರಲಿಚ್ಛಿಸುತ್ತಿರುವವರನ್ನು ನಾವು ಕರೆದುಕೊಳ್ಳುವುದಿಲ್ಲ. ಹಾಗಾಗಿ ಇನ್ನು ಮುಂದೆ ಸಾಮೂಹಿಕ ಸೇರ್ಪಡೆಯನ್ನು ಮಾಡಿಕೊಳ್ಳುವುದಿಲ್ಲ. ವೈಯಕ್ತಿಕವಾಗಿ ಸೇರ್ಪಡಿಸಿಕೊಳ್ಳಲಾಗುವುದು. ಅವರನ್ನೂ ಸಹ ಸ್ಥಳೀಯ ನಾಯಕರೊಂದಿಗೆ ಚರ್ಚೆ ನಡೆಸಿ, ಪರಿಶೀಲನೆ ನಡೆಸಿದ ನಂತರವೇ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್​ ವಿಜಯವರ್ಗೀಯ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬಿಜೆಪಿ ಕನಿಷ್ಠ 200 ಸ್ಥಾನ ಗೆಲ್ಲುವುದಾಗಿ ಭರವಸೆ ವ್ಯಕ್ತಪಡಿಸಿದೆ. ಈಗಾಗಲೇ ಟಿಎಂಸಿಯ ಹತ್ತಾರು ನಾಯಕರು ಪಕ್ಷ ತೊರೆದು ಬಿಜೆಪಿ ಸೇರಲಾರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net