ಲವ್ ಜಿಹಾದ್ ಕುರಿತ ಕಾಯ್ದೆ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸಿದ ಕೇಂದ್ರ ಗೃಹ ಸಚಿವಾಲಯ; ರಾಜ್ಯಗಳತ್ತ ಬೊಟ್ಟು...

Love Jihad
Published on

ನವದೆಹಲಿ: ಆಗೊಮ್ಮೆ ಈಗೊಮ್ಮೆ ದೊಡ್ಡದಾಗಿ ಸದ್ದು ಮಾಡುವ ಲವ್ ಜಿಹಾದ್ ವಿಚಾರ ಇದೀಗ ಸಂಸತ್ತಿನಲ್ಲೂ ಕೇಳಿಬಂದಿದ್ದು, ಆ ಕುರಿತು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆಯನ್ನು ನೀಡಿದೆ. ಮಾತ್ರವಲ್ಲ ಲವ್ ಜಿಹಾದ್ ನಿಯಂತ್ರಣಕ್ಕಾಗಿ ಕಾಯ್ದೆಯೊಂದನ್ನು ತರಲಾಗುತ್ತದೆಯೇ ಎಂಬ ಕುರಿತು ಕೂಡ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಲೋಕಸಭೆಯಲ್ಲಿ ಲವ್ ಜಿಹಾದ್ ಹಿನ್ನೆಲೆಯಲ್ಲಿ ಕೇಳಿ ಬರುತ್ತಿರುವ ಮತಾಂತರ ವಿರೋಧಿ ಕಾಯ್ದೆ ಕುರಿತ ಪ್ರಶ್ನೆಯೊಂದಕ್ಕೆ ಕೇಂದ್ರ ಗೃಹ ಸಚಿವಾಲಯ ಉತ್ತರವನ್ನು ನೀಡಿದೆ. ಮತಾಂತರ ವಿರೋಧ ಕಾಯ್ದೆ ತರುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿಲ್ಲ ಎಂಬುದಾಗಿ ಅದು ಹೇಳಿದೆ.

ಮಾತ್ರವಲ್ಲ ಈ ವಿಚಾರದಲ್ಲಿ ಆಯಾ ರಾಜ್ಯಗಳಿಗೆ ನಿರ್ಧಾರವನ್ನು ಬಿಟ್ಟುಬಿಟ್ಟಿದೆ. ಧಾರ್ಮಿಕ ಮತಾಂತರ ಪ್ರಕರಣಗಳ ತಡೆ, ಪತ್ತೆ, ನೋಂದಣಿ, ತನಿಖೆ, ಕಾನೂನುಕ್ರಮ ಇತ್ಯಾದಿಗಳೆಲ್ಲ ಆಯಾ ರಾಜ್ಯ ಸರ್ಕಾರಗಳ ಪ್ರಾಥಮಿಕ ಕಾಳಜಿ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶ ಸರ್ಕಾರಗಳು ಮತಾಂತರ ವಿರೋಧಿ ಕಾನೂನು ತಂದು ವಿವಾದಕ್ಕೀಡಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಇಂಥದ್ದೊಂದು ಪ್ರಶ್ನೆ ಸಂಸತ್ತಿನಲ್ಲಿ ಎದುರಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net