

ತಿರುಪತಿ: ಗಂಡ ಸತ್ತ ನಂತರ ವ್ಯಕ್ತಿಯೊಬ್ಬನೊಂದಿಗೆ ಲಿವ್ ಇನ್ ರಿಲೇಷನ್ಶಿಪ್ ಆರಂಭಿಸಿದ್ದ ಮಹಿಳೆ ದಾರುಣ ಅಂತ್ಯ ಕಂಡಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಮಹಿಳೆಯೊಂದಿಗೆ ಆಕೆಯ ತಾಯಿಯ ಕೊಲೆಯೂ ಆಗಿದ್ದು, ಆಕೆಯ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ.
ಸರಳಾ ಹೆಸರಿನ ಮಹಿಳೆಯ ಗಂಡ ಕೆಲ ವರ್ಷದ ಹಿಂದೆ ತೀರಿಕೊಂಡಿದ್ದ. ತಂಬಲಪಲ್ಲೆಯ ಗೋವಿಂದಾವರಿ ಪಲ್ಲೆ ಗ್ರಾಮದಲ್ಲಿ ಮೂರು ಮಕ್ಕಳು ಮತ್ತು ವಯಸ್ಸಾದ ತಾಯಿಯೊಂದಿಗೆ ಬದುಕುತ್ತಿದ್ದ ಸರಳಾಗೆಸ ಮೌಳಾಲಿ ಹೆಸರಿನ ವ್ಯಕ್ತಿಯ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿದ್ದು, ಇಬ್ಬರು ಲಿವ್ ಇನ್ ರಿಲೇಷನ್ಶಿಪ್ನಲ್ಲಿರುವ ನಿರ್ಧಾರ ಮಾಡಿದ್ದಾರೆ. ಕುಟುಂಬದವರನ್ನು ಒಪ್ಪಿಸಿ, ಸರಳಾ ಯತಿಗಡ್ಡ ಥಂಡಾದಲ್ಲಿರುವ ತನ್ನ ತೋಟದ ಮನೆಯಲ್ಲಿ ಮೌಳಾಲಿ ಜತೆ ಲಿವ್ ಇನ್ ರಿಲೇಷನ್ಶಿಪ್ ಆರಂಭಿಸಿದ್ದಾಳೆ.
ಮೊದ ಮೊದಲು ಸಂಬಂಧ ಚೆನ್ನಾಗಿತ್ತು. ಆದರೆ ಬರು ಬರುತ್ತಾ ಮೌಳಾಲಿಗೆ ಸರಳಾ ಮೇಲೆ ಅನುಮಾನ ಆರಂಭವಾಗಿದೆ. ಸೆಪ್ಟೆಂಬರ್ 29ರಂದು ಆಕೆಯ ಕೊಲೆ ಮಾಡಿ, ದೇಹವನ್ನು ನೀರಿನಲ್ಲಿ ಎಸೆದಿದ್ದಾನೆ. ಮಗಳು ಕಾಣದಿದ್ದನ್ನು ಗಮನಿಸಿದ ತಾಯಿ ಮೌಳಾಲಿಯನ್ನು ಪ್ರಶ್ನಿಸಿದ್ದಾಳೆ. ಸಿಟ್ಟಿನಿಂದ ಆಕೆಯನ್ನೂ ಕೊಲೆ ಮಾಡಿದ ಆತ ಅಕ್ಟೋಬರ್ 1ರಂದು ಆಕೆಯ ದೇಹವನ್ನೂ ನೀರಿಗೆ ಎಸೆದು ಬಂದಿದ್ದಾನೆ. ಅದಾದ ಸರಳಾಳ ಅಪ್ರಾಪ್ತ ಮಗಳನ್ನು ಒಂದೆಡೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಸರಳಾಳ ಪರಿಚಯಸ್ಥ ಮಹಿಳೆಯೊಬ್ಬಳು ಈ ವಿಚಾರವಾಗಿ ಕಳೆದ ವಾರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಇದೀಗ ಪೊಲೀಸ್ ತನಿಖೆ ನಡೆಸಲಾಗುತ್ತಿದ್ದು, ಮೌಳಾಲಿಯನ್ನು ವಶಕ್ಕೆ ಪಡೆಯಲಾಗಿದೆ. (ಏಜೆನ್ಸೀಸ್)