ಹೀಗೂ ಮಾಡ್ತೀರಾ? ದಯವಿಟ್ಟು ನಮ್ಮ ಭಾವನೆಗಳ ಜತೆ ಆಟ ಆಡಬೇಡಿ! ವೈರಲ್ ವಿಡಿಯೋಗೆ ನೆಟ್ಟಿಗರು ಕಿಡಿ

WhatsApp Image 2024-05-13 at 1.27.54 PM
Published on

ಸಾಮಾನ್ಯವಾಗಿ ಜನಸಾಮಾನ್ಯರಿಗೆ ಈ ಬಗೆಬಗೆಯ ತಿಂಡಿ-ತಿನಿಸು ಅಂದ್ರೆ ಬಹಳ ಇಷ್ಟ. ಅದರಲ್ಲೂ ರಸ್ತೆಬದಿ ಮಾಡುವ ವಿಧವಿಧವಾದ ಆಹಾರಗಳು, ಅವರು ಮಾಡುವ ಶೈಲಿ, ವಿಭಿನ್ನತೆಗೆ ಫಿದಾ ಆಗುವ ತಿಂಡಿ ಪ್ರಿಯರು, ಅದೆಷ್ಟೇ ವಿಚಿತ್ರ ಎನಿಸಿದರು ಒಮ್ಮೆಯಾದರು ಪ್ರಯತ್ನಿಸಿ, ನಂತರ ಇತರರಿಗೂ ಟೇಸ್ಟ್​ ಮಾಡುವಂತೆ ಸಲಹೆ ನೀಡುತ್ತಾರೆ. ಆದ್ರೆ, ಇಲ್ಲೊಂದು ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ವೈರಲ್ ಆಗಿದ್ದು, ದೃಶ್ಯ ನೋಡಿದ ನೆಟ್ಟಿಗರು ಮಾತ್ರ ಭಾರೀ ಅಸಮಾಧಾನ ಹೊರಹಾಕಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಿಹಿಯೊಂದಿಗೆ ಖಾರ ಮತ್ತು ಉಳಿಯಿರುವ ಆಹಾರಗಳನ್ನು ಮಿಶ್ರಿಸಿ, ಜನರಿಗೆ ಉಣಬಡಿಸುವ ಆಹಾರ ಮಳಿಗೆಗಳು ನಗರಗಳಲ್ಲಿ ತಲೆಎತ್ತಿವೆ. ಅದೇ ರೀತಿ ಇಲ್ಲೊಬ್ಬರು ಮಹಿಳೆ ತಮ್ಮ ಸ್ಟ್ರೀಟ್​ ಫುಡ್​ ಅಂಗಡಿಗೆ ಬರುವ ಗ್ರಾಹಕರಿಗೆ ಚಾಕೋಲೆಟ್​ ಮತ್ತು ಚೀಸ್​ ಅನ್ನು ಕೇಳಿದ ಆಹಾರಕ್ಕೆಲ್ಲಾ ಹಾಕಿ ಕೊಡುವುದು ಮಾತ್ರವಲ್ಲದೇ, ಮುಂಬೈನ ಹೆಸರುವಾಸಿ ವಡಾ ಪಾವ್​ಗೂ ಸಹ ಚಾಕೋಲೆಟ್​ ಹಾಗೂ ಚೀಸ್ ಹಾಕಿ ಕೊಡುತ್ತಿದ್ದಾರೆ.

ಕೇಳಲು, ನೋಡಲು ವಿಚಿತ್ರ ಎನಿಸಿದರೂ ಇದೇ ಸತ್ಯ. ಮಧ್ಯಪ್ರದೇಶದ ಇಂದೋರ್​ನಲ್ಲಿ ಫುಡ್​ ಸ್ಟಾಲ್ ನಡೆಸುತ್ತಿರುವ ಈ ಮಹಿಳೆ, ಮುಂಬೈನ ಸಾಂಪ್ರದಾಯಿಕ ವಡಾಪಾವ್​ ತಯಾರಿಕೆಯ ಶೈಲಿಯನ್ನೇ ಬದಲಿಸಿದ್ದು, ಅದನ್ನು "ಚಾಕೋಲೆಟ್ ಚೀಸ್​ ವಡಾ ಪಾವ್" ಎಂದು ಹೆಸರಿಸಿ, ಮಾರಾಟ ಮಾಡುತ್ತಿದ್ದಾರೆ. ಇದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ​ಇದೇನಿದು ವಿಚಿತ್ರ? ಯಾಕೆ ನಮ್ಮ ಭಾವನೆಗಳಿಗೆ ಧಕ್ಕೆ ತರುತ್ತೀರಾ ಎಂದು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಡಾ ಪಾವ್​ ಅನ್ನು ರೌಂಡ್​ ಬನ್​​ನಿಂದ ಮಾಡುತ್ತಿರುವ ಮಹಿಳೆ ಅದಕ್ಕೆ ಚೀಸ್​ ತುರಿದು, ಚಾಕೋಲೆಟ್​ ಹಾಕಿಕೊಡುತ್ತಾರೆ. ಇದರ ಜತೆಗೆ ಸಿಹಿ ಸಿಹಿ ಬಿಸ್ಕತ್ ಅನ್ನು ಕಡ್ಲೇಹಿಟ್ಟಿನ ಜತೆಗೆ ಬೆರಸಿ, ಬಾಣಲಿಯಲ್ಲಿ ಕರಿದು ಬಜ್ಜಿಯಾಗಿ ನೀಡ್ತಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net