ಮೊದಲ ಬಾರಿಗೆ ಮಗಳ ಫೋಟೋ ಹಂಚಿಕೊಂಡ ನಟಿ; ಬಿಪಾಶಾ ಮಗಳು ಹೇಗಿದ್ದಾಳೆ ನೋಡಿ..

Bipasha Basu Karan Singh Grover share daughter Devis face for the FIRST time See adorable pics
Published on

ಮುಂಬೈ: ಬಾಲಿವುಡ್​​ ನಟಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ತಮ್ಮ ಮಗಳು ದೇವಿಯ ಮುಖವನ್ನು ಜಗತ್ತಿಗೆ ಬಹಿರಂಗಪಡಿಸಿದ್ದಾರೆ. ಈ ಫೋಟೋ ಸೋಶಿಯಲ್​​ ವೈರಲ್​ ಆಗಿದೆ.

ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಹೆಣ್ಣು ಮಗುವಿನ ಪೋಷಕರು. ದಂಪತಿ ತಮ್ಮ ಮೊದಲ ಮಗುವನ್ನು 2022 ನವೆಂಬರ್ 12ರಂದು ಸ್ವಾಗತಿಸಿದರು. ಆಕೆಗೆ ದೇವಿ ಎಂದು ಹೆಸರಿಟ್ಟರು. ಅಂದಿನಿಂದ, ತಮ್ಮ ಹೆಣ್ಣು ಮಗುವಿನೊಂದಿಗೆ ಸಿಹಿ ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಬಿಪಾಶಾ ಮತ್ತು ಕರಣ್ ತಮ್ಮ ಮಗುವಿನ ದೇವಿ ಮುಖವನ್ನು ಬಹಿರಂಗಪಡಿಸಿದ್ದಾರೆ. ಅವರು ಪುಟ್ಟ ಮಗುವಿನ ಎರಡು ಚಿತ್ರಗಳನ್ನು ಇನ್​​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ.

ಬಿಪಾಶಾ ಬಸು ಅವರು ತಮ್ಮ ಮಗಳ 2 ಫೋಟೋಗಳನ್ನು ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ದೇವಿ ಪಿಂಕ್‌ ಬಣ್ಣದ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು,+ ತುಂಬಾ ಕ್ಯೂಟ್‌ ಆಗಿ ನಗುತ್ತಿದೆ. ಬಿಪಾಶಾ ಬಸು ತಮ್ಮ ಮಗಳ ಫೋಟೋಗಳನ್ನು ಹಂಚಿಕೊಂಡು ಹಲೋ ವರ್ಲ್ಡ್, ನಾನು ದೇವಿ. #ದೇವಿಬಾಸುಸಿಂಗ್ ಗ್ರೋವರ್ ಎಂದು ಕ್ಯಾಪ್ಷನ್‌ ನೀಡಿದ್ದಾರೆ.

ಕರಣ್-ಬಿಪಾಶಾ ಒಂದು ವರ್ಷದ ಡೇಟಿಂಗ್ ನಂತರ 2016 ರಲ್ಲಿ ಇಬ್ಬರೂ ವಿವಾಹವಾದರು. ಮದುವೆಯಾದ 6 ವರ್ಷಗಳ ನಂತರ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿ ಮಗಳು ಪೋಷಕರಾದರು ಮತ್ತು ಮಗಳಿಗೆ ದೇವಿ ಎಂದು ಹೆಸರಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net