ರಸ್ತೆಯಲ್ಲಿ ನಾಲ್ವರ ದುರಂತ ಸಾವು, ಚೆಲ್ಲಾಪಿಲ್ಲಿಯಾಗಿ ಬಿದಿದ್ದ ಶವಗಳನ್ನು ನೋಡಿ ಬೆಚ್ಚಿಬಿದ್ದ ಜನ!

death
Published on

ಕಲಬುರಗಿ: ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದ ಬಳಿ ಮಂಗಳವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ. ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೃತದೇಹಗಳ ದೃಶ್ಯ ಬೆಚ್ಚಿಬೀಳಿಸುವಂತಿತ್ತು.

ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಲಾಡ್ಲಾಪುರ ಗ್ರಾಮದ ಮರೆಪ್ಪ(50), ಬಸಪ್ಪ(32), ಅಲ್ಲೂರು ಗ್ರಾಮದ ದೇವೇಂದ್ರ(50) ಮತ್ತು ಮಲ್ಲಪ್ಪ ರಾಯಪ್ಪ (35) ಮೃತ ಪಟ್ಟಿದ್ದಾರೆ. ಹನಮಂತ ಮತ್ತು ಕಾಶಿನಾಥ ಎಂಬುವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತಕ್ಕೀಡಾದ ಬೈಕ್​ಗಳಲ್ಲಿ ತಲಾ ಮೂವರು ಸವಾರಿ ಮಾಡುತ್ತಿದ್ದರು. ಎರಡೂ ಬೈಕ್​ಗಳು ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ನಜ್ಜುಗುಜ್ಜಾಗಿವೆ.

ಬೈಕ್​ನಲ್ಲಿ ಕುಳಿತ್ತಿದ್ದವರ ಪೈಕಿ ಮೂವರು ಸ್ಥಳದಲ್ಲೇ ದುರಂತ ಅಂತ್ಯಕಂಡಿದ್ದಾರೆ. ರಕ್ತಸಿಕ್ತ ಮೃತದೇಹಗಳ ದೃಶ್ಯ ಬೆಚ್ಚಿಬೀಳಿಸುವಂತಿತ್ತು. ಮತ್ತೊಬ್ಬ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net