

ಮುಂಬೈ: ಬಸ್ ಕಂಡಕ್ಟರ್ವೊಬ್ಬ ಪರಸ್ತ್ರೀಯರೊಂದಿಗೆ ಸೆಕ್ಸ್ ಮಾಡಿ ಆ ದೃಶ್ಯವನ್ನು ತಾನೇ ಚಿತ್ರೀಕರಿಸಿಕೊಂಡು ಪೋರ್ನ್ ವೆಬ್ಸೈಟ್ಗೆ ಅಪ್ಲೌಡ್ ಮಾಡಿ ಸಿಕ್ಕಿಬಿದ್ದಿದ್ದಾನೆ.
ಇಲ್ಲಿನ ಥಾಣೆ ಮುನ್ಸಿಪಲ್ ಟ್ರಾನ್ಸ್ಪೋರ್ಟ್(ಟಿಎಂಟಿ)ನ ಬಸ್ ಕಂಡಕ್ಟರ್ ಆಗಿದ್ದ ಮಿಲಿಂದ್ ಜೇಡ್(32), ಮಹಿಳೆಯರಿಗೆ ಸರ್ಕಾರಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ. ಅವರೊಂದಿಗಿನ ಲೈಂಗಿಕ ಕ್ರಿಯೆಯ ದೃಶ್ಯವನ್ನು ತನ್ನ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ಹೀಗೆ ಮಾಡಿಟ್ಟುಕೊಂಡಿದ್ದ ಬರೋಬ್ಬರಿ 65 ಸೆಕ್ಸ್ ವಿಡಿಯೋವನ್ನು ಅಶ್ಲೀಲ ವೆಬ್‍ಸೈಟ್‍ಗಳಿಗೆ ಮಾರಾಟ ಮಾಡಿದ್ದ.
ಬಸ್ ಕಂಡಕ್ಟರ್ ಮಿಲಿಂದ್ ಜೇಡ್ನ ದುಷ್ಕೃತ್ಯ ಬಯಲಾಗಿದ್ದು ಈತನ ಪತ್ನಿಯ ಸ್ನೇಹಿತರಿಂದ! ಹೌದು, ಈತ ತನ್ನ ಪತ್ನಿಯ ಸ್ನೇಹಿತರನ್ನೂ ಬಿಟ್ಟಿರಲಿಲ್ಲ. ಪತ್ನಿಯ ಸ್ನೇಹಿತೆಯರಿಬ್ಬರು ಎಂಎ, ಬಿಎಡ್ ಓದುತ್ತಿದ್ದರು. ಇವರೊಂದಿಗೆ ಸ್ನೇಹ ಬೆಳೆಸಿದ್ದ ಮಿಲಿಂದ್, ಅಕ್ರಮ ಸಂಬಂಧದ ಕೂಪಕ್ಕೆ ಬೀಳಿಸಿಕೊಂಡಿದ್ದ. ಈ ಕೃತ್ಯದ ವಿಡಿಯೋವನ್ನು ಅಶ್ಲೀಲ ವೆಬ್ಸೈಟ್ಗೆ ಮಾರಾಟ ಮಾಡಿದ್ದ. ಈ ಪೈಕಿ ಓರ್ವ ಸಂತ್ರಸ್ತೆಯ ಸಂಬಂಧಿಯೊಬ್ಬರು ವಿಡಿಯೋ ಹರಿದಾಡುತ್ತಿರುವುದನ್ನು ಗಮನಿಸಿ ಆಕೆಯ ಗಮನಕ್ಕೆ ತಂದಾಗ ಕೃತ್ಯ ಬೆಳಕಿಗೆ ಬಂದಿದೆ.
ಆರೋಪಿ ಮಿಲಿಂದ್ ವಿರುದ್ಧ ಜುಲೈನಲ್ಲಿ ಎಫ್ಐಆರ್ ದಾಖಲಾಗುತ್ತಿದ್ದಂತೆ ಮನೆಯಿಂದ ಪರಾರಿಯಾಗಿದ್ದ. ಇತ್ತೀಚಿಗೆ ಪತ್ನಿಯನ್ನು ನೋಡಲು ಮನೆಗೆ ಆರೋಪಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಶ್ಲೀಲ ವೆಬ್‍ಸೈಟ್‍ಗಳಿಗೆ ಸೆಕ್ಸ್ ವಿಡಿಯೋಗಳನ್ನು ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಸಂಪಾದಿಸಿದ್ದ ಎಂದು ತನಿಖೆಯಲ್ಲಿ ಗೊತ್ತಾಗಿದೆ. ಮಿಲಿಂದ್ನಿಂದ ವಂಚನೆಗೊಳಗಾದ ಮಹಿಳೆಯರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.