ಇನ್ನೇನು ಮನೆಗೆ ಹೋಗಬೇಕು ಅನ್ನುವಷ್ಟರಲ್ಲಿ ತಾಯಿ-ಮಗನ ಪ್ರಾಣ ಹೊತ್ತೊಯ್ದ ಜವರಾಯ!

Suicide
Published on

ಹಾವೇರಿ: ಬೈಕ್​ನಲ್ಲಿ ಮನೆಗೆ ಬರುತ್ತಿದ್ದ ತಾಯಿ-ಮಗ ಇಬ್ಬರೂ ಮಾರ್ಗಮಧ್ಯೆ ದುರಂತ ಅಂತ್ಯಕಂಡಿದ್ದು, ಸಾವಿನಲ್ಲೂ ಒಂದಾದ ಘಟನೆ ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿ ಬಳಿ ಸಂಭವಿಸಿದೆ.

ಚನ್ನವ್ವ ಪಂಚಾಕ್ಷರಿ ಕುಂದುರು(42) ಮತ್ತು ಪುತ್ರ ಬಸವರಾಜ್ ಕುಂದುರು(24) ಮೃತರು. ಅಮ್ಮ-ಮಗ ಮಂಗಳವಾರ ಸಂಜೆ ಕಂಚಿನೆಗಳೂರು ಗ್ರಾಮದಿಂದ ಸ್ವಗ್ರಾಮಕ್ಕೆ ಬೈಕ್​ನಲ್ಲಿ ತೆರಳುತ್ತಿದ್ದರು. ಇನ್ನೇನು ಊರು ಸಿಕ್ಕಿತು, ಮನೆಗೆ ಹೋಗಬೇಕು ಎನ್ನುವಷ್ಟರಲ್ಲಿ ಅಲ್ಲಿನ ಕಾಲುವೆ ಬಳಿ ಕಾಯುತ್ತಿದ್ದ ಜವರಾಯ ಇವರಿಬ್ಬರ ಪ್ರಾಣ ಹೊತ್ತೊಯ್ದಿದ್ದಾನೆ.

ಮಾರ್ಗಮಧ್ಯೆ ಧರ್ಮಾ ಕಾಲುವೆಗೆ ಬೈಕ್ ಸಮೇತ ಬಿದ್ದ ತಾಯಿ-ಮಗ ಅಲ್ಲೇ ಮೃತಪಟ್ಟಿದ್ದು, ಮೃತದೇಹಗಳು ಬುಧವಾರ ಪತ್ತೆಯಾಗಿವೆ. ಕಾಲುವೆ ಬಳಿಯ ತಿರುವನ್ನು ಗಮನಿಸದ ಪರಿಣಾಮ ಬೈಕ್ ಸಮೇತ ಕಾಲುವೆಗೆ ಬಿದ್ದಿದ್ದರು. ಕಾಲುವೆಗೆ ಬಿದ್ದು ನಾಪತ್ತೆಯಾಗಿದ್ದ ಚನ್ನವ್ವ ಮತ್ತು ಬಸವರಾಜ್​ಗಾಗಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ತಾಯಿ-ಮಗನ ಶವಗಳನ್ನು ಕಾಲುವೆಯಿಂದ ಹೊರ ತೆಗೆಯುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net