

ಪಟನಾ: ರಾಜ್ಯ ಬಿಜೆಪಿ ವಕ್ತಾರನಿಗೆ ಗುಂಡಿಕ್ಕಿ ಕೊಲೆ ಮಾಡುವ ಪ್ರಯತ್ನ ಮಾಡಿರುವ ಘಟನೆ ಬಿಹಾರದ ಮುಂಗರ್ ಜಿಲ್ಲೆಯಲ್ಲಿ ನಡೆದಿದೆ. ಬಿಜೆಪಿ ನಾಯಕ ಅಜ್ಫರ್ ಶಮ್ಸಿ ಗಂಭೀರವಾಗಿ ಗಾಯಗೊಂಡಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿರುವುದಾಗಿ ಎಎನ್ಐ ವರದಿ ಮಾಡಿದೆ.
ಅಜ್ಫರ್ ಶಮ್ಸಿ ಬಿಜೆಪಿ ವಕ್ತಾರರಾಗಿರುವುದರ ಜತೆ ಕಾಲೇಜೊಂದರಲ್ಲಿ ಪ್ರೊಫೆಸರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಹೋದ್ಯೋಗಿಯೊಂದಿಗೆ ಕಲಹವಿತ್ತು ಎನ್ನಲಾಗಿದೆ. ಬುಧವಾರದಂದು ಅವರು ಕಾಲೇಜಿಗೆ ತೆರಳುವ ಸಮಯದಲ್ಲಿ ಜಮಾಲ್‌ಪುರ ಪ್ರದೇಶದ ಜಮಾಲ್‌ಪುರ ಕಾಲೇಜು ಬಳಿ 2-3 ಜನರು ಅವರ ಮೇಲೆ ದಾಳಿ ನಡೆಸಿದ್ದು, ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಪ್ರಕರಣ ಸಂಬಂಧ ಅವರ ಸಹೋದ್ಯೋಗಿಯನ್ನು ಬಂಧಿಸಲಾಗಿದೆ.
ಅಜ್ಫರ್ ಶಮ್ಸಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೇಳಿಕೆಯನ್ನು ದಾಖಲಿಸಲಾಗಿದೆ. ಅವರ ಸಹೋದ್ಯೋಗಿಯನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ. (ಏಜೆನ್ಸೀಸ್)