14 ವರ್ಷದ ಬಾಲಕಿಗೆ ಮದ್ಯಪಾನ ಮಾಡಿಸಿ ಸೆಕ್ಸ್​ ಮಾಡಿದ ಫುಟ್​ಬಾಲ್​ ಆಟಗಾರ!

footbal
Published on

ಲಂಡನ್​: ಅಪ್ರಾಪ್ತ ಬಾಲಕಿಗೆ ಮದ್ಯಪಾನ ಮಾಡಿಸಿ, ಸೆಕ್ಸ್​ ಮಾಡಿದ್ದ ಫುಟ್​ಬಾಲ್​ ಮಾಜಿ ಆಟಗಾರನಿಗೆ ಬ್ರಿಟನ್​ ನ್ಯಾಯಾಲಯ ಮೂರುವರೆ ವರ್ಷಗಳ ಜೈಲುಶಿಕ್ಷೆ ವಿಧಿಸಿದೆ. ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿರುವುದಾಗಿ ತಿಳಿಸಲಾಗಿದೆ.

ಬ್ರಿಟನ್​ ಫುಟ್​ಬಾಲ್​ ಮಾಜಿ ಆಟಗಾರ ಟೈರೆಲ್ ರಾಬಿನ್ಸನ್ (23) ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ. ಅವರು 2018ರ ಆಗಸ್ಟ್​ 13ರಂದು 14 ವರ್ಷದ ಬಾಲಕಿಗೆ ವೋಡ್ಕಾ ಕುಡಿಸಿದ್ದರು. ನಂತರ ಆಕೆಯೊಂದಿಗೆ ಸೆಕ್ಸ್​ ಹೊಂದಿದ್ದರು. ಆಕೆಯ ನಗ್ನ ಚಿತ್ರಗಳನ್ನು ತೆಗೆದು ಅದನ್ನು ಸ್ನಾಪ್​ಚಾಟ್​ ಆ್ಯಪ್​ನಲ್ಲಿ ಇತರರೊಂದಿಗೆ ಹಂಚಿಕೊಂಡಿದ್ದರು. ಈ ವಿಚಾರ ವೈರಲ್​ ಆಗುತ್ತಿದ್ದಂತೆಯೇ ಪೊಲೀಸರು ಟೈರೆಲ್​ನನ್ನು ಬಂಧಿಸಿದ್ದರು.

ಕಳೆದ ವರ್ಷ ಜನವರಿಯಲ್ಲಿ ಟೈರೆಲ್​ ನ್ಯಾಯಾಲಯಕ್ಕೆ ತಪ್ಪೊಪ್ಪಿಗೆ ಪತ್ರ ಸಲ್ಲಿಸಿದ್ದರು. ಬಾಲಕಿಯ ಫೋಟೋಗಳನ್ನು ತಾನೇ ಹಾಕಿದ್ದಾಗಿ ಒಪ್ಪಿಕೊಂಡು ಪತ್ರ ಸಲ್ಲಿಸಲಾಗಿತ್ತು. ಅದಾದ ನಂತರ ಇದೀಗ ಬಾಲಕಿಗೆ ಮದ್ಯ ಕುಡಿಸಿ ಸೆಕ್ಸ್​ ಮಾಡಿದ್ದನ್ನೂ ಒಪ್ಪಿಕೊಂಡಿದ್ದಾರೆ. ಮಂಗಳವಾರದಂದು ಅಂತಿಮ ವಿಚಾರಣೆ ನಡೆಸಿರುವ ನ್ಯಾಯಾಲಯ ಅಪರಾಧಿಗೆ ಮೂರುವರೆ ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net