

ಬೆಂಗಳೂರು: ಸ್ಫರ್ಧಿಗಳ ನಡುವಿನ ಕಿತ್ತಾಟದಿಂದಲೇ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್-11 (Bigg Boss Season-11) ಸ್ವರ್ಗ-ನರಕ ಥೀಮ್ನಲ್ಲಿ (Hell-heaven) ನಡೆಯುತ್ತಿದ್ದು, ಜಗದೀಶ್ ಅವರ ಕೃಪೆಯಿಂದ ಈಗಾಗಲೇ ವಿವಾದಗಳ ಸರಮಾಲೆಯನ್ನೇ ಹುಟ್ಟುಹಾಕಿದೆ. ಬಿಗ್‌ಬಾಸ್ ಆರಂಭವಾಗಿ ಐದು ದಿನಗಳಾಗಿದ್ದು, ನರಕನಿವಾಸಿಗಳ ಪರಿಶ್ರಮದಿಂದ ಸ್ವರ್ಗದಲ್ಲಿರುವ ಸ್ಫರ್ಧಿಯೊಬ್ಬರು ಈ ಆವೃತ್ತಿಯ ಮೊದಲ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
ಶುಕ್ರವಾರ (ಅಕ್ಟೋಬರ್ 04) ಸಂಚಿಕೆಯಲ್ಲಿ ಈ ಮನೆಗೆ ಕ್ಯಾಪ್ಟನ್ ಅವಶ್ಯಕತೆ ಇದೆ. ಮೊಟ್ಟ ಮೊದಲ ಕ್ಯಾಪ್ಟನ್ ಆಯ್ಕೆ ಮಾಡುವ ಸಮಯ ಬಂದಿದೆ. ಮೊದಲ ಕ್ಯಾಪ್ಟನ್ಸಿ ಓಟದಲ್ಲಿ 6 ಸ್ವರ್ಗನಿವಾಸಿಗಳಿಗಷ್ಟೇ ಅವಕಾಶ. ಸ್ವರ್ಗನಿವಾಸಿಗಳೇ ಪರಸ್ಪರ ಚರ್ಚಿಸಿ, 6 ಹೆಸರುಗಳನ್ನು ಒಮ್ಮತದಿಂದ ತಿಳಿಸಿ ಎಂದು ಬಿಗ್‌ಬಾಸ್ ಘೋಷಿಸಿದರು. ಕ್ಯಾಪ್ಟನ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಮಯದಲ್ಲಿ ಆಯ್ಕೆ ಮಾಡುವ ಸಂದರ್ಭದಲ್ಲಿ ಸ್ವರ್ಗನಿವಾಸಿಗಳು ಹಾಗೂ ಜಗದೀಶ್ ನಡುವೆ ಮಾತಿನ ಚಕಮಕಿಯಾಗಿದ್ದು, ಅವರು ಅಶ್ಲೀಲವಾಗಿ ಮಾತನಾಡಿದ್ದಾರೆ.
ಕ್ಯಾಪ್ಟನ್ಸಿ ರೇಸ್ನಲ್ಲಿ ಭವ್ಯಾ ಗೌಡ, ಹಂಸ, ತ್ರಿವಿಕ್ರಮ್, ಉಗ್ರಂ ಮಂಜು, ಯಮುನಾ ಮತ್ತು ಐಶ್ವರ್ಯಾ ಶಿಂಧೋಗಿ ಇದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ಅನ್ನು 6 ಸ್ವರ್ಗನಿವಾಸಿಗಳ ಪರವಾಗಿ 6 ನರಕನಿವಾಸಿಗಳು ಆಡಬೇಕಿತ್ತು. ಯಾವ ನರಕವಾಸಿ, ಯಾವ ಸ್ವರ್ಗನಿವಾಸಿ ಪರವಾಗಿ ಆಡಬೇಕು ಎಂಬುದನ್ನ ಬಿಡ್ಡಿಂಗ್ ಮೂಲಕ ನಿರ್ಧರಿಸಬೇಕಿತ್ತು. ಸ್ವರ್ಗನಿವಾಸಿಗಳು ಎಸ್/ನೋ ಮೂಲಕ ತಮ್ಮ ಆಯ್ಕೆಯನ್ನು ಹೇಳಿದರು. ಅದರಂತೆ ಉಗ್ರಂ ಮಂಜು ಪರವಾಗಿ ಮೋಕ್ಷಿತಾ ಪೈ, ಐಶ್ವರ್ಯಾ ಸಿಂಧೋಗಿ ಪರವಾಗಿ ಚೈತ್ರಾ ಕುಂದಾಪುರ, ಯಮುನಾ ಪರವಾಗಿ ಅನುಷಾ ರೈ, ಹಂಸ ಪರವಾಗಿ ರಂಜಿತ್, ತ್ರಿವಿಕ್ರಮ್ ಪರವಾಗಿ ಗೋಲ್ಡ್ ಸುರೇಶ್, ಭವ್ಯಾ ಗೌಡ ಪರವಾಗಿ ಶಿಶಿರ್ ಶಾಸ್ತ್ರಿ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಆಡಿದ್ದಾರೆ.
ಬಾಲ್ ಬ್ಯಾಲೆನ್ಸ್ ಮಾಡುವ ಆಟದಲ್ಲಿ ಹಂಸ ಪರ ಆಡಿದ ರಂಜಿತ್ ಗೆದ್ದರು. ಈ ಹಿನ್ನೆಲೆಯಲ್ಲಿ ಹಂಸ ಅವರು ಬಿಗ್‌ಬಾಸ್ 11 ರ ಮೊದಲ ಕ್ಯಾಪ್ಟನ್ ಆಗಿ ಹೊರ ಹೊಮ್ಮಿದರು. ಮತ್ತು ಮುಂದಿನ ವಾರಕ್ಕೆ ಇಮ್ಯೂನಿಟಿ ಪಡೆದಿದ್ದಾರೆ. ಮೊದಲ ವಾರ ಸ್ವರ್ಗದಲ್ಲಿರುವ ಯಮುನಾ ಶ್ರೀನಿಧಿ, ಲಾಯರ್ ಜಗದೀಶ್, ಗೌತಮಿ ಜಾಧವ್, ಭವ್ಯಾ ಗೌಡ ಮತ್ತು ಹಂಸ ನಾಮಿನೇಷನ್‌ನಲ್ಲಿದ್ದರೆ, ನರಕದಲ್ಲಿರುವ ಚೈತ್ರಾ ಕುಂದಾಪುರ, ಶಿಶಿರ್ ಶಾಸ್ತ್ರಿ, ಮೋಕ್ಷಿತಾ ಪೈ ಹಾಗೂ ಮಾನಸಾ ಸಂತೋಷ್ ನಾಮಿನೇಟ್ ಆಗಿದ್ದಾರೆ.