ದೊಡ್ಮನೆಯಿಂದ ಈ ವಾರ ಹೊರಬೀಳುವ ಸ್ಫರ್ಧಿ ಯಾರು? Elimination ವಿಚಾರವಾಗಿ ಬಿಗ್​ಟ್ವಿಸ್ಟ್​​​ ನೀಡಿದ Bigg Boss

BBKS 11
Published on

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್ (Bigg Boss) 11ನೇ ಆವೃತ್ತಿಯ​ ಆರಂಭವಾಗಿ ಆರು ವಾರಗಳು ಕಳೆದಿದ್ದು, ಕಿರಿಕ್​ನಿಂದಲೇ ಹೆಚ್ಚು ಸದ್ದು ಮಾಡಿದೆ. ಬಿಗ್​ಬಾಸ್​ (Bigg Boss) ಮನೆಯಿಂದ ಈಗಾಗಲೇ ಯಮುನಾ, ರಂಜಿತ್​, ಜಗದೀಶ್​, ಹಂಸಾ ಹಾಗೂ ಮಾನಸ ಎಲಿಮಿನೇಟ್​ ಆಗಿದ್ದು, ಈ ವಾರವೂ ಕೂಡ ಎಲಿಮಿನೇಷನ್​ (Elimination) ನಡೆಯಲಿದೆ. ಆದರೆ ಎಲಿಮಿನೇಷನ್​ ವಿಚಾರಕ್ಕೆ ಸಂಬಂಧಿಸಿದಂತೆ ಬಿಗ್​ಬಾಸ್​ (Bigg Boss) ಟ್ವಿಸ್ಟ್​ ಒಂದನ್ನು ನೀಡಿದ್ದಾರೆ.

ರಂಜಿತ್​ ಹಾಗೂ ಜಗದೀಶ್​ ಮನೆಯಿಂದ ನೇರವಾಗಿ ಎಲಿಮಿನೇಟ್​ ಆದ ಬಳಿಕ ಗಾಯಕ ಹನುಮಂತು ವೈಲ್ಡ್​ಕಾರ್ಡ್​ ಸ್ಫರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಆ ಬಳಿಕ ನಡೆದ ಟಾಸ್ಕ್​ಗಳಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಹನುಮಂತು ಅವರು ಎರಡೆರಡು ಬಾರಿ ಕ್ಯಾಪ್ಟನ್​ ಆಗಿದ್ದು, ಮನೆಯಲ್ಲಿರುವ ಇತರೆ ಸ್ಫರ್ಧಿಗಳಿಗೆ ಟಕ್ಕರ್​ ಕೊಟ್ಟಿದ್ದಾರೆ. ದಿನ ಕಳೆದಂತೆ ಹನುಮಂತು ಸ್ಟ್ರಾಂಗ್ ಸ್ಪರ್ಧಿಯಾಗಿ ಹೊರಹೊಮ್ಮುತ್ತಿದ್ದು, ಇದರ ನಡುವೆಯೇ ಎಲಿಮಿನೇಷನ್​ಗೆ ಸಂಬಂಧಿಸಿದಂತೆ ಬಿಗ್​ಬಾಸ್​ (Bigg Boss) ಒಂದು ಟ್ವಿಸ್ಟ್​ ಕೊಟ್ಟಿದ್ದಾರೆ.

ಬಿಗ್​ಬಾಸ್​ (Bigg Boss) ಶುರುವಾಗಿ ಐದನೇ ವಾರ ಅಂದರೆ ಲಾಸ್ಟ್​ ವೀಕ್​ ದೊಡ್ಮನೆಯಿಂದ ಮಾನಸ ಎಲಿಮಿನೇಟ್​ ಆಗಿದ್ದರು. ಈ ವಾರ ಸ್ಫರ್ಧಿಗಳನ್ನು ನಾಮಿನೇಟ್​ ಮಾಡಲಾಗಿತ್ತಾದರು ವೋಟಿಂಗ್​​ ಲೈನ್ಸ್​ಅನ್ನು ತೆರೆದಿರಲಿಲ್ಲ. ಇದೀಗ ತಿಳಿದು ಬಂದಿರುವ ಮಾಹಿತಿ ಪ್ರಕಾರ ಈ ವಾರ ಎಲಿಮಿನೇಷನ್​ ಇರುವುದಿಲ್ಲ ಎಂದು ವರದಿಯಾಗಿದೆ. ಮುಂದಿನ ವಾರ ಮಿಡಲ್ ವೀಕ್ ಎಲಿಮಿನೇಷನ್ ಆ ನಂತರ ವಾರಾಂತ್ಯದ ಎಲಿಮಿನೇಷನ್ ಇರಲಿದೆ ಎಂದು ಹೇಳಲಾಗುತ್ತಿದೆ. ಎಲಿಮಿನೇಷನ್ ಕುರಿತು ಭಾನುವಾರದ (ನ.10) ಸಂಚಿಕೆ ನಂತರ ಸ್ಪಷ್ಟ ಚಿತ್ರಣ ಹರೊಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net