ಪುತ್ತೂರು: 2023ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ (Congress Party) ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಮನೆ ಒಡತಿಗೆ 2000 ರೂಪಾಯಿ ನೀಡುವ ಗೃಹಲಕ್ಷ್ಮಿ (Gruhalakshmi) ಯೋಜನೆ ಸಹ ಒಂದಾಗಿದ್ದು, ಇದರಿಂದ ಬರುವ ಹಣದಿಂದ ಬಹಳಷ್ಟು ಮಹಿಳೆಯರು ಬೇಕಾದಷ್ಟು ಅನುಕೂಲ ಪಡೆದುಕೊಂಡಿದ್ದಾರೆ.
ಅದರಂತೆ ಈ ಹಿಂದೆ ಮಹಿಳೆಯರು ಗ್ಯಾರಂಟಿ ಯೋಜನೆಯಿಂದ (Guarantee Scheme) ಬಂದ ಹಣವನ್ನು ಕೂಡಿಟ್ಟು ಮೊಬೈಲ್, ಕಣ್ಣಿನ ಶಸ್ತ್ರಚಿಕಿತ್ಸೆ, ಫ್ರಿಡ್ಜ್, ಹೋಳಿಗೆ ಊಟ, ಸೊಸೆಗೆ ಫ್ಯಾನ್ಸಿ ಸ್ಟೋರ್, ಮಗನಿಗೆ ಬೈಕ್, ಲೈಬ್ರರಿ ಕಟ್ಟಿಸುವ ಮೂಲಕ ಸುದ್ದಿಯಾಗಿದ್ದರು. ಇದೀಗ ಗ್ಯಾರಂಟಿ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಟು ಮಹಿಳೆಯೊಬ್ಬರು ತಮ್ಮ ಪತಿಗೆ ಹೊಸ ಸ್ಕೂಟರ್ (Scooter) ಕೊಡಿಸುವ ಮೂಲಕ ಸುದ್ದಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಕೋಡಿಂಬಾಡಿ ಸಮೀಪದ ಶಾಂತಿನಗರ ನಿವಾಸಿ ಮಿಸ್ರಿಯಾ ಎಂಬುವವರು ತಮ್ಮ ಪತಿ ಸಲೀಂ ಅವರಿಗೆ ತಮ್ಮ ಖಾತೆಗೆ ಜಮೆಯಾಗಿರುವ ಗೃಹಲಕ್ಷ್ಮಿ ಹಣದಿಂದ ಪತಿಗೆ ಹೊಸ ಸ್ಕೂಟರ್ ಕೊಡಿಸಿದ್ದಾರೆ. ವೃತ್ತಿಯಲ್ಲಿ ಪೇಂಟರ್ ಆಗಿರುವ ಸಲೀಂ ಕೆಲಸಕ್ಕೆ ಸಹಕಾರಿಯಾಗಲೆಂದು ಪತ್ನಿ ಮಿಸ್ರಿಯಾ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ತಮ್ಮ ಪತಿಗೆ ಸ್ಕೂಟರ್ ಕೊಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸಲೀಂ ಅವರು ಸ್ಕೂಟರ್ ಮೇಲೆ ‘ಆರ್ಥಿಕ ನೆರವು ಗೃಹಲಕ್ಷ್ಮಿ’ ಎಂಬ ಫಲಕವನ್ನು ಹಾಕಿದ್ದು, ಫಲಕದಲ್ಲಿ ಸಿಎಂ ಸಿದ್ದರಾಮಯ್ಯ. ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಪುತ್ತೂರು ಶಾಸಕ ಅಶೋಕ್ ರೈ ಅವರ ಫೋಟೋವನ್ನು ಹಾಕಿದ್ದಾರೆ. ಗೃಹಲಕ್ಷ್ಮಿ ಹಣದಿಂದ ನನ್ನ ಬಾಳು ಬೆಳಗಿದೆ ಎಂದು ಹೇಳಿ ಫಲಾನುಭವಿ ಮಿಸ್ರಿಯಾ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ನನ್ನ ಪ್ರಕಾರ ಮೆಗಾ ಹರಾಜಿನಲ್ಲಿ ಈತ RCB ಪಾಲಿಗೆ ದುಬಾರಿಯಾಗಬಹುದು; ABD ಹೇಳಿದ ಆಟಗಾರ ಯಾರು ಗೊತ್ತಾ?
700 ಕೋಟಿ ರೂ ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ, ಇಲ್ಲಾಂದ್ರೆ ನೀವು…: ಪ್ರಧಾನಿ ಮೋದಿಗೆ CM Siddaramaiah ಸವಾಲು