

ನವದೆಹಲಿ: ದೆಹಲಿಯಲ್ಲಿ ನಡೆದ ಆಮ್ ಆದ್ಮಿ ಪಕ್ಷದ(AAP) ಪಾದಯಾತ್ರೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್(Bhagwant Mann) ಜನರನ್ನು ಉದ್ದೇಶಿಸಿ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
2024 ರಲ್ಲಿ ಬಿಜೆಪಿ ಪಕ್ಷ ಗೆಲುವನ್ನು ಸಾಧಿಸಿದರೆ ಮುಂದೆ ಚುನಾವಣೆಗಳು ನಡೆಯುವುದಿಲ್ಲ! ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ನರೇಂದ್ರ ಪುಟಿನ್ ಆಗಲಿದ್ದಾರೆ. 140 ಕೋಟಿ ಭಾರತೀಯರು ಭಾರತವನ್ನು ಉಳಿಸಲು ನಿರ್ಧರಿಸಿದರೆ ಮಾತ್ರ ಭಾರತ ಉಳಿಯುತ್ತದೆ ಎಂದು ಹೇಳಿದ್ದಾರೆ.
ಸೇವಾ ವಿಷಯಗಳಲ್ಲಿ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯನ್ನು ಪ್ರಶ್ನಿಸಲು ದೆಹಲಿಯ ಆಡಳಿತ ಪಕ್ಷವು ಈ ರ್ಯಾಲಿಯನ್ನು ಆಯೋಜಿಸಿತು. ಸುಗ್ರೀವಾಜ್ಞೆಯನ್ನು ಹಿಂಪಡೆಯಲು ಕೋರಿರುವ ಎಎಪಿ ಪಕ್ಷವು, ಕೇಂದ್ರ ಸರ್ಕಾರವು ತನ್ನ ನಿಲುವನ್ನು ಮರುಪರಿಶೀಲಿಸಬೇಕು ಮತ್ತು ದೆಹಲಿಯ ಜನರ ಕಲ್ಯಾಣಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದೆ,(ಏಜೆನ್ಸೀಸ್).