ಕಾರ್ಯಕರ್ತರ ಸಂಭ್ರಮಾಚರಣೆ ವೇಳೆ ಪಟಾಕಿ ಸಿಡಿದು ಸಚಿವ ಕೆ.ಎನ್. ರಾಜಣ್ಣ ಕಣ್ಣಿಗೆ ಗಾಯ

KN Rajanna
Published on

ಕುಣಿಗಲ್: ಕಾರ್ಯಕರ್ತರ ಸಂಭ್ರಮಾಚರಣೆ ವೇಳೆ ಪಟಾಕಿ ಸಿಡಿದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಕಣ್ಣಿಗೆ ಗಾಯವಾಗಿರುವ ಘಟನೆ ಪಟ್ಟದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಇಂದು ಬೆಳಗ್ಗೆ ನಡೆದಿದೆ.

ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ.ಎನ್. ರಾಜಣ್ಣ 'ಶಕ್ತಿ ಯೋಜನೆ'ಗೆ ಚಾಲನೆ ನೀಡಲು ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ಹಾಸನಕ್ಕೆ ತೆರಳುತ್ತಿದ್ದರು. ಈ ವೇಳೆ ಅಭಿಮಾನಿಗಳು, ಹಿತೈಷಿಗಳು, ಕಾಂಗ್ರೆಸ್ ಕಾರ್ಯಕರ್ತರು ಕುಣಿಗಲ್ ಪಟ್ಟಣದ ಹುಚ್ಚಮಾಸ್ತಿಗೌಡ ಸರ್ಕಲ್ ಬಳಿ ಕಾರನ್ನು ತಡೆದು ಹೂ ಮಾಲೆ ‌ಹಾಕಿ ಅಭಿನಂದಿಸಿದರು. ಇದೇ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ವೇಳೆ ಅಚಾನಕ್ ಆಗಿ ಸಚಿವ ರಾಜಣ್ಣ ತಮ್ಮ ಕನ್ನಡಕ ತೆಗೆದ ಸಂದರ್ಭದಲ್ಲಿ ಪಟಾಕಿ ಸಿಡಿದಿದೆ. ಬೆಂಕಿಯ ಕಿಡಿ ಬಲಗಣ್ಣಿಗೆ ತಾಗಿ ಗಾಯವಾಗಿದೆ. ಕೂಡಲೇ ಸಚಿವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ನೇತ್ರ ತಜ್ಞ ಡಾ.ರವಿಕುಮಾರ್ ಅವರಿಂದ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಅವರು ಹಾಸನಕ್ಕೆ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net