ನಾವು ಯುವಕರನ್ನು ಸೋಂಬೇರಿ ಮಾಡಲು ತಯಾರಿಲ್ಲ; ಯುವನಿಧಿ ಯೋಜನೆ ಬಗ್ಗೆ ಡಿಕೆಶಿ ಹೇಳಿದ್ದಿಷ್ಟು...

DK Shivakumar
Published on

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು 2022-23ರಲ್ಲಿ ತೇರ್ಗಡೆಯಾದ ಪದವೀಧರ ನಿರುದ್ಯೋಗಿಗಳಿಗೆ ಹಾಗೂ ಡಿಪ್ಲೊಮ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡುವ ಸಲುವಾಗಿ 'ಯುವ ನಿಧಿ ಯೋಜನೆ'ಯನ್ನು ಜಾರಿಗಳಿಸಿದೆ. ಈಗಾಗಲೇ ಸರ್ಕಾರವು ತಾತ್ವಿಕ ಅನುಮೋದನೆ ನೀಡಿದೆ. ಈ ಯೋಜನೆಯಿಂದಾಗಿ ಯುವಜನತೆ ಸೋಮಾರಿ ಆಗುತ್ತದೆ ಎನ್ನುವಂತಹ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ಶಕ್ತಿ ಯೋಜನೆಯನ್ನು ಜಾರಿಗೊಳಿಸಿ ಉದ್ಘಾಟನೆ ಮಾಡಿರುವ ಕಾಂಗ್ರೆಸ್ ಪಕ್ಷದ ಸರ್ಕಾರ, ಎಲ್ಲಾ ರಾಜ್ಯದ ಮಹಿಳೆಯರಿಗೂ ಕರ್ನಾಟಕದ ತುಂಬ ಉಚಿತವಾಗಿ ಓಡಾಡಲು ವ್ಯವಸ್ಥೆ ಮಾಡಿಕೊಟ್ಟಿದೆ. ಇದೇ ರೀತಿ ಪದವೀಧರ ಹಾಗೂ ಡಿಪ್ಲೋಮಾ ಹೊಂದಿರುವ ಯುವಕರಿಗೆ ಯುವನಿಧಿಯನ್ನು ನೀಡುವ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆಶಿ, “ಯುವಕರನ್ನ ಸೋಂಬೇರಿ ಮಾಡಲು ನಾವು ತಯಾರಿಲ್ಲ. 24 ತಿಂಗಳಲ್ಲಿ ಅವನು ಒಂದು ದಾರಿ ಹುಡುಕಬೇಕು. ಛಲ ಇರಬೇಕು. ಅವನು ಉದ್ಯೋಗ ಹುಡುಕಿಕೊಳ್ಳಬೇಕು. ಸ್ಕೀಲ್ ಡೆವಲ್ಪಂಟ್ ಮಾಡಬೇಕು” ಎಂದು ಹೇಳಿದ್ದಾರೆ.

ಇದೇ ವೇಳೆ ಕೌಶಲ್ಯಾಭಿವೃದ್ಧಿ ಯೋಜನೆಯ ತರಬೇತಿಯಲ್ಲಿ ಅಕ್ರಮ ನಡೆದಿದೆ ಎಂದು ಪ್ರಸ್ತಾಪ ಮಾಡಿರುವ ಡಿಕೆ ಶಿವಕುಮಾರ್, “ಕೌಶಲ್ಯಾಭಿವೃದ್ಧಿ ಯೋಜನೆಯ ತರಬೇತಿಯಲ್ಲಿ ಹಿಂದೆ ಸಾಕಷ್ಟು ಅವ್ಯವಹಾರ ಆಗಿದೆ. ಒಂದೊಂದು ಅಕೌಂಟ್ ಗೆ 50 ಸಾವಿರ, 30 ಸಾವಿರ ಹೋಗಿದೆ” ಎಂದು ಹೇಳಿದ್ದಾರೆ. ಆದರೆ ಅವರು ಈಗ ಆ ಬಗ್ಗೆ ಗಮನ ಹರಿಸದೇ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net