

ದೆಹಲಿ: ಕೆಲವು ತಿಂಗಳುಗಳ ಹಿಂದೆ ಎಲ್ಲ ವಯೋಮಾನದವರಿಗೆ ಪ್ರಿಯವಾಗಿದ್ದ BGMI ಗೇಮ್ನ್ನು ಕಳೆದ ವರ್ಷ ಜುಲೈನಲ್ಲಿ ಸರ್ಕಾರದ ಆದೇಶದ ಮೆರೆಗೆ ಗೂಗಲ್ ಪ್ಲೇ ಮತ್ತು ಆಪಲ್ ಆಪ್ ಸ್ಟೋರ್‌ನಿಂದ ತೆಗೆದು ಹಾಕಲಾಗಿತ್ತು. ಸದ್ಯ, ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್ ಭಾರತಕ್ಕೆ ಮರುಪ್ರವೇಶಿಸಿದೆ.
ಈ ಗೇಮ್ ಹಲವು ಬದಲಾವಣೆಗಳೊಂದಿಗೆ ಮರಳಿದ್ದು, ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಹಳೆಯ ಖಾತೆಗೆ ನೇರ ಪ್ರವೇಶ ಪಡೆಯಬಹುದಾಗಿದೆ. ಈ ಆಟವನ್ನು ಆಡಲು ಸಮಯದ ಮಿತಿಯನ್ನು ನಿಗದಿಪಡಿಸಲಾಗಿದ್ದು, 18 ವರ್ಷದೊಳಗಿನವರು ದಿನಕ್ಕೆ 3 ಗಂಟೆ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರು ದಿನಕ್ಕೆ 6 ಗಂಟೆ ಆಡಬಹುದಾಗಿದೆ.
ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ(BGMI) ಗೇಮ್ ಅಪ್ಲಿಕೇಶನ್‌ನ ತಯಾರಕರಾದ ಕ್ರಾಫ್ಟಾನ್ ತನ್ನ ಜನಪ್ರಿಯ ಆಟವಾದ BGMI ಮತ್ತೆ ಕಾರ್ಯಾಚರಣೆಯನ್ನು ಪುನರಾರಂಭಿಸಲು ಭಾರತೀಯ ಅಧಿಕಾರಿಗಳಿಂದ ಅನುಮೋದನೆಯನ್ನು ಪಡೆದುಕೊಂಡಿದೆ.(ಏಜೆನ್ಸೀಸ್)