ಟಿಕ್​ಟಾಕ್​ ವಿಡಿಯೋ ನೋಡಿ ಮೊಟ್ಟೆ ಬೇಯಿಸುವ ಯತ್ನ: ಸ್ಫೋಟಗೊಂಡ ಮೊಟ್ಟೆ, ವಿರೂಪವಾಯ್ತು ಮುಖ!

Egg cooking lapse
Published on

ನವದೆಹಲಿ: ವೈರಲ್​ ಟಿಕ್​ಟಾಕ್​ ವಿಡಿಯೋ ನೋಡಿ ಮೊಟ್ಟೆ ಬೇಯಿಸಲು ಪ್ರಯತ್ನಿಸಿದ ಮಹಿಳೆಯೊಬ್ಬಳು ಭಯಾನಕ ಅನುಭವವನ್ನು ಬಿಚ್ಚಿಟ್ಟಿದ್ದಾಳೆ. ಇಂದು ಬಹುತೇಕರು ಅಡುಗೆ ಮಾಡಲು ಜಾಲತಾಣ ಮೊರೆ ಹೋಗಿರುವ ಸಂದರ್ಭದಲ್ಲಿ ಈ ಮಹಿಳೆಗಾದ ಅನುಭವ ಎಲ್ಲರಿಗೂ ಒಂದು ಎಚ್ಚರಿಕೆಯ ಸಂದೇಶವಾಗಿ ಪರಿಣಮಿಸಿದೆ.

ಮೊಟ್ಟೆ ಬೇಯಿಸುವಾಗ ಮೊಟ್ಟೆ ಸ್ಫೋಟಗೊಂಡು 37 ವರ್ಷದ ಶಾಫಿಯಾ ಬಶೀರ್​ ಎಂಬುವರ ಮುಖದ ಚರ್ಮ ಕಿತ್ತು ಬಂದಿದೆ ಎಂದು ಇಂಡಿಪೆಂಡೆಟ್​ ಎಂಬ ಮಾಧ್ಯಮ ವರದಿ ಮಾಡಿದೆ. ಇದೀಗ ಸಂತ್ರಸ್ತ ಮಹಿಳೆ ಜಾಲತಾಣವನ್ನು ನೋಡಿ ಪ್ರಯೋಗ ಮಾಡಲು ಹೋಗಬೇಡಿ ಎಂದು ಎಚ್ಚರಿಸಿದ್ದಾರೆ.

ಮಹಿಳೆ ಮೊಟ್ಟೆಗಳನ್ನು ಕುದಿಯುವ ನೀರಿನಿಂದ ತುಂಬಿದ ಮಗ್​ನಲ್ಲಿ ಹಾಕಿ ನಂತರ ಅದನ್ನು ಮೈಕ್ರೋವೇವ್​ನಲ್ಲಿ ಒಂದೆರಡು ನಿಮಿಷಗಳ ಕಾಲ ಇರಿಸಿದಳು. ಬಳಿಕ ತಣ್ಣನೆಯ ಚಮಚದಿಂದ ಮೊಟ್ಟೆಯನ್ನು ಹೊರ ತೆಗೆದಾಗ ಅದು ಸ್ಫೋಟಗೊಂಡಿದೆ. ಇದರಿಂದ ಆಕೆಯ ಮುಖದ ಬಲಭಾಗ ಸುಟ್ಟಿದೆ. ಇದು ತನ್ನ ಜೀವನದ "ಅತ್ಯಂತ ಅಸಹನೀಯ" ನೋವು ಎಂದು ಸಂತ್ರಸ್ತೆ ಬಶೀರ್ ಹೇಳಿದ್ದಾರೆ.

ಬೇರೆ ಯಾರೂ ಕೂಡ ಈ ರೀತಿಯ ಪ್ರಯತ್ನಕ್ಕೆ ಕೈ ಹಾಕಬೇಡಿ ಎಂದು ಬಶೀರ್​ ಅವರು ಸಲಹೆ ನೀಡಿದ್ದಾರೆ. ಘಟನೆಯ ನಂತರ, ಆಸ್ಪತ್ರೆಯಲ್ಲಿ ತುರ್ತು ವಿಭಾಗಕ್ಕೆ ಭೇಟಿ ಚಿಕಿತ್ಸೆ ಪಡೆಸುಕೊಂಡಿದ್ದಾರೆ. ನನ್ನ ಮುಖವು ಈಗ ವಾಸಿಯಾಗಿದೆ. ಅದೃಷ್ಟವಶಾತ್ ಯಾವುದೇ ಗುರುತುಗಳಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net