ಮದುವೆ ಮನೆಯಿಂದ ಓಡಿಹೋದ ವಧು: ಆಕೆಗಾಗಿ 13 ದಿನ ಕಾದು ಕುಳಿತ ವರ

rajasthan bride
Published on

ಸೈನಾ: ಮದುವೆಯ ದಿನವೇ ಓಡಿಹೋದ ವಧುವಿಗಾಗಿ ಮಂಟಪದಲ್ಲೇ ವರ 13 ದಿನ ಕಾದು ಕುಳಿತ ವಿಚಿತ್ರ ಘಟನೆ ರಾಜಸ್ಥಾನದ ಸೈನಾ ಗ್ರಾಮದಲ್ಲಿ ನಡೆದಿದೆ.

ಸಿರೋಹಿ ಗ್ರಾಮದ ಶ್ರವಣ್ ಕುಮಾರ್ ಹಾಗೂ ಸೈನಾ ಗ್ರಾಮದ ಮನೀಶಾ ಎಂಬ ಯುವತಿಯ ಮದುವೆ ನಿಶ್ಚಯವಾಗಿತ್ತು. ಆದರೆ ಮದುವೆ ದಿನವೇ ಮನೀಶಾ ತನಗೆ ಹೊಟ್ಟೆ ನೋವು, ವಾಕರಿಕೆ ಬರುತ್ತಿದೆ ಎಂದು ನಾಟಕವಾಡಿ ಕೊನೆಗೆ ಮನೆಯ ಹಿಂದಿನ ಬಾಗಿಲಿನಿಂದ ತನ್ನ ಪ್ರಿಯತಮನ ಜತೆಗೆ ಓಡಿಹೋಗಿದ್ದಳು.

ಇತ್ತ ಸುದ್ದಿ ತಿಳಿದ ವರ ಅದೇ ಯುವತಿಯೊಂದಿಗೆ ವಿವಾಹವಾಗುವುದಾಗಿ ಪಟ್ಟು ಹಿಡಿದು ವಧುವಿನ ಮನೆಯಲ್ಲಿನ ಮಂಟಪದಲ್ಲೆ 13 ದಿನ ಕಾದು ಕುಳಿತಿದ್ದನು. ಪರಿಣಾಮವಾಗಿ, ಪೋಲೀಸರ ಮಧ್ಯಪ್ರವೇಶದ ನಂತರ, ಮೇ 15ರಂದು ಯವತಿಯನ್ನು ಪತ್ತೆಹಚ್ಚಿ ಆಕೆಯ ಕುಟುಂಬಕ್ಕೆ ಹಸ್ತಾಂತರಿಸಿ ವಧುವಿನ ಮನೆಯಲ್ಲಿಯೇ ಕಾಯುತ್ತಿದ್ದ ವರನ ಜತೆಗೆ ಮದುವೆಯನ್ನು ಮಾಡಲಾಯಿತು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net