ಸೈನಿಕನ ಹೆಸರಲ್ಲಿ ಯುವತಿಯರು ಸೇರಿ ಅನೇಕರಿಗೆ ವಂಚನೆ: ಸಿಕ್ಕಿಬಿದ್ದ ನಕಲಿ ಯೋಧನ ಕರಾಳ ಮುಖವಿದು!

Fake Yodha
Published on

ಬೆಂಗಳೂರು: ಸೈನಿಕನೆಂದು ನಂಬಿಸಿ ಅನೇಕ ಯುವತಿಯರಿಗೆ ಮದುವೆ ಆಗುವುದಾಗಿ ವಂಚಿಸಿದ್ದಲ್ಲದೆ, ಅನೇಕರ ಬಳಿ ಹಣ ಪಡೆದು ಪಂಗನಾಮ ಹಾಕಿರುವ ನಕಲಿ ಸೈನಿಕನನ್ನು ಬೆಂಗಳೂರಿನ ಸುಬ್ರಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.

ಅಂಜನೇಶ್ ಮಠಪತಿ ಬಂಧಿತ ನಕಲಿ ಸೇನಾಧಿಕಾರಿ. ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆಂದು ನಂಬಿಸಿದ್ದ ಆರೋಪಿ, ತೆರಿಗೆ ಹಾಗೂ ಇತರೆ ವಿನಾಯತಿಯಲ್ಲಿ ಮೊಬೈಲ್ ಮತ್ತು ಕಾರು ಖರೀದಿಸಿ ಕೊಡಿಸೋದಾಗಿ ನೂರಾರು ಮಂದಿಗೆ ನೂರಾರು ಮಂದಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪವಿದೆ.

ಇತ್ತೀಚೆಗೆ ಸುಬ್ರಹ್ಮಣ್ಯನಗರ ನಿವಾಸಿ ನಾಗೇಂದ್ರ ಮತ್ತು ಅವರ ಸಂಬಂಧಿಯೊಬ್ಬರಿಗೆ ಸುಮಾರು 23 ಲಕ್ಷ ರೂ. ಅನ್ನು ಆರೋಪಿ ವಂಚಿಸಿದ್ದಾನೆ. ಹಣ ವಂಚನೆ ಮಾತ್ರವಲ್ಲದೆ, ಮದುವೆ ಆಗುವುದಾಗಿ ನಂಬಿಸಿ ಮೂವರು ಯುವತಿಯರಿಗೂ ವಂಚನೆ ಮಾಡಿದ್ದಾನೆ.

ಸದ್ಯ ಬಂಧಿತನಿಂದ ನಕಲಿ ಪಿಸ್ತೂಲ್, ಸೇನೆಯ ಗುರುತಿನ ಚೀಟಿ ಮತ್ತು ಸಮವಸ್ತ್ರ ಜಪ್ತಿ ಮಾಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net