ಐಪಿಎಲ್​ ಕಮಾಲ್​: ಹೇಗಿದೆ 8 ತಂಡಗಳ ಬಲಾಬಲ? ವೇಳಾಪಟ್ಟಿ ಒಳಗೊಂಡ ಸಂಪೂರ್ಣ ಮಾಹಿತಿ ಇಲ್ಲಿದೆ

IPL
Published on

ಕರೊನಾ ವೈರಸ್ 2ನೇ ಅಲೆ ಜೋರಾಗಿರುವ ನಡುವೆ ವಿಶ್ವದ ಶ್ರೀಮಂತ ಟಿ20 ಲೀಗ್ ಐಪಿಎಲ್ 14ನೇ ಆವೃತ್ತಿಗೆ ವೇದಿಕೆ ಸಜ್ಜಾಗಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಶುಕ್ರವಾರ ಚೆನ್ನೈನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದೊಂದಿಗೆ 52 ದಿನಗಳ ಕ್ರಿಕೆಟ್ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಈ ವರ್ಷ ಭಾರತದಲ್ಲೇ ನಿಗದಿಯಾಗಿರುವ ಟಿ20 ವಿಶ್ವಕಪ್​ಗೆ ಸಿದ್ಧತೆಯ ದೃಷ್ಟಿಯಿಂದಲೂ ಆಟಗಾರರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಭಾರತದಲ್ಲೇ ಟೂರ್ನಿ ಆಯೋಜಿಸಲ್ಪಟ್ಟಿದ್ದರೂ, ಎಲ್ಲ ಪಂದ್ಯಗಳು ತಟಸ್ಥ ತಾಣದಲ್ಲೇ ನಡೆಯಲಿರುವುದರಿಂದ ಈ ಸಲವೂ ಯಾವ ತಂಡಕ್ಕೂ ತವರಿನ ಲಾಭವಿಲ್ಲ. ಇದರಿಂದ ಸ್ಪರ್ಧಾತ್ಮಕತೆ ಹೆಚ್ಚಲಿದೆ.

ಆರ್​ಸಿಬಿ

ಗ್ಲೆನ್ ಮ್ಯಾಕ್ಸ್​ವೆಲ್-ಕೈಲ್ ಜೇಮಿಸನ್ ಸೇರ್ಪಡೆಯಿಂದ ತಂಡ ಬಲಿಷ್ಠವಾಗಿದೆ. ನಾಯಕ ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವುದು ಈ ಬಾರಿಯ ವಿಶೇಷ. ಕೆಲವೊಂದು ಹೊಸತನದೊಂದಿಗೆ ಆರ್​ಸಿಬಿ ಈ ಸಲವಾದರೂ ಕಪ್ ತನ್ನದಾಗಿಸುವ ಹಂಬಲದಲ್ಲಿದೆ. ಬಲಿಷ್ಠ ಬ್ಯಾಟಿಂಗ್ ಪಡೆ; ಮಧ್ಯಮ ಕ್ರಮಾಂಕದಲ್ಲಿ ಎಡಿಬಿ, ಮ್ಯಾಕ್ಸ್​ವೆಲ್ ಬಲ; ಉತ್ತಮ ಸ್ಪಿನ್ ವಿಭಾಗ. ಬೌಲಿಂಗ್ ವಿಭಾಗದ ಅಸ್ಥಿರತೆ; ದಿಢೀರ್ ಕುಸಿತದ ಭೀತಿ ; ದುಬಾರಿಯಾಗುವ ಬೌಲರ್​ಗಳು.

ಟೀಮ್ ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ದೇವದತ್ ಪಡಿಕಲ್, ಮೊಹಮದ್ ಸಿರಾಜ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಪವನ್ ದೇಶಪಾಂಡೆ, ಶಹಬಾಜ್ ಅಹ್ಮದ್, ಆಡಂ ಜಂಪಾ, ಕೇನ್ ರಿಚರ್ಡ್ ಸನ್. ವರ್ಗಾವಣೆ: ಡೇನಿಯಲ್ ಸ್ಯಾಮ್್ಸ (ಡೆಲ್ಲಿಯಿಂದ), ಹರ್ಷಲ್ ಪಟೇಲ್ (ಡೆಲ್ಲಿಯಿಂದ). ಹೊಸ ಸೇರ್ಪಡೆ: ಕೈಲ್ ಜೇಮಿಸನ್, ಗ್ಲೆನ್ ಮ್ಯಾಕ್ಸ್​ವೆಲ್, ಡ್ಯಾನ್ ಕ್ರಿಶ್ಚಿಯನ್, ಸಚಿನ್ ಬೇಬಿ, ರಜತ್ ಪಟಿದಾರ್, ಮೊಹಮದ್ ಅಜರುದ್ದೀನ್, ಸುಯಷ್ ಪ್ರಭುದೇಸಾಯಿ, ಕೆಎಸ್ ಭರತ್, ಫಿನ್ ಅಲೆನ್.

ಸಾಧನೆ: 2008: 7ನೇ ಸ್ಥಾನ ?2009: ರನ್ನರ್​ಅಪ್ ?2010: 3ನೇ ಸ್ಥಾನ ?2011: ರನ್ನರ್​ಅಪ್ ?2012: 5ನೇ ಸ್ಥಾನ ?2013: 5ನೇ ಸ್ಥಾನ ?2014: 7ನೇ ಸ್ಥಾನ ?2015: 3ನೇ ಸ್ಥಾನ ? 2016: ರನ್ನರ್​ಅಪ್ ?2017: 8ನೇ ಸ್ಥಾನ ?2018: 6ನೇ ಸ್ಥಾನ ?2019: 8ನೇ ಸ್ಥಾನ ?2020: 4ನೇ ಸ್ಥಾನ.

ಪಂಜಾಬ್ ಕಿಂಗ್ಸ್

ಕೆಲ ಹೊಸಮುಖಗಳ ಸೇರ್ಪಡೆಯಿಂದ ತಂಡ ಪ್ರಬಲವಾಗಿಯೇ ಇದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಮೊಹಮದ್ ಶಮಿಗೆ ಇತರರಿಂದ ಸೂಕ್ತ ಬೆಂಬಲ ವ್ಯಕ್ತವಾಗುತ್ತಿಲ್ಲ. ಕನ್ನಡಿಗ ಅನಿಲ್ ಕುಂಬ್ಳೆ ಮಾರ್ಗದರ್ಶನದ ತಂಡಕ್ಕೆ ಕನ್ನಡಿಗ

ಕೆಎಲ್ ರಾಹುಲ್ ನಾಯಕನಾಗಿ ಮುಂದುವರಿದಿದ್ದಾರೆ. ಉತ್ತಮ ಬ್ಯಾಟಿಂಗ್ ಪಡೆ; ಆಲ್ರೌಂಡರ್​ಗಳಾದ ಮೊಯಿಸ್ ಹೆನ್ರಿಕ್ಸ್, ಶಾರೂಖ್ ಖಾನ್ ಬಲ; ಬಲಿಷ್ಠ ವೇಗದ ಬೌಲಿಂಗ್. ಉತ್ತಮ ಸ್ಪಿನ್ನರ್​ಗಳ ಕೊರತೆ; ವೇಗದ ವಿಭಾಗದಲ್ಲಿ ಶಮಿ ಹೊರತುಪಡಿಸಿ ಭಾರತದ ಬೌಲರ್​ಗಳಿಲ್ಲ; ಸ್ಪಿನ್ ವಿಭಾಗದಲ್ಲಿ ಅನುಭವಿಗಳಿಲ್ಲ. ಟೀಮ್ ಕೆಎಲ್ ರಾಹುಲ್ (ನಾಯಕ), ಅರ್ಷದೀಪ್ ಸಿಂಗ್, ಕ್ರಿಸ್ ಗೇಲ್, ದರ್ಶನ್ ನಲ್ಕಂಡೆ, ಹರ್​ಪ್ರೀತ್ ಬ್ರಾರ್, ಮಂದೀಪ್ ಸಿಂಗ್, ಮಯಾಂಕ್ ಅಗರ್ವಾಲ್, ಮೊಹಮದ್ ಶಮಿ, ಎಂ. ಅಶ್ವಿನ್, ನಿಕೋಲಸ್ ಪೂರನ್, ಸರ್ಫ್ರಾಜ್ ಖಾನ್, ದೀಪಕ್ ಹೂಡ, ಇಶಾನ್ ಪೊರೆಲ್, ರವಿ ಬಿಷ್ಣೋಯಿ, ಕ್ರಿಸ್ ಜೋರ್ಡನ್, ಪ್ರಭ್​ಸಿಮ್ರಾನ್ ಸಿಂಗ್.

ಹೊಸ ಸೇರ್ಪಡೆ: ಜೇ ರಿಚರ್ಡ್​ಸನ್, ರಿಲಿ ಮೆರಿಡಿತ್, ಶಾರುಖ್ ಖಾನ್, ಮೋಯ್ಸೆಸ್ ಹೆನ್ರಿಕ್ಸ್, ಡೇವಿಡ್ ಮಲಾನ್, ಫ್ಯಾಬಿಯನ್ ಅಲೆನ್, ಜಲಜ್ ಸಕ್ಸೇನಾ, ಸೌರಭ್ ಕುಮಾರ್, ಉತ್ಕರ್ಷ್ ಸಿಂಗ್.

ಸಾಧನೆ: ?2008: 3ನೇ ಸ್ಥಾನ ?2009: 5ನೇ ಸ್ಥಾನ ?2010: 8ನೇ ಸ್ಥಾನ ?2011: 5ನೇ ಸ್ಥಾನ ?2012: 6ನೇ ಸ್ಥಾನ ?2013: 6ನೇ ಸ್ಥಾನ ?2014: ರನ್ನರ್​ಅಪ್ ?2015: 8ನೇ ಸ್ಥಾನ ?2016: 8ನೇ ಸ್ಥಾನ ?2017: 5ನೇ ಸ್ಥಾನ ?2018: 7ನೇ ಸ್ಥಾನ ?2019: 6ನೇ ಸ್ಥಾನ ?2020: 6ನೇ ಸ್ಥಾನ.

ಡೆಲ್ಲಿ ಕ್ಯಾಪಿಟಲ್ಸ್

ಕಳೆದ 6 ತಿಂಗಳಿಂದ ಭರ್ಜರಿ ಫಾಮರ್್​ನಲ್ಲಿರುವ ರಿಷಭ್ ಪಂತ್​ಗೆ ಈ ಬಾರಿ ನಾಯಕತ್ವ ಒಲಿದಿದೆ. ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಪಂತ್ ತಂಡ ಮುನ್ನಡೆಸಲಿದ್ದಾರೆ. ಕಳೆದ ಬಾರಿ ಫೈನಲ್ ಪ್ರವೇಶಿಸಿದ್ದ ಡೆಲ್ಲಿ ಈ ಬಾರಿ

ಇನ್ನೊಂದು ಹೆಜ್ಜೆ ಮುಂದೆ ಸಾಗುವ ಹುರುಪಿನಲ್ಲಿದೆ. ರಿಷಭ್ ಪಂತ್, ಪೃಥ್ವಿ ಷಾ ಉತ್ತಮ ಫಾಮ್ರ್; ಕಗಿಸೊ ರಬಾಡ ಪ್ರಮುಖ ಅಸ್ತ್ರ; ಸ್ಟೀವನ್ ಸ್ಮಿತ್ ಸೇರ್ಪಡೆ. ಪಂತ್ ಮೇಲೆ ಹೆಚ್ಚಿದ ಒತ್ತಡ; ರಬಾಡ-ನೋಕಿಯಾ ಮೇಲೆ ಅವಲಂಬನೆ; ಸಮರ್ಥ ಬದಲಿ ಆಟಗಾರರ ಕೊರತೆ. ಟೀಮ್ ರಿಷಭ್ ಪಂತ್ (ನಾಯಕ), ಅಜಿಂಕ್ಯ ರಹಾನೆ, ಅಮಿತ್ ಮಿಶ್ರಾ, ಆವೇಶ್ ಖಾನ್, ಅಕ್ಷರ್ ಪಟೇಲ್, ಇಶಾಂತ್ ಶರ್ಮ, ಕಗಿಸೊ ರಬಾಡ, ಪೃಥ್ವಿ ಷಾ, ಆರ್. ಅಶ್ವಿನ್, ಶಿಖರ್ ಧವನ್, ಶಿಮ್ರೋನ್ ಹೆಟ್ಮೆಯರ್, ಮಾರ್ಕಸ್ ಸ್ಟೋಯಿನಿಸ್, ಲಲಿತ್ ಯಾದವ್, ಆನ್ರಿಚ್ ನೋಕಿಯಾ, ಪ್ರವೀಣ್ ದುಬೆ, ಕ್ರಿಸ್ ವೋಕ್ಸ್.

ಹೊಸ ಸೇರ್ಪಡೆ: ಟಾಮ್ ಕರ›ನ್, ಸ್ಟೀವನ್ ಸ್ಮಿತ್, ಸ್ಯಾಮ್ ಬಿಲ್ಲಿಂಗ್ಸ್, ಉಮೇಶ್ ಯಾದವ್, ರಿಪಾಲ್ ಪಟೇಲ್, ವಿಷ್ಣು ವಿನೋದ್, ಲುಕ್​ವುನ್ ಹುಸೇನ್ ಮೆರಿವಾಲಾ, ಎಂ. ಸಿದ್ಧಾರ್ಥ್.

ಸಾಧನೆ: ?2008: 4ನೇ ಸ್ಥಾನ ?2009: 3ನೇ ಸ್ಥಾನ ?2010: 5ನೇ ಸ್ಥಾನ ?2011: 10ನೇ ಸ್ಥಾನ ?2012: 3ನೇ ಸ್ಥಾನ ?2013: 9ನೇ ಸ್ಥಾನ ?2014: 8ನೇ ಸ್ಥಾನ ?2015: 7ನೇ ಸ್ಥಾನ ?2016: 6ನೇ ಸ್ಥಾನ ?2017: 6ನೇ ಸ್ಥಾನ ?2018: 8ನೇ ಸ್ಥಾನ ?2019: 3ನೇ ಸ್ಥಾನ ?2020: ರನ್ನರ್​ಅಪ್.

ರಾಜಸ್ಥಾನ ರಾಯಲ್ಸ್

ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಸಹಿತ ಇಂಗ್ಲೆಂಡ್ ಆಟಗಾರರಿಂದಲೇ ಕೂಡಿರುವ ರಾಯಲ್ಸ್

ತಂಡ ಎರಡು ವಿಭಾಗದಲ್ಲೂ ಬಲಿಷ್ಠವಾಗಿದೆ. ಆದರೆ, ವಿದೇಶಿ ಆಟಗಾರರ ಸೇವೆಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ತಂಡಕ್ಕೆ ಭಾರತೀಯ ಸಂಜು ಸ್ಯಾಮ್ಸನ್ ಸಾರಥ್ಯವಿದೆ. ವಿದೇಶಿ ಆಟಗಾರರ ಬಲ; ಬಟ್ಲರ್-ಬೆನ್ ಸ್ಟೋಕ್ಸ್ ಆರಂಭಿಕ ಜೋಡಿ; ಕ್ರಿಸ್ ಮಾರಿಸ್ ಸೇರ್ಪಡೆ. ವಿದೇಶಿಗರ ಮೇಲೆ ಅವಲಂಬನೆ; ಭಾರತದ ಸ್ಟಾರ್ ಆಟಗಾರರಿಲ್ಲ; ಸ್ಯಾಮ್ಸನ್ ಅನನುಭವಿ ನಾಯಕತ್ವ. ಟೀಮ್ ಸಂಜು ಸ್ಯಾಮ್ಸನ್ (ನಾಯಕ), ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಜೋಸ್ ಬಟ್ಲರ್, ಮಹಿಪಾಲ್ ಲೊಮ್ರೊರ್, ಮನನ್ ವೊಹ್ರಾ, ಮಯಾಂಕ್ ಮಾರ್ಕಂಡೆ, ರಾಹುಲ್ ತೆವಾಟಿಯ, ರಿಯಾನ್ ಪರಾಗ್, ಶ್ರೇಯಸ್ ಗೋಪಾಲ್, ಜಯದೇವ್ ಉನಾದ್ಕತ್, ಯಶಸ್ವಿ ಜೈಸ್ವಾಲ್, ಅನುಜ್ ರಾವತ್, ಕಾರ್ತಿಕ್ ತ್ಯಾಗಿ, ಡೇವಿಡ್ ಮಿಲ್ಲರ್, ಆಂಡ್ರೊ್ಯೕ ಟೈ.

ಹೊಸ ಸೇರ್ಪಡೆ: ಕ್ರಿಸ್ ಮಾರಿಸ್, ಶಿವಂ ದುಬೆ, ಚೇತನ್ ಸಕಾರಿಯ, ಮುಸ್ತಾಫಿಜುರ್ ರೆಹಮಾನ್, ಲಿಯಾಮ್ ಲಿವಿಂಗ್​ಸ್ಟೋನ್, ಕೆಸಿ ಕಾರ್ಯಪ್ಪ, ಆಕಾಶ್ ಸಿಂಗ್, ಕುಲದೀಪ್ ಯಾದವ್.

ಸಾಧನೆ: ?2008: ಚಾಂಪಿಯನ್ ?2009: 6ನೇ ಸ್ಥಾನ ?2010: 7ನೇ ಸ್ಥಾನ ?2011: 6ನೇ ಸ್ಥಾನ ?2012: 7ನೇ ಸ್ಥಾನ ?2013: 3ನೇ ಸ್ಥಾನ ?2014: 5ನೇ ಸ್ಥಾನ ?2015: 4ನೇ ಸ್ಥಾನ ?2018: 4ನೇ ಸ್ಥಾನ ?2019: 7ನೇ ಸ್ಥಾನ ?2020: 8ನೇ ಸ್ಥಾನ.

ಚೆನ್ನೈ ಸೂಪರ್ಕಿಂಗ್ಸ್

ವೈಯಕ್ತಿಕ ಕಾರಣದಿಂದ ಕಳೆದ ಆವೃತ್ತಿಯಲ್ಲಿ ಹೊರಗುಳಿದಿದ್ದ ಸುರೇಶ್ ರೈನಾ ವಾಪಸಾಗಿರುವುದು ತಂಡದ ವಿಶ್ವಾಸ

ಹೆಚ್ಚಿಸಿದೆ. ಮೂರು ಬಾರಿಯ ಚಾಂಪಿಯನ್ ಸಿಎಸ್​ಕೆ ತಂಡ, ಕಳೆದ ಆವೃತ್ತಿಯಲ್ಲಿ ಹೀನಾಯ ನಿರ್ವಹಣೆಯಿಂದ ಪ್ಲೇಆಫ್ ಹಂತಕ್ಕೇರಲು ವಿಫಲವಾಗಿತ್ತು. ಎಲ್ಲ ತಂಡಗಳಿಗಿಂತ ಮೊದಲೇ ಅಭ್ಯಾಸ ಆರಂಭಿಸಿದ ಸಿಎಸ್​ಕೆ ಹೊಸಹುರುಪಿನೊಂದಿಗೆ ಲೀಗ್​ಗೆ ಸಜ್ಜಾಗಿದೆ. ಅನುಭವಿಗಳ ತಂಡ; ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲು ಕರಗತ; ಧೋನಿ ನಾಯಕತ್ವವೇ ಸ್ಪೂರ್ತಿ. ಕಡೇ ಕ್ಷಣದಲ್ಲಿ ಜೋಸ್ ಹ್ಯಾಸಲ್​ವುಡ್ ಅಲಭ್ಯ; ಕಡೇ 3 ತಿಂಗಳಿಂದ ಜಡೇಜಾ ಕ್ರಿಕೆಟ್​ನಿಂದ ದೂರ; ತಟಸ್ಥ ಸ್ಥಳಗಳಲ್ಲಿ ಸ್ಪಿನ್ ಅಸ್ತ್ರ ವರದಾನವಲ್ಲ. ಟೀಮ್ ಎಂಎಸ್ ಧೋನಿ (ನಾಯಕ), ಸುರೇಶ್ ರೈನಾ, ಅಂಬಟಿ ರಾಯುಡು, ಕೆಎಂ ಆಸಿಫ್, ದೀಪಕ್ ಚಹರ್, ಡ್ವೇನ್ ಬ್ರಾವೊ, ಫಾಫ್ ಡು ಪ್ಲೆಸಿಸ್, ಇಮ್ರಾನ್ ತಾಹಿರ್, ಎನ್. ಜಗದೀಶನ್, ಕರ್ಣ್ ಶರ್ಮ, ಲುಂಗಿ ಎನ್​ಗಿಡಿ, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ಋತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಸ್ಯಾಮ್ ಕರ›ನ್, ಸಾಯಿ ಕಿಶೋರ್. ವರ್ಗಾವಣೆ: ರಾಬಿನ್ ಉತ್ತಪ್ಪ (ರಾಜಸ್ಥಾನದಿಂದ).

ಹೊಸ ಸೇರ್ಪಡೆ: ಕೆ. ಗೌತಮ್ ಮೊಯಿನ್ ಅಲಿ, ಚೇತೇಶ್ವರ ಪೂಜಾರ, ಭಗತ್ ವರ್ಮ, ಹರಿ ನಿಶಾಂತ್, ಹರಿಶಂಕರ್ ರೆಡ್ಡಿ.

ಸಾಧನೆ: ?2008: ರನ್ನರ್​ಅಪ್ ?2009: 4ನೇ ಸ್ಥಾನ ?2010: ಚಾಂಪಿಯನ್ ?2011: ಚಾಂಪಿಯನ್ ?2012: ರನ್ನರ್​ಅಪ್ ?2013: ರನ್ನರ್​ಅಪ್ ?2014: 3ನೇ ಸ್ಥಾನ ?2015: ರನ್ನರ್​ಅಪ್ ?2018: ಚಾಂಪಿಯನ್ ?2019: ರನ್ನರ್​ಅಪ್ ?2020: 7ನೇ ಸ್ಥಾನ.

ಸನ್​ರೈಸರ್ಸ್ ಹೈದರಾಬಾದ್

ಲೀಗ್​ನಲ್ಲೇ ತುಂಬ ಸ್ಥಿರತೆ ಹೊಂದಿರುವ ತಂಡ ಸ್​ರೈಸರ್ಸ್. ಬಹುತೇಕ ಹಿಂದಿನ ಆವೃತ್ತಿಯಲ್ಲಿ ಆಡಿದ

ಆಟಗಾರರನ್ನೇ ಉಳಿಸಿಕೊಂಡಿದ್ದು, ಬ್ಯಾಕ್​ಅಪ್​ಗಾಗಿ ಕೆಲವೊಂದು ಹೊಸ ಆಟಗಾರರನ್ನು ಕೊಂಡುಕೊಂಡಿದೆ. ರನ್​ಹೊಳೆಯನ್ನೇ ಹರಿಸುವ ಆರಂಭಿಕ ಜೋಡಿ; ಫಾಮರ್್​ನಲ್ಲಿರುವ ಜೇಸನ್ ರಾಯ್ ಸೇರ್ಪಡೆ; ಭುವಿ, ರಶೀದ್, ಟಿ.ನಟರಾಜನ್ ಒಳಗೊಂಡ ಬಲಿಷ್ಠ ಬೌಲಿಂಗ್ ಪಡೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಕೊರತೆ; ಆರಂಭಿಕರು ವಿಫಲರಾದರೆ ಒತ್ತಡ. ಟೀಮ್ ಡೇವಿಡ್ ವಾರ್ನರ್ (ನಾಯಕ), ಅಭಿಷೇಕ್ ಶರ್ಮ, ಬಸಿಲ್ ಥಂಪಿ, ಭುವನೇಶ್ವರ್, ಜಾನಿ ಬೇರ್​ಸ್ಟೋ, ಕೇನ್ ವಿಲಿಯಮ್ಸನ್, ಮನೀಷ್ ಪಾಂಡೆ, ಮೊಹಮದ್ ನಬಿ, ರಶೀದ್ ಖಾನ್, ಸಂದೀಪ್ ಶರ್ಮ, ಶಾಬಾಜ್ ನದೀಂ, ಶ್ರೀವತ್ಸ ಗೋಸ್ವಾಮಿ, ಸಿದ್ಧಾರ್ಥ್ ಕೌಲ್, ಖಲೀಲ್ ಅಹ್ಮದ್, ಟಿ. ನಟರಾಜನ್, ವಿಜಯ್ ಶಂಕರ್, ವೃದ್ಧಿಮಾನ್ ಸಾಹ, ವಿರಾಟ್ ಸಿಂಗ್, ಪ್ರಿಯಂ ಗಾರ್ಗ್, ಜೇಸನ್ ಹೋಲ್ಡರ್, ಅಬ್ದುಲ್ ಸಮಾದ್.

ಹೊಸ ಸೇರ್ಪಡೆ: ಕೇದಾರ್ ಜಾಧವ್, ಮುಜೀಬ್ ಜದ್ರಾನ್, ಜೆ. ಸುಚಿತ್, ಜೇಸನ್ ರಾಯ್.

ಸಾಧನೆ: ?2013: 4ನೇ ಸ್ಥಾನ ?2014: 6ನೇ ಸ್ಥಾನ ?2015: 6ನೇ ಸ್ಥಾನ ?2016: ಚಾಂಪಿಯನ್ ?2017: 4ನೇ ಸ್ಥಾನ ?2018: ರನ್ನರ್​ಅಪ್ ?2019: 4ನೇ ಸ್ಥಾನ ?2020: 3ನೇ ಸ್ಥಾನ.

ಮುಂಬೈ ಇಂಡಿಯನ್ಸ್

5 ಬಾರಿ ಚಾಂಪಿಯನ್​ಪಟ್ಟ ಅಲಂಕರಿಸಿರುವ ಮುಂಬೈ ಇಂಡಿಯನ್ಸ್ ಈ ಬಾರಿ ಹ್ಯಾಟ್ರಿಕ್ ಸಾಧಿಸುವ ಛಲದಲ್ಲಿದೆ.

ಸರ್ವ ವಿಭಾಗದಲ್ಲೂ ಹಾಲಿ ಚಾಂಪಿಯನ್ ತಂಡ ಬಲಿಷ್ಠವಾಗಿದೆ. ಆದರೆ, ತಂಡಕ್ಕೆ ಸ್ಪಿನ್ ವಿಭಾಗದಲ್ಲಿ ಕೊರತೆ ಮುಂದುವರಿದಿದೆ. ಅನುಭವಿ ಪೀಯುಷ್ ಚಾವ್ಲಾ ಮೇಲೆ ಹೆಚ್ಚು ಅವಲಂಬನೆ ಇದೆ.

ಉತ್ತಮ ಬೆಂಚ್ ಸ್ಟ್ರೆಂತ್; ಉತ್ತಮ ಆರಂಭಿಕರು; ಉತ್ತಮ ಬೌಲಿಂಗ್ ಪಡೆ. ತಜ್ಞ ಸ್ಪಿನ್ ಬೌಲರ್ ಕೊರತೆ; ಬೌಲಿಂಗ್​ನಲ್ಲಿ ಫಾಮ್ರ್ ಕೊರತೆ ಎದುರಿಸುತ್ತಿರುವ ಪಾಂಡ್ಯ ಸಹೋದರರು. ಟೀಮ್ ರೋಹಿತ್ ಶರ್ಮ (ನಾಯಕ), ಆದಿತ್ಯ ತಾರೆ, ಅನ್ಮೋಲ್​ಪ್ರೀತ್ ಸಿಂಗ್, ಅನುಕೂಲ್ ರಾಯ್, ಧವಳ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜಸ್​ಪ್ರೀತ್ ಬುಮ್ರಾ, ಜಯಂತ್ ಯಾದವ್, ಕೈರಾನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ಕ್ವಿಂಟನ್ ಡಿಕಾಕ್, ರಾಹುಲ್ ಚಹರ್, ಸೂರ್ಯಕುಮಾರ್ ಯಾದವ್, ಟ್ರೆಂಟ್ ಬೌಲ್ಟ್, ಕ್ರಿಸ್ ಲ್ಯಾನ್, ಸೌರಭ್ ತಿವಾರಿ, ಮೊಹ್ಸಿನ್ ಖಾನ್.

ಹೊಸ ಸೇರ್ಪಡೆ: ನಾಥನ್ ಕೌಲ್ಟರ್-ನಿಲ್, ಆಡಂ ಮಿಲ್ನೆ, ಪೀಯುಷ್ ಚಾವ್ಲ, ಜೇಮ್್ಸ ನೀಶಾಮ್ ಯದ್ವೀರ್ ಚರಕ್, ಮಾಕೋ ಜಾನ್ಸೆನ್, ಅರ್ಜುನ್ ತೆಂಡುಲ್ಕರ್.

ಸಾಧನೆ: ?2008: 5ನೇ ಸ್ಥಾನ ?2009: 7ನೇ ಸ್ಥಾನ ?2010: ರನ್ನರ್​ಅಪ್ ?2011: 3ನೇ ಸ್ಥಾನ ?2012: 4ನೇ ಸ್ಥಾನ ? 2013: ಚಾಂಪಿಯನ್ ?2014: 4ನೇ ಸ್ಥಾನ ?2015: ಚಾಂಪಿಯನ್ ?2016: 5ನೇ ಸ್ಥಾನ ?2017: ಚಾಂಪಿಯನ್ ?2018: 5ನೇ ಸ್ಥಾನ ?2019: ಚಾಂಪಿಯನ್ ?2020: ಚಾಂಪಿಯನ್.

ಕೋಲ್ಕತ ನೈಟ್​ರೈಡರ್ಸ್

ಎರಡು ಬಾರಿಯ ಚಾಂಪಿಯನ್ ಕೋಲ್ಕತ ನೈಟ್​ರೈಡರ್ಸ್ ತಂಡ ಗಂಭೀರ್ ಸಾರಥ್ಯದಲ್ಲಿ ಮಾಡಿದ್ದ ಮ್ಯಾಜಿಕ್

ಪುನರಾವರ್ತಿಸಲು ಸಿದ್ಧವಾಗಿದೆ. ಕಳೆದ ಆವೃತ್ತಿಯಲ್ಲಿ ತಂಡದ ಸಂಯೋಜನೆಯಲ್ಲಿ ಎಡವಿ ನಿರಾಸೆ ಅನುಭವಿಸಿತ್ತು.

ಇಂಗ್ಲೆಂಡ್​ನ ವಿಶ್ವಕಪ್ ವಿಜೇತ ಇವೊಯಿನ್ ಮಾರ್ಗನ್ ಸಾರಥ್ಯ; ಬಾಂಗ್ಲಾ ಆಲ್ರೌಂಡರ್ ಶಕೀಬ್ ಅಲ್ ಹಸನ್ ವಾಪಸ್; ಉತ್ತಮ ವೇಗದ ಬೌಲಿಂಗ್ ಪಡೆ. ಅಸ್ಥಿರ ಸ್ಪಿನ್ ಬೌಲಿಂಗ್ ವಿಭಾಗ; ಸುನೀಲ್ ನಾರಾಯಣ್ ಅನುಮಾನಾಸ್ಪದ ಬೌಲಿಂಗ್ ಶೈಲಿ; ಕಳೆದ ಬಾರಿ ಮಿಂಚಿದ್ದ ವರುಣ್ ಚಕ್ರವರ್ತಿ ಫಿಟ್ನೆಸ್ ಕೊರತೆ. ಟೀಮ್ ಇವೊಯಿನ್ ಮಾರ್ಗನ್ (ನಾಯಕ), ಆಂಡ್ರೆ ರಸೆಲ್, ದಿನೇಶ್ ಕಾರ್ತಿಕ್, ಕಮಲೇಶ್ ನಾಗರಕೋಟಿ, ಕುಲದೀಪ್ ಯಾದವ್, ಲಾಕಿ ಫರ್ಗ್ಯುಸನ್, ನಿತೇಶ್ ರಾಣಾ, ಪ್ರಸಿದ್ಧಕೃಷ್ಣ, ಸಂದೀಪ್ ವಾರಿಯರ್, ಶಿವಂ ದುಬೆ, ಶುಭಮಾನ್ ಗಿಲ್, ಸುನೀಲ್ ನಾರಾಯಣ್, ಪ್ಯಾಟ್ ಕಮ್ಮಿನ್ಸ್, ರಾಹುಲ್ ತ್ರಿಪಾಠಿ, ವರುಣ್ ಚಕ್ರವರ್ತಿ, ಟಿಮ್ ಸೀಫರ್ಟ್.

ಹೊಸ ಸೇರ್ಪಡೆ: ಶಕೀಬ್ ಅಲ್ ಹಸನ್, ಹರ್ಭಜನ್ ಸಿಂಗ್, ಬೆನ್ ಕಟ್ಟಿಂಗ್, ಕರುಣ್ ನಾಯರ್, ಪವನ್ ನೇಗಿ, ವೆಂಕಟೇಶ್ ಐಯ್ಯರ್, ಶೆಲ್ಡನ್ ಜಾಕ್ಸನ್, ವೈಭವ್ ಅರೋರ, ಗುರುಕೀರತ್ ಸಿಂಗ್ ಮಾನ್.

ಸಾಧನೆ: ?2008: 6ನೇ ಸ್ಥಾನ ?2009: 8ನೇ ಸ್ಥಾನ ?2010: 6ನೇ ಸ್ಥಾನ ?2011: 4ನೇ ಸ್ಥಾನ ?2012: ಚಾಂಪಿಯನ್ ?2013: 7ನೇ ಸ್ಥಾನ ?2014: ಚಾಂಪಿಯನ್ ?2015: 5ನೇ ಸ್ಥಾನ ?2016: 4ನೇ ಸ್ಥಾನ ?2017: 3ನೇ ಸ್ಥಾನ ?2018: 3ನೇ ಸ್ಥಾನ ?2019: 5ನೇ ಸ್ಥಾನ ?2020: 5ನೇ ಸ್ಥಾನ.

ಐದೇ ತಿಂಗಳಲ್ಲಿ ಎರಡನೇ ಐಪಿಎಲ್

ಕರೊನಾ ಹಾವಳಿಯಿಂದಾಗಿ ಕಳೆದ ವರ್ಷ ಏಪ್ರಿಲ್-ಮೇನಲ್ಲಿ ಭಾರತ ದಲ್ಲಿ ಐಪಿಎಲ್ ನಡೆಯದೆ, 6 ತಿಂಗಳು ತಡವಾಗಿ ಯುಎಇಯಲ್ಲಿ ಆಯೋಜನೆ ಗೊಂಡಿತ್ತು. ಹೀಗಾಗಿ ಐದೇ ತಿಂಗಳ ಅಂತರದಲ್ಲಿ ಈಗ 2ನೇ ಐಪಿಎಲ್ ನಡೆಯಲಿದೆ. ಈ ಬಾರಿ ಕರೊನಾ ಭೀತಿಯ ನಡುವೆಯೂ ಎಂದಿನ ಏಪ್ರಿಲ್-ಮೇ ಅವಧಿಯಲ್ಲೇ ಟೂರ್ನಿ ಸಾಗುತ್ತಿದೆ.

ತವರಲ್ಲಿದ್ದರೂ, ತಟಸ್ಥ ಸ್ಥಳದಲ್ಲಿ ಪಂದ್ಯ

ಐಪಿಎಲ್ ತಂಡಗಳಿಗೆ ತವರಿ ನಿಂದ ಹೊರಗೆ ಆಡುವ ಅನುಭವ ಹೊಸದಲ್ಲ. 2009 (ದಕ್ಷಿಣ ಆಫ್ರಿಕಾ), 2014ರಲ್ಲಿ (ಯುಎಇಯಲ್ಲಿ ಮೊದಲಾರ್ಧ) ಸಾರ್ವತ್ರಿಕ ಚುನಾವಣೆಯಿಂದ ವಿದೇಶದಲ್ಲಿ ಪಂದ್ಯಗಳು ನಡೆದಿದ್ದರೆ, ಕಳೆದ ವರ್ಷ ಕರೊನಾ ಕಾರಣದಿಂದ ಯುಎಇಯಲ್ಲಿ ಪಂದ್ಯಗಳನ್ನು ಆಡಲಾಗಿತ್ತು. ಆದರೆ ಈ ಬಾರಿ ಭಾರತದಲ್ಲೇ ಐಪಿಎಲ್ ನಡೆಯುತ್ತಿ ದ್ದರೂ, ಯಾವುದೇ ತಂಡಕ್ಕೆ ತವರಿನಲ್ಲಿ ಪಂದ್ಯಗಳನ್ನು ಆಡುವ ಅದೃಷ್ಟವಿಲ್ಲ. ಕರೊನಾ ಕಾರಣದಿಂದಾಗಿ ದೇಶದ 6 ನಗರಗಳಲ್ಲಷ್ಟೇ ಪಂದ್ಯಗಳು ನಿಗದಿಯಾಗಿ ರುವುದರಿಂದ, ಬಿಸಿಸಿಐ ಎಲ್ಲ ತಂಡಗಳನ್ನು ತಟಸ್ಥ ಸ್ಥಳಗಳಲ್ಲಿ ಆಡಿಸುತ್ತಿದೆ.

8 ತಂಡಗಳ ಕೊನೇ ಐಪಿಎಲ್!

ಎಲ್ಲವೂ ಅಂದುಕೊಂಡಂತೆ ಆದರೆ, ಇದು 8 ತಂಡಗಳ ಕೊನೆಯ ಐಪಿಎಲ್ ಟೂರ್ನಿಯಾಗಿರಲಿದೆ. 2022ರ ಐಪಿಎಲ್​ಗೆ 9ನೇ ತಂಡವನ್ನು ಸೇರ್ಪಡೆಗೊಳಿಸಲು ಬಿಸಿಸಿಐ ಈಗಾಗಲೆ ಸಿದ್ಧತೆಗಳನ್ನು ಮಾಡಿಕೊಂಡಿದ್ದರೆ, 2023ರಲ್ಲಿ 10ನೇ ತಂಡ ಸೇರ್ಪಡೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಮುಂದಿನ ವರ್ಷದಿಂದ ಟೂರ್ನಿ ಸ್ವರೂಪವೂ ಸ್ವಲ್ಪಮಟ್ಟಿಗೆ ಬದಲಾವಣೆ ಕಾಣುವ ಸಾಧ್ಯತೆ ಇದೆ. ಈ ಬಾರಿ ಎಂದಿನಂತೆ ಅಗ್ರ 4 ತಂಡಗಳು ಪ್ಲೇಆಫ್​ಗೇರಲಿವೆ.

ಒಮ್ಮೆಗೆ ಎರಡೆರಡು ನಗರಗಳಲ್ಲಿ ಪಂದ್ಯ

ಕರೊನಾ ಭೀತಿಯಿಂದ ಪಾರಾಗಲೂ ಟೂರ್ನಿಗೆ ಬಯೋಬಬಲ್ ನಿರ್ವಿುಸಲಾಗಿದ್ದು, ತಂಡಗಳು ಹೆಚ್ಚು ಪ್ರಯಾಣ ಮಾಡುವುದನ್ನೂ ತಡೆಗಟ್ಟುವಂಥ ವೇಳಾಪಟ್ಟಿ ರೂಪಿಸಲಾಗಿದೆ. ಹೀಗಾಗಿ ಏಪ್ರಿಲ್ 9ರಿಂದ 25ರವರೆಗೆ ಚೆನ್ನೈ, ಮುಂಬೈನಲ್ಲಿ ಮಾತ್ರ ತಲಾ 10 ಪಂದ್ಯಗಳು ನಡೆಯಲಿವೆ. ಬಳಿಕ ಏಪ್ರಿಲ್ 26ರಿಂದ ಮೇ 8ರವರೆಗೆ ಅಹಮದಾಬಾದ್, ದೆಹಲಿಯಲ್ಲಿ ತಲಾ 8 ಪಂದ್ಯಗಳು ನಡೆಯಲಿವೆ. ಮೇ 9ರಿಂದ 23ರವರೆಗೆ ಬೆಂಗಳೂರು, ಕೋಲ್ಕತದಲ್ಲಿ ತಲಾ 10 ಪಂದ್ಯಗಳು ನಡೆಯಲಿವೆ. ಮೇ 25ರಿಂದ ಪ್ಲೇಆಫ್ ಮತ್ತು ಫೈನಲ್ ಪಂದ್ಯ ಅಹಮದಾಬಾದ್​ನಲ್ಲಿ ನಡೆಯಲಿವೆ.

ಖಾಲಿ ಸ್ಟೇಡಿಯಂ

ಕರೊನಾ ಹಾವಳಿಯಿಂದ ಖಾಲಿ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿದ್ದು, ಪ್ರೇಕ್ಷಕರಿಗೆ ಅನುಮತಿ ನಿರಾಕರಿಸಲಾಗಿದೆ. ಆದರೆ ಕರೊನಾ ಮತ್ತೆ ನಿಯಂತ್ರಣಕ್ಕೆ ಬಂದರೆ ಮೇನಲ್ಲಿ ಅಥವಾ ಕೊನೇ ಹಂತದ ಪಂದ್ಯಗಳಿಗೆ ಪ್ರೇಕ್ಷಕರಿಗೆ ಅವಕಾಶದೊರೆತರೂ ಅಚ್ಚರಿ ಇಲ್ಲ.

ಕ್ರೀಡಾಂಗಣಗಳು
  • ಎಂಎ ಚಿದಂಬರಂ, ಚೆನ್ನೈ (10 ಪಂದ್ಯ)
  • ವಾಂಖೆಡೆ, ಮುಂಬೈ (10 ಪಂದ್ಯ)
  • ನರೇಂದ್ರ ಮೋದಿ, ಅಹಮದಾಬಾದ್ (12 ಪಂದ್ಯ)
  • ಅರುಣ್ ಜೇಟ್ಲಿ, ನವದೆಹಲಿ (8 ಪಂದ್ಯ)
  • ಚಿನ್ನಸ್ವಾಮಿ, ಬೆಂಗಳೂರು (10 ಪಂದ್ಯ)
  • ಈಡನ್ ಗಾರ್ಡನ್ಸ್, ಕೋಲ್ಕತ (10 ಪಂದ್ಯ)

ಐಪಿಎಲ್​ನಲ್ಲಿ ಕನ್ನಡಿಗರು ಪಂಜಾಬ್: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಅನಿಲ್ ಕುಂಬ್ಳೆ (ಕೋಚ್)

ಆರ್​ಸಿಬಿ: ದೇವದತ್ ಪಡಿಕಲ್, ಪವನ್ ದೇಶಪಾಂಡೆ

ರಾಜಸ್ಥಾನ: ಶ್ರೇಯಸ್ ಗೋಪಾಲ್, ಕೆಸಿ ಕಾರ್ಯಪ್ಪ

ಸನ್​ರೈಸರ್ಸ್: ಮನೀಷ್ ಪಾಂಡೆ, ಜೆ. ಸುಚಿತ್

ಕೆಕೆಆರ್: ಪ್ರಸಿದ್ಧಕೃಷ್ಣ, ಕರುಣ್ ನಾಯರ್

ಚೆನ್ನೈ: ರಾಬಿನ್ ಉತ್ತಪ್ಪ, ಕೆ. ಗೌತಮ್ ?ಡೆಲ್ಲಿ: ಪ್ರವೀಣ್ ದುಬೆ

ಮಾಹಿತಿ: ಪ್ರಸಾದ್ ಶೆಟ್ಟಿಗಾರ್, ರಘುನಾಥ್ ಡಿ.ಪಿ.

ವಿನ್ಯಾಸ: ಚಂದ್ರಶೇಖರ ಗಂಧನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net