ಕ್ರೇನ್​ ಹರಿದು ವಿದ್ಯಾರ್ಥಿನಿ ದುರಂತ ಸಾವು: ವೈಟ್​ಫೀಲ್ಡ್-ಹೊಸಕೋಟೆ ಮಾರ್ಗದಲ್ಲಿ ಘಟನೆ

Student
Published on

ಬೆಂಗಳೂರು: ಕ್ರೇನ್​ ಹರಿದು ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ವೈಟ್ ಫೀಲ್ಡ್-ಹೊಸಕೋಟೆ ಮಾರ್ಗದ ಕನ್ನಮಂಗಲ ಗೇಟಿನ ಜೈನ್ ಹೆರಿಟೇಜ್ ಶಾಲೆ ಬಳಿ ಬುಧವಾರ ಮಧ್ಯಾಹ್ನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ

ವೈಟ್​ಫೀಲ್ಡ್ ಬಳಿಯ ಕನ್ನಮಂಗಲ ನಿವಾಸಿ ನೂರ್ ಪೀಜಾ (19 ) ಮೃತ ವಿದ್ಯಾರ್ಥಿನಿ. ಕ್ರೇನ್ ಚಾಲಕನ ಅಜಾಗರೂಕತೆಯಿಂದ ಈ ಅವಘಡ ಸಂಭವಿಸಿದೆ. ವಿದ್ಯಾರ್ಥಿನಿ ರಸ್ತೆ ಬದಿಯಲ್ಲಿ ನಡೆದುಕೊಂಡು‌‌ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕ್ರೇನ್ ಹರಿದು ದುರ್ಘಟನೆ ಸಂಭವಿಸಿದೆ.

ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿಯೂ ಸೆರೆಯಾಗಿದೆ. ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಆಸ್ವತ್ರೆಯಲ್ಲಿ ಮೃತಪಟ್ಟಿದ್ದಾಳೆ. ವೈಟ್ ಫೀಲ್ಡ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net