More

    ಸ್ಥಳೀಯ ಪೊಲೀಸರನ್ನು ಪರೀಕ್ಷಿಸಲು ಸಂತ್ರಸ್ತೆ ಸೋಗಲ್ಲಿ ಕರೆ ಮಾಡಿದ ಮಹಿಳಾ ಅಧಿಕಾರಿ: ಮುಂದೇನಾಯ್ತು ನೀವೇ ನೋಡಿ…

    ಲಖನೌ: ಸಾಮಾನ್ಯ ನಾಗರಿಕಳ ವೇಷದಲ್ಲಿ ಮಹಿಳಾ ಐಪಿಎಸ್​ ಅಧಿಕಾರಿಯೊಬ್ಬರು ಸ್ಥಳೀಯ ಪೊಲೀಸರ ಕಾರ್ಯ ವೈಖರಿಯನ್ನು ಪರೀಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

    ಗುರುವಾರ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ ಚಾರು ನಿಗಮ್​ ಅವರು ಕುರ್ತಾ ಧರಿಸಿ, ಮುಖಕ್ಕೆ ದುಪ್ಪಟ್ಟ ಸುತ್ತಿಕೊಂಡು, ಕಣ್ಣಿಗೆ ಸನ್​ ಗ್ಲಾಸ್​ ಹಾಕಿ, ತಮ್ಮನ್ನು ಗುರುತನ್ನು ಮರೆಮಾಚಿಕೊಂಡು ಬಂದಿದ್ದರು.

    ಸುಲಿಗೆ ಪ್ರಕರಣದ ಸಂತ್ರಸ್ತೆ ರೀತಿ ನಟಿಸಿದ ಚಾರು ನಿಗಮ್​, 112 ಸಹಾಯವಾಣಿಗೆ ಕರೆ ಮಾಡಿ, ನನ್ನ ಹೆಸರು ಸರಿತಾ ಚೌಹಾಣ್​, ಸಶ್ತ್ರಾಸ್ತ್ರ ಹೊಂದಿದ್ದ ದುಷ್ಕರ್ಮಿಗಳು ನನ್ನ ಬಳಿ ಸುಲಿಗೆ ಮಾಡಿದ್ದಾರೆ ಎಂದು ದೂರು ನೀಡಿದರು. ನಿರ್ಜನ ಪ್ರದೇಶದಲ್ಲಿ ಚಾರು ನಿಗಮ್​ ಅವರು ಫೋನ್​ನಲ್ಲಿ ಮಾತನಾಡುತ್ತಿರುವ ವಿಡಿಯೋವನ್ನು ಔರೈಯಾ ಪೊಲೀಸರು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಸರಿತಾ ಹೆಸರಿನಲ್ಲಿ ಬಂದ ಕರೆಯನ್ನು ಸ್ವೀಕರಿಸಿದ ಬಳಿಕ ಸುಲಿಗೆ ನಡೆದ ಸ್ಥಳಕ್ಕೆ ತಕ್ಷಣ ಪೊಲೀಸರ ತಂಡ ಧಾವಿಸುವ ಮೂಲಕ ಉತ್ತಮವಾಗಿ ಸ್ಪಂದನೆ ಮಾಡಿದ್ದು, ಚಾರು ನಿಗಮ್​ ಅವರ ಪರೀಕ್ಷೆಯಲ್ಲಿ ಗೆದ್ದಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕರೆ ಮಾಡಿದ್ದ ಮಹಿಳೆ ಬಳಿ ದೂರು ಸ್ವೀಕರಿಸಿದ್ದಾರೆ. ಆದರೆ, ಅವರಿಗೆ ನಮ್ಮ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ ಎಂಬ ಸುಳಿವು ಸಿಗಲೇ ಇಲ್ಲ. ಆದರೆ, ಚಾರು ನಿಗಮ್​ ಅವರು ಪೊಲೀಸರ ಎಲ್ಲ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು.

    ಎಲ್ಲ ನಡೆದ ಬಳಿಕ ಟ್ವೀಟ್​ ಮಾಡಿರುವ ಚಾರು ನಿಗಮ್​, ಪೊಲೀಸರು ನಡೆದುಕೊಂಡ ರೀತಿ ಸಮಾಧಾನ ತಂದಿದೆ ಎಂದಿದ್ದಾರೆ.

    ಪರೀಕ್ಷೆ ನಡೆಸಲು ಸರಿಯಾದ ಸ್ಥಳವನ್ನು ಹುಡುಕುತ್ತಿರುವ ಅಧಿಕಾರಿ ಬೈಕ್‌ನಲ್ಲಿ ಸವಾರಿ ಮಾಡುತ್ತಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರ ಮನಗೆದ್ದಿದೆ. (ಏಜೆನ್ಸೀಸ್​)

    ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

    ಬಾಡಿ ಫಿಟ್ಟಿಂಗ್​ ಡ್ರೆಸ್​ ಧರಿಸಿ ಸಿಕ್ಕಾಪಟ್ಟೆ ಟ್ರೋಲ್​ ಆದ ಜಾಹ್ನವಿ ಕಪೂರ್​: ವಿಡಿಯೋ ವೈರಲ್​

    ಪೊಲೀಸ್​ ಕಾನ್​ಸ್ಟೆಬಲ್​ ನೇಮಕಾತಿ: ವಯೋಮಿತಿ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts