ವಿದ್ಯಾರ್ಥಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಿಕ್ಷಕಿ ಕೆಲಸಕ್ಕೆ ಗುಡ್​ಬೈ! ಕೆಲವು ಘಟನೆಗಳಿಂದ ನೊಂದು ಈ ತೀರ್ಮಾನ | Bengal Professor

ವಿಜಯವಾಣಿ - 2025-02-05T141947.800
Published on

Bengal Professor: ಕಳೆದ ವಾರವಷ್ಟೇ ಪಶ್ಚಿಮ ಬಂಗಾಳದ ವಿಶ್ವವಿದ್ಯಾನಿಲದ ಹಿರಿಯ ಮಹಿಳಾ ಪ್ರಾಧ್ಯಾಪಕಿಯೊಬ್ಬರು, ತರಗತಿಯಲ್ಲೇ ತಮ್ಮ ವಿದ್ಯಾರ್ಥಿ ಜತೆ ಸಪ್ತಪದಿ ತುಳಿದ ಘಟನೆ ಭಾರೀ ಟೀಕೆ, ವ್ಯಂಗ್ಯಗಳಿಗೆ ಗುರಿಯಾಯಿತು. ತನ್ನ ವಿದ್ಯಾರ್ಥಿನಿಯನ್ನೇ ಮದುವೆಯಾದ ಮಹಿಳೆಗೆ ನೆಟ್ಟಿಗರು ಹಿಗ್ಗಾಮುಗ್ಗಾ ಜಾಡಿಸಿದ್ದರು. ಮದುವೆಯ ವಿಡಿಯೋ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ, ಆಕೆಯ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವಂತೆ ಒತ್ತಾಯದ ಕೂಗುಗಳು ಕೇಳಿಬಂದಿವೆ.

ಸರ್ಕಾರಿ ಸ್ವಾಮ್ಯದ ಮೌಲಾನಾ ಅಬುಲ್ ಕಲಾಂ ಆಜಾದ್ ತಂತ್ರಜ್ಞಾನ ವಿಶ್ವವಿದ್ಯಾಲಯದ (MAKAUT) ಅನ್ವಯಿಕ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆಯಾದ ಈಕೆ, ತಮ್ಮ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಯೊಂದಿಗೆ ತರಗತಿಯಲ್ಲಿ ಹಿಂದೂ-ಬಂಗಾಳಿ ಶಾಸ್ತ್ರದ ಪ್ರಕಾರ ವಿವಾಹವಾದರು. ತನಗಿಂತ ಕಿರಿಯ ವಯಸ್ಸಿನ ಯುವಕನ ಜತೆಗೆ ಮದುವೆಯಾದ ಶಿಕ್ಷಕಿಯ ವಿಡಿಯೋ ಜ.28ರಂದು ವೈರಲ್ ಆಗಿ, ದೊಡ್ಡ ಕೋಲಾಹಲಕ್ಕೆ ಕಾರಣವಾಯಿತು.

ವೈರಲ್ ಶಿಕ್ಷಕಿ ಬಗ್ಗೆ ಪ್ರತಿಕ್ರಿಯಿಸಿದ ಯೂನಿವರ್ಸಿಟಿ ರಿಜಿಸ್ಟ್ರಾರ್ ಪಾರ್ಥ ಪ್ರತಿಮ್ ಲಹಿರಿ, "ತರಗತಿಯೊಳಗೆ ಮದುವೆಯಾದ ನಂತರ ಆಕೆ ಕಾಲೇಜಿಗೆ ಬಂದಿಲ್ಲ. ಆದರೆ, ಕಚೇರಿಗೆ ಇ-ಮೇಲ್ ಕಳಿಸಿದ್ದಾರೆ. ಅದರಲ್ಲಿ, ನನ್ನ ಮದುವೆಯ ವಿಡಿಯೋ ವ್ಯಾಪಕವಾಗಿ ಹರಿದಾಡಿದೆ. ಇದರಿಂದ ನಾನು ಮಾನಸಿಕ ಹಿಂಸೆ ಅನುಭವಿಸಿದ್ದೇನೆ. ಇತ್ತೀಚಿನ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸಕ್ಕೆ ರಾಜೀನಾಮೆ ಘೋಷಿಸಲು ನಿರ್ಧರಿಸಿದ್ದೇನೆ" ಎಂದು ತಿಳಿಸಿದ್ದಾರೆ.

"ವೈರಲ್ ವಿಡಿಯೋ ಬಗ್ಗೆ ಬೇಸರ ವ್ಯಕ್ತಪಡಿಸಿದ ಬಳಿಕ ಕಳೆದ ಕೆಲವು ವರ್ಷಗಳಿಂದ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಲು ಅವಕಾಶ ನೀಡಿದ್ದಕ್ಕಾಗಿ ವಿಶ್ವವಿದ್ಯಾನಿಲಯಕ್ಕೆ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ" ಎಂದು ಲಹಿರಿ ಹೇಳಿದ್ದಾರೆ(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net