2007ರಲ್ಲಿ 10 ಐಟಂಗೆ ಬಾರ್​ ಬಿಲ್​ ಎಷ್ಟಿತ್ತು ಗೊತ್ತೇ? 18 ವರ್ಷಗಳ ಹಿಂದಿನ ಬಾರ್​ ಬಿಲ್ ನೋಡಿದ್ರೆ ಹುಬ್ಬೇರೋದು ಖಚಿತ | Viral Bill

blank

Viral Bar Bill: ಇದು ಡಿಜಿಟಲ್​ ಯುಗ. ಶರವೇಗದಲ್ಲಿ ಸಾಗುತ್ತಿರುವ ಆಧುನಿಕ ತಂತ್ರಜ್ಞಾನ ಜಗತ್ತಿನಲ್ಲಿ ಎಲ್ಲವೂ ವೇಗ, ದುಪ್ಪಟ್ಟು ವೇಗವಾಗಿ ಚಲಿಸುತ್ತಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ಎಂತಹದ್ದೇ ಘಟನೆ ನಡೆದರೂ ಅದು ಕ್ಷಣಮಾತ್ರದಲ್ಲಿ ಜಾಲತಾಣಗಳಲ್ಲಿ ಹರಿದಾಡುತ್ತವೆ. ಕೆಲವೇ ನಿಮಿಷಗಳಲ್ಲಿ ವೈರಲ್ ಆಗುವ ಫೋಟೋ, ವಿಡಿಯೋಗಳು ಹತ್ತು ಹಲವು ವಿಷಯಗಳನ್ನು ಜನರ ಕೈಬೆರಳಿಗೆ ತಲುಪಿಸುತ್ತದೆ. ಇದೇ ಈಗ ಜನರ ಕುತೂಹಲವನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಮುಟ್ಟಾದಾಗ ಅಪ್ಪಿತಪ್ಪಿಯೂ ಸ್ನಾನ ಮಾಡುವಂತಿಲ್ಲ, ಯಾರನ್ನು ಮುಟ್ಟಿಸಿಕೊಳ್ಳುವಂತಿಲ್ಲ! ಪತಿಗೆ ವಿಚ್ಛೇದನ ಕೊಟ್ಟ ಮಹಿಳೆ..Menstrual Taboo

ಘಟನೆ, ದುರ್ಘಟನೆ ಸೇರಿದಂತೆ ಹಲವಾರು ಕೌತುಕ, ಕುತೂಹಲಕಾರಿ ವಿಷಯಗಳು ಜಾಲತಾಣಗಳಲ್ಲಿ ಹರಿದಾಡುವ ಮೂಲಕ ನೆಟ್ಟಿಗರನ್ನು ಭಾರೀ ಅಚ್ಚರಿಗೆ ದೂಡುತ್ತದೆ. ಹಳೆಯ ಕಾಲದ ವಿಷಯಗಳು, ಮಾಹಿತಿಗಳು ಮತ್ತೇ ನಮ್ಮ ಮುಂದೆ ಫೋಟೋ ಅಥವಾ ವಿಡಿಯೋ ರೂಪದಲ್ಲಿ ಬಂದಾಗ ಕುತೂಹಲ ಗರಿಗೆದರುತ್ತದೆ. ಇದರ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳುವ ಆಸಕ್ತಿಯೂ ಮೂಡುತ್ತದೆ. ಹೀಗಿರುವಾಗ ಇಲ್ಲೊಂದು ಹಳೆಯ ಬಾರ್​ ಬಿಲ್​ ವೈರಲ್ ಆಗಿದ್ದು, ಅದರಲ್ಲಿ ಬರೆಯಲಾದ ಮೊತ್ತ ನೋಡಿ ನೆಟ್ಟಿಗರು ದಂಗಾಗಿದ್ದಾರೆ.

18 ವರ್ಷಗಳ ಹಿಂದಿನ ಬಾರ್​​​ ಬಿಲ್​ವೊಂದು ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರ ಚರ್ಚೆಗೆ ಕಾರಣವಾಗಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲದರ ಬೆಲೆಯೂ ಗಗನಕ್ಕೇರಿದೆ. ಒಂದು ಪದಾರ್ಥ ಆರ್ಡರ್ ಮಾಡಲು ಬರೋಬ್ಬರಿ 200ರೂ.ಗೂ ಅಧಿಕ ವೆಚ್ಚ ತಗಲುತ್ತದೆ. ಹೀಗಿರುವಾಗ ಒಂದು ಬಾರ್​ ಅಥವಾ ರೆಸ್ಟೋರೆಂಟ್​ಗೆ ಹೋಗಬೇಕೆಂದರೆ ನಮ್ಮ ಬಳಿ 5ರಿಂದ 10 ಸಾವಿರ ರೂ. ಇರಲೇಬೇಕು. ಅದಕ್ಕಿಂತ ಕಡಿಮೆ ಇದ್ದರೆ, ಅಂತಹ ಮದ್ಯ ಮತ್ತು ರೆಸ್ಟೋರೆಂಟ್​ಗಳ​ ಬಾಗಿಲತ್ತ ತಲೆ ಹಾಕಿಯೂ ಮಲಗಬಾರದು ಅನಿಸುತ್ತದೆ. ಕಾರಣ, ಅಲ್ಲಿನ ಪದಾರ್ಥಗಳು, ಅದಕ್ಕೆ ನಿಗದಿಪಡಿಸಲಾದ ದುಬಾರಿ ಮೊತ್ತ.

ಇದನ್ನೂ ಓದಿ: ಅಭಿವೃದ್ಧಿಗೆ ಬೆಂಬಲಿಸಿದ ಜಿಲ್ಲೆಯ ಮತದಾರರು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ಹೇಳಿಕೆ

2007ರ ವೈರಲ್ ಬಾರ್​ ಬಿಲ್​ನಲ್ಲಿ ಒಟ್ಟು 10​ ಪದಾರ್ಥಗಳಿಗೆ ಕೇವಲ 2,522 ರೂ. ಇರುವುದು ಸದ್ಯ ನೆಟ್ಟಿಗರ ಹುಬ್ಬೇರಿಸಿದೆ. ಇದನ್ನು ನೋಡಿದ ಓರ್ವ, ‘ಎರಡು ದಶಕ ದಾಟುವುದರೊಳಗೆ ಮದ್ಯ ಮತ್ತು ಆಹಾರಗಳ ಬೆಲೆ ಎಷ್ಟು ದುಬಾರಿಯಾಗಿಬಿಟ್ಟಿದೆ ಅಲ್ವಾ? ಎಷ್ಟು ದೊಡ್ಡ ವ್ಯತ್ಯಾಸವಿದೆ’ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, ‘2007ರಲ್ಲಿ ಈ ಹಣ ಕೂಡ ಅತ್ಯಂತ ದುಬಾರಿಯೇ ಆಗಿತ್ತು. 18 ವರ್ಷಗಳ ಹಿಂದಿನ ಈ ಬಿಲ್​ ಗ್ರಾಹಕರಿಗೆ ಕೈಗೆಟುಕವಂತೆ ಇರಲಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ. ಅಸಲಿಗೆ ಇದು ದೆಹಲಿಯ ‘ದಿ ಸಪ್ಪರ್​ ಫ್ಯಾಕ್ಟರಿ’ ಹೋಟೆಲ್​ನ ಬಿಲ್​ ಆಗಿದೆ.

2007ರಲ್ಲಿ 10 ಐಟಂಗೆ ಬಾರ್​ ಬಿಲ್​ ಎಷ್ಟಿತ್ತು ಗೊತ್ತೇ? 18 ವರ್ಷಗಳ ಹಿಂದಿನ ಬಾರ್​ ಬಿಲ್ ನೋಡಿದ್ರೆ ಹುಬ್ಬೇರೋದು ಖಚಿತ | Viral Bill

ಹಿಂದಿನ ವೈರಲ್ ಪೋಸ್ಟ್​

ಹಳೆಯ ಬಿಲ್ ಅಥವಾ ಮೆನು ವೈರಲ್ ಆಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಫೆಬ್ರವರಿ 2023ರಲ್ಲಿ, ಗ್ಯಾಗ್ರೆಟ್ ಹುಲ್ಚಲ್ ಎಂಬ ವ್ಯಕ್ತಿ ಹಂಚಿಕೊಂಡ ಫೇಸ್‌ಬುಕ್ ಪೋಸ್ಟ್​ನಲ್ಲಿ, 1980ರ ಮೆನು ಕಾರ್ಡ್ ತೋರಿಸಲಾಗಿತ್ತು. ಅದರಲ್ಲಿ ಸಿಹಿತಿಂಡಿಗಳು, ಸಮೋಸಾ ಮತ್ತು ಕಚೋರಿಗಳ ಬೆಲೆ ನಂಬಲಾಗದಷ್ಟು ಕಡಿಮೆ ದರದಲ್ಲಿ ಪಟ್ಟಿ ಮಾಡಲಾಗಿತ್ತು. ಪಟ್ಟಿಯಲ್ಲಿ ಒಂದು ಸಮೋಸಾದ ಬೆಲೆ ಕೇವಲ 50 ಪೈಸೆ ಇತ್ತು. ಇನ್ನು ಲಡ್ಡೂ, ಗುಲಾಬ್ ಜಾಮೂನ್ ಮತ್ತು ರಸಗುಲ್ಲಾದಂತಹ ಸಿಹಿತಿಂಡಿಗಳು ಪ್ರತಿ ಕೆಜಿಗೆ 10ರಿಂದ 15 ರೂ. ಇತ್ತು. ಅದೇ ಈಗ ಕೆಜಿ ಇರಲಿ ಒಂದು ಸ್ವೀಟ್​ಗೆ 10ರಿಂದ 20 ರೂ. ಇದೆ ಎಂಬುದು ಸದ್ಯ ಭಾರೀ ವ್ಯತ್ಯಾಸವನ್ನು ನಮ್ಮ ಮುಂದಿಟ್ಟಿದೆ(ಏಜೆನ್ಸೀಸ್).

ಅಬ್ಬಬ್ಬಾ! ಭಕ್ತರ ಕಾಣಿಕೆಯಿಂದಲೇ ತುಂಬಿಹೋಗಿದೆ ಈ ದೇಗುಲ; 5 ದಿನ ಬೇಕಾಯ್ತು ಕೋಟಿ ಕೋಟಿ ಹಣ ಎಣಿಸಲು | Donations

TAGGED:
Share This Article

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…

ಗಂಡ-ಹೆಂಡತಿಯ ಸಂಬಂಧದಲ್ಲಿ ಮೂರನೇ ವ್ಯಕ್ತಿ ಎಂಟ್ರಿಯಾಗಿದ್ದರೆ ಈ ರೀತಿ ಸುಲಭವಾಗಿ ತಿಳಿದುಕೊಳ್ಳಬಹುದು..! Husband and Wife

Husband and Wife : ಕಷ್ಟ-ಸುಖ, ನೋವು-ನಲಿವು ಹಾಗೂ ದೇಹ ಎಲ್ಲವನ್ನು ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ…