BBKS11: ಚೈತ್ರಾ ಪರ ಬ್ಯಾಟ್​ ಬೀಸಿದ ಲಾಯರ್​ ಜಗದೀಶ್! ​

jagdish chaitra
Published on

ಬೆಂಗಳೂರು: ರಿಯಾಲಿಟಿ ಶೋಗಳ ಪೈಕಿ ಅತೀ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಗಳಿಸಿರುವ ಕನ್ನಡ ಬಿಗ್ ಬಾಸ್ (BiggBoss Kannada season 11) ಮನರಂಜನಾ ಕಾರ್ಯಕ್ರಮ ಇದೀಗ ಹೊಸ ರೂಪ ಪಡೆದುಕೊಂಡಿದ್ದು,​ ಸೀಸನ್ 10ರ ಯಶಸ್ಸಿನ ಬೆನ್ನಲ್ಲೇ ಸೀಸನ್​ 11ರ ಭರ್ಜರಿ ಯಶಸ್ಸಿಗೆ ಬಿಗ್ ತಂಡ ದೊಡ್ಡ ಹೆಜ್ಜೆಯನ್ನೇ ಇಟ್ಟಿರುವುದು ಇದೀಗ ಮತ್ತಷ್ಟು ಸ್ಪಷ್ಟವಾಗಿದೆ. ಅಂತಿಮವಾಗಿ ಈ ಬಾರಿಯೂ ಕಾರ್ಯಕ್ರಮದ ಮುಂದಾಳತ್ವ ವಹಿಸಿಕೊಂಡಿರುವ ಕಿಚ್ಚ ಸುದೀಪ್​, ಎಂದಿನಂತೆ ತಮ್ಮ ಖಡಕ್​ ಮಾತಿನ ಶೈಲಿಯಲ್ಲೇ ಗ್ರ್ಯಾಂಡ್​ ಓಪನಿಂಗ್​ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಈ ಬಾರಿ 16 ಅಲ್ಲ ಬರೋಬ್ಬರಿ 17 ಘಟಾನುಘಟಿ ಸ್ಪರ್ಧಿಗಳು ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದು, ಮೊದಲ ದಿನವೇ ಕಿಚ್ಚಿನ ಆಟ ಶುರುಮಾಡಿದ್ದಾರೆ.

ಸ್ವರ್ಗನಿವಾಸಿಗಳು ಮತ್ತು ನರಕನಿವಾಸಿಗಳ ಮಧ್ಯೆ ದೊಡ್ಡ ಜಟಾಪಟಿಯೇ ಭುಗಿಲೆದ್ದಿದ್ದು, ವೀಕ್ಷಕರು ಮೊದಲೇ ನಿರೀಕ್ಷಿಸಿದಂತೆ ಚೈತ್ರಾ ಕುಂದಾಪುರ ಅಬ್ಬರ ಜೋರಾಗಿದೆ. ನರಕನಿವಾಸಿಗಳಲ್ಲಿ ಒಬ್ಬರಾಗಿರುವ ಚೈತ್ರಾ, ನಿನ್ನೆ ಸ್ವರ್ಗನಿವಾಸಿಗಳು ಕೊಟ್ಟ ಕೆಲಸವನ್ನು ಕಾಟಾಚಾರವಾಗಿ ಮಾಡುವಲ್ಲಿ ಯಶಸ್ವಿಯಾದರು. ಎದುರಾಳಿ ತಂಡದವರು ಕೊಟ್ಟ ಹಣ್ಣನ್ನು ಕಸಿದು, ಅರ್ಧ ಕಚ್ಚಿ, ನರಕಕ್ಕೆ ಬೀಸಾಡಿದ ಚೈತ್ರಾ, ಉಗ್ರಂ ಮಂಜು, ಯಮುನಾ ಅವರ ಮಾತುಗಳಿಗೆ ಕಿಂಚಿತ್ತು ಬಗ್ಗಲಿಲ್ಲ. ಮಾತಿಗೆ ಮಾತು, ಏಟಿಗೆ ಎದಿರೇಟು ಎನ್ನುವಂತೆ ಸ್ವರ್ಗನಿವಾಸಿಗಳ ಜತೆ ವಾಗ್ವಾದಕ್ಕಿಳಿದ ಚೈತ್ರಾ, ಲಾಯರ್​ ಜಗದೀಶ್ ( Lawyer Jagdish) ಮಾತಿಗೆ ಮಾತ್ರ ಆಸ್ಪದ, ಗೌರವ ನೀಡಿದರು.

ಇಡೀ ಸ್ವರ್ಗನಿವಾಸಿಗಳು ಚೈತ್ರಾ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರೆ, ಇತ್ತ ಲಾಯರ್ ಜಗದೀಶ್ ಮಾತ್ರ ಚೈತ್ರಾ ಪರ ಬ್ಯಾಟ್ ಬೀಸಿದರು. ಯಮುನಾ, ಮಂಜು, ಐಶ್ವರ್ಯ, ಧನರಾಜ್​, ಧರ್ಮ ಸೇರಿದಂತೆ ಎಲ್ಲರೂ ನೀವು ಮಾಡ್ತಿರೋದು ತಪ್ಪು. ಇದು ಸರಿಯಲ್ಲ ಎಂದು ಹೇಳಿದ್ರು ಸಹ ಇಲ್ಲ ನಾನು ಇದಕ್ಕೆಲ್ಲ ಬಗ್ಗುವುದಿಲ್ಲ. ನನ್ನದೇ ತಪ್ಪು ಎಂದು ಬಿಗ್ ಬಾಸ್​ ಹೇಳಿದರೆ ಮಾತ್ರ ನಾನು ಒಪ್ಪಿಕೊಳ್ಳುತ್ತೇನೆ. ಬಿಗ್ ಬಾಸ್ ಏನೇ ಶಿಕ್ಷೆ ಕೊಟ್ಟರು ಅದಕ್ಕೆ ನಾನು ಹೊಣೆ ಎಂದು ತಿಳಿಸಿದರು. ಈ ಮೂಲಕ ಚೈತ್ರಾ ಪರ ಸಾಫ್ಟ್​ ಕಾರ್ನರ್​ ತೋರುತ್ತಿರುವ ಜಗದೀಶ್​ ನಡೆ ಸ್ವರ್ಗನಿವಾಸಿಗಳಿಗೆ ತೀವ್ರ ಕಿರಿಕಿರಿ ಉಂಟುಮಾಡಿದೆ. ಇಂದಿನ ಸಂಚಿಕೆಯಲ್ಲಿ ಏನಾಗಲಿದೆ? ಯಾರು ಯಾರ ವಿರುದ್ಧ ಸಿಡಿದೇಳಲಿದ್ದಾರೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ.

ಎಂಟ್ರಿಕೊಟ್ಟ 17 ಬಿಗ್​ ಸ್ಪರ್ಧಿಗಳು

ಧನರಾಜ್​ ಆಚಾರ್​, ಗೌತಮಿ ಜಾಧವ್​, ಲಾಯರ್​ ಜಗದೀಶ್​, ತ್ರಿವಿಕ್ರಮ್​, ಯಮುನಾ ಶ್ರೀನಿಧಿ, ಭವ್ಯಾ, ಹಂಸಾ ಪ್ರತಾಪ್​, ಐಶ್ವರ್ಯಾ ಶಿಂಧೋಗಿ, ಅನುಷಾ ರೈ, ಶಿಶಿರ್​ ಶಾಸ್ತ್ರಿ, ಗೋಲ್ಡ್​ ಸುರೇಶ್​, ಮಾನಸ ಸಂತೋಷ್​, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ಉಗ್ರಂ ಮಂಜು, ಧರ್ಮ ಕೀರ್ತಿರಾಜ್​ ಮತ್ತು ರಂಜಿತ್.

ಸ್ವರ್ಗ ಸೇರಿದ ಸ್ಪರ್ಧಿಗಳು

ಧನರಾಜ್​ ಆಚಾರ್​, ಗೌತಮಿ ಜಾಧವ್​, ಲಾಯರ್​ ಜಗದೀಶ್​, ತ್ರಿವಿಕ್ರಮ್​, ಯಮುನಾ ಶ್ರೀನಿಧಿ, ಭವ್ಯಾ, ಹಂಸಾ ಪ್ರತಾಪ್​, ಐಶ್ವರ್ಯಾ ಶಿಂಧೋಗಿ ಮತ್ತು ಉಗ್ರಂ ಮಂಜು.

ನರಕಕ್ಕೆ ಹೋದ ಸ್ಪರ್ಧಿಗಳು

ಅನುಷಾ ರೈ, ಶಿಶಿರ್​ ಶಾಸ್ತ್ರಿ, ಗೋಲ್ಡ್​ ಸುರೇಶ್​, ಮಾನಸಾ ಸಂತೋಷ್​, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಮತ್ತು ರಂಜಿತ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net