BBKS10: ಮನೆಯಲ್ಲಿ ಉಳಿಯಲು ಒಪ್ಪದ ವರ್ತೂರ್​ಗೆ ಸಿಕ್ತು ಅಮ್ಮನ ಕೈತುತ್ತಿನ ಸಾಂತ್ವನ!

Untitled design (30)
Published on

ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಬಿಗ್‌ಬಾಸ್ ಮನೆಯ ಸದಸ್ಯರಿಗೆ ಒಂದು ಭಾವುಕ ಸರ್ಪೈಸ್ ನೀಡಿದ್ದಾರೆ. ಮನೆಮಂದಿಯೆಲ್ಲರಿಗೂ ಅವರ ಮನೆಯಿಂದ ಅವರಿಗಿಷ್ಟವಾದ ತಿನಿಸನ್ನು ತರಿಸಿ ಕೊಡಲಾಗಿದೆ. ಬಾಕ್ಸ್‌ನಲ್ಲಿ ಬಂದ ತಮ್ಮಿಷ್ಟದ ತಿನಿಸನ್ನು ಮಾಡಿ ಕಳಿಸಿದ ಕುಟುಂಬದವರನ್ನು ನೆನಪಿಸಿಕೊಂಡು ಸ್ಪರ್ಧಿಗಳೆಲ್ಲ ಒಂದು ಕ್ಷಣ ಭಾವುಕರಾಗಿದ್ದಾರೆ.

ಎಲ್ಲರ ಮನೆಯಿಂದ ತಿಂಡಿ ಬಂದರೂ ಒಬ್ಬ ಸ್ಪರ್ಧಿಯ ಮನೆಯಿಂದ ಮಾತ್ರ ಬಾಕ್ಸ್ ಬಂದಿರಲಿಲ್ಲ. ಅದು ವರ್ತೂರ್‍ ಸಂತೋಷ್ ಮನೆಯಿಂದ. ಇದನ್ನು ನೋಡಿ ವರ್ತೂರ್ ಅವರು ದುಃಖದಿಂದ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಸಂತೋಷ್​ ಅವರ ತಾಯಿಯನ್ನು ನೋಡಿ ಸ್ಪರ್ಧಿಗಳೆಲ್ಲಾ ಶಾಕ್​ ಆಗಿದ್ದು, ಅಪ್ಪಿಕೊಂಡು ಮನೆಗೆ ಸ್ವಾಗತಿಸಿದರು.

ಮನೆಯ ಮುಖ್ಯದ್ವಾರದಿಂದ ವರ್ತೂರ್ ಸಂತೋಷ್ ಅವರ ಅಮ್ಮನೇ ಬುತ್ತಿ ಹಿಡಿದು ನಡೆದುಕೊಂಡು ಬರುತ್ತಿದ್ದರು! ಅವರ ಬಾಯಿಂದ ‘ಕಂದಾ’ ಅಂದಾಗಲಂತೂ ಸ್ಪರ್ಧಿಗಳೆಲ್ಲರಿಗೂ ತಮ್ಮ ಅಮ್ಮನೇ ಕರೆದ ಅನುಭವ ಎದುರಾಯಿತು. ಸಂತೋಷ್‌ ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗುತ್ತೇನೆ ಎಂದು ನಿನ್ನೆಯಿಂದಲೂ ಹೇಳುತ್ತಿದ್ದಾರೆ. ಈ ನಿರ್ಧಾರವನ್ನು ಅವರಿಗೆ ಬಿಟ್ಟ ಸುದೀಪ್‌, ವೀಕೆಂಡ್‌ ಎಪಿಸೋಡ್ ಮುಗಿಸಿದರು.

ಇಂದು ಮನೆಯವರೆಲ್ಲ ಸಂತೋಷ್​ ಅವರಿಗೆ ಉಳಿದುಕೊಳ್ಳುವಂತೆ ಮನವೊಲಿಸುತ್ತಿದ್ದರೂ ಕೂಡ ಯಾರ ಮಾತಿಗೂ ಸ್ಪಂದಿಸದ ಸಂತೋಷ್​ಗೆ ಧೈರ್ಯ ಹೇಳಲು ನಟಿ ಸುಷ್ಮಾ ಕೆ. ರಾವ್ ಮನೆ ಪ್ರವೇಶಿಸಿದರು. ಆದ್ರೂ ಸಹ ಸಂತೋಷ್​ ನಿರ್ಧಾರ ಏನು ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಈ ನಡುವೆಯೇ ಅವರ ಅಮ್ಮನೇ ಬಿಗ್‌ಬಾಸ್ ಮನೆಯೊಳಗೆ ಬಂದಿರುವುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಮಗನನ್ನು ಅಪ್ಪಿಕೊಂಡ ಸಂತೋಷ್ ತಾಯಿ,​​ ‘ನನ್ನ ಆಸೆ ನೆರವೇರಿಸ್ತಾನೆ ನನ್ ಮಗ ಎಂದು ಹೇಳಿದರು. ವರ್ತೂರ್ ಅವರ ತಾಯಿ, ಮಗನಲ್ಲಿ ಮಾಡಿಕೊಂಡ ವಿನಂತಿ ಏನು? ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net