More

    ಕೊಹ್ಲಿ ಕ್ಷಮೆ ಕೋರಿದ್ದೇಕೆ ಕುಶಾಲ್​ ಮೆಂಡೀಸ್​? ಲಂಕಾ ಆಟಗಾರನಿಗೂ ಅರಿವಾಯ್ತು ‘ವಿರಾಟ’ ರೂಪ!

    ನವದೆಹಲಿ: ವಿಶ್ವಕಪ್​ ಪತ್ರಿಕಾಗೊಷ್ಠಿ ಸಮಯದಲ್ಲಿ ವಿರಾಟ್​ ಕೊಹ್ಲಿ ಬಗ್ಗೆ ತಾನು ಆಡಿದ ಮಾತುಗಳಿಗೆ ಶ್ರೀಲಂಕಾದ ಕುಶಾಲ್​ ಮೆಂಡೀಸ್ ಕೊನೆಗೂ ಕ್ಷಮೆಯಾಚಿಸಿದ್ದಾರೆ. ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಂತೆ ಕೊನೆಗೂ ತನ್ನ ತಪ್ಪಿನ ಅರಿವಾಗಿ ತನ್ನ ಮಾತುಗಳನ್ನು ಕುಶಾಲ್​ ಮೆಂಡೀಸ್​ ಹಿಂಪಡೆದಿದ್ದಾರೆ.

    ಮೆಂಡೀಸ್​ ಹೇಳಿದ್ದೇನು?
    ನ. 5ರ ಹುಟ್ಟುಹಬ್ಬದ ದಿನದಂದೇ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ವಿಶ್ವಕಪ್​ನ 37ನೇ ಪಂದ್ಯದಲ್ಲಿ ಕೊಹ್ಲಿ (101) ಅಮೋಘ ಶತಕ ಸಿಡಿಸಿದರು. ಇದು ಅವರ 49ನೇ ಶತಕವಾಗಿದ್ದು, ಕ್ರಿಕೆಟ್​ ದಿಗ್ಗಜ ಸಚಿನ್​ ಅವರ ಶತಕ ದಾಖಲೆಯನ್ನು ಸರಿಗಟ್ಟಿದರು. ಕೊಹ್ಲಿ ಅವರ ಈ ಸಾಧನೆಯನ್ನು ಇಡೀ ಕ್ರೀಡಾ ಜಗತ್ತೇ ಕೊಂಡಾಡಿತು. ಆದರೆ, ಕುಶಾಲ್​ ಮೆಂಡಿಸ್​ ಉದ್ಧಟತನದ ಹೇಳಿಕೆ ನೀಡಿದ್ದರು. ನ.6ರಂದು ನವದೆಹಲಿಯ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಸೆಣಸಾಡಿಸಿತು. ದಸನ್​ ಶನಕ ಅನುಪಸ್ಥಿತಿಯಲ್ಲಿ ಮೆಂಡಿಸ್​ ಲಂಕಾ ಕ್ಯಾಪ್ಟನ್​ ಆಗಿದ್ದರು. ಪಂದ್ಯಕ್ಕೂ ಮುನ್ನ ಅಂದರೆ, ನ.5ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಕುಸಾಲ್​ ಮೆಂಡಿಸ್ ಅವರ ಬಳಿ ವಿರಾಟ್​ ಕೊಹ್ಲಿ ಶತಕದ ಬಗ್ಗೆ ಕೇಳಲಾಯಿತು, ಇದಕ್ಕೆ ಉತ್ತರಿಸಿದ ಮೆಂಡಿಸ್, ನಾನ್ಯಾಕೆ ಅವರನ್ನು ಅಭಿನಂದಿಸಬೇಕು? ಎಂಬ ಉತ್ತರ ನೀಡಿದ್ದರು. ಬಳಿಕ ಮೆಂಡಿಸ್​ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಯಿತು. ಮೆಂಡಿಸ್​ ಅಹಂಕಾರ ಮಾತುಗಳನ್ನು ಕ್ರೀಡಾ ಜಗತ್ತು ಖಂಡಿಸಿತು. ಭಾರತದ ವಿರುದ್ಧ ಕೇವಲ 55 ರನ್​ಗೆ ಲಂಕಾ ಆಲೌಟ್​ ಆದ್ದರಿಂದ ಹೊಟ್ಟೆ ಕಿಚ್ಚಿನಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ನೆಟ್ಟಿಗರು ಲಂಕಾ ಕಾಲೆಳೆದಿದ್ದರು.

    ಕ್ಷಮೆಯಾಚನೆ
    ಇದೀಗ ಈ ಘಟನೆ ಬಗ್ಗೆ ಏಷಿಯನ್​ ಮಿರರ್​ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಕುಶಾಲ್​ ಮೆಂಡಿಸ್​, ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಕೊಹ್ಲಿ 49ನೇ ಶತಕ ಬಾರಿಸಿದ್ದಾರೆ ಎಂಬುದು ನನಗೆ ಗೊತ್ತಿರಲಿಲ್ಲ. ಅದಲ್ಲದೆ, ಪತ್ರಕರ್ತರು ಕೂಡ ದಿಢೀರನೇ ಪ್ರಶ್ನೆ ಮಾಡಿದರು. ನನಗೆ ಏನು ಹೇಳಬೇಕು ಎಂದು ತೋಚಲಿಲ್ಲ ಮತ್ತು ಪ್ರಶ್ನೆಯೂ ಕೂಡ ನನಗೆ ಸರಿಯಾಗಿ ಅರ್ಥವಾಗಲಿಲ್ಲ. 49ನೇ ಶತಕ ಬಾರಿಸುವುದು ಅಂದರೆ ಸುಲಭದ ಮಾತಲ್ಲ. ಅಂದು ನಾನು ಏನು ಹೇಳಿದನೋ ಅದು ತಪ್ಪು. ನನ್ನ ಹೇಳಿಕೆಗೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಮೆಂಡಿಸ್​ ಹೇಳಿದರು.

    ಲಂಕಾ ಕಳಪೆ ಸಾಧನೆ
    ಪ್ರಸಕ್ತ ವಿಶ್ವಕಪ್​ ಟೂರ್ನಿಯಲ್ಲಿ ಸಿಂಹಳಿಯರು ಕಳಪೆ ಸಾಧನೆ ಮಾಡಿದ್ದಾರೆ. ಗ್ರೂಪ್​ ಹಂತದ 9 ಪಂದ್ಯಗಳಲ್ಲಿ ಕೇವರ 2ರಲ್ಲಿ ಜಯಗಳಿಸಿದ ಲಂಕಾ, 7 ಪಂದ್ಯಗಳಲ್ಲಿ ಸೋತಿ ಪಟ್ಟಿಯಲ್ಲಿ 9ನೇ ಸ್ಥಾನದೊಂದಿಗೆ ವಿಶ್ವಕಪ್​ ಅಭಿಯಾನ ಮುಗಿಸಿದೆ. ಲಂಕಾದ ಯಾವೊಬ್ಬ ಆಟಗಾರನು ಕೂಡ ಈ ಬಾರಿಯ ವಿಶ್ವಕಪ್​ನಲ್ಲಿ ತಮ್ಮ ಛಾಪು ಮೂಡಿಸಲಿಲ್ಲ.

    ಕ್ರಿಕೆಟ್​ ಸದಸ್ಯತ್ವವನ್ನು ರದ್ದು
    ಐಸಿಸಿ ಮಂಡಳಿಯು ನ.10ರಂದು ಸಭೆ ನಡೆಸಿ, ಶ್ರೀಲಂಕಾ ತಂಡವು ಕ್ರಿಕೆಟ್ ಸದಸ್ಯನಾಗಿ ತನ್ನ ಜವಾಬ್ದಾರಿಗಳನ್ನು ಗಂಭೀರವಾಗಿ ಉಲ್ಲಂಘಿಸುತ್ತಿದೆ ಎಂದು ತೀರ್ಮಾನಿಸಿತು ಮತ್ತು ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಸದಸ್ಯತ್ವ ರದ್ದು ಮಾಡಿದೆ. ಲಂಕಾ ಸರ್ಕಾರ ಕ್ರಿಕೆಟ್ ಮಂಡಳಿಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಐಸಿಸಿ ಸಭೆಯಲ್ಲಿ ಕಂಡುಬಂದಿದ್ದು, ಇದು ಐಸಿಸಿ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ ಇಂತಹ ಮಹತ್ವದ ತೀರ್ಮಾನವನ್ನು ಐಸಿಸಿ ತೆಗೆದುಕೊಂಡಿದೆ. (ಏಜೆನ್ಸೀಸ್​)

    ಶ್ರೀಲಂಕಾ ತಂಡದ ಕ್ರಿಕೆಟ್​ ಸದಸ್ಯತ್ವ ರದ್ದು ಮಾಡಿದ ಐಸಿಸಿ: ಕಾರಣ ಹೀಗಿದೆ…

    ವಿಶ್ವ ಕ್ರಿಕೆಟ್​ನಲ್ಲಿ ರೋಹಿತ್​ರಂತಹ ಆಟಗಾರ ಇನ್ನೊಬ್ಬನಿಲ್ಲ! ಈ ತಾಕತ್ತಿರೋದು ಹಿಟ್​ಮ್ಯಾನ್​ಗೆ ಮಾತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts