More

    ಶ್ರೀಲಂಕಾ ತಂಡದ ಕ್ರಿಕೆಟ್​ ಸದಸ್ಯತ್ವ ರದ್ದು ಮಾಡಿದ ಐಸಿಸಿ: ಕಾರಣ ಹೀಗಿದೆ…

    ನವದೆಹಲಿ: ತಕ್ಷಣದಲ್ಲಿ ಜಾರಿಗೆ ಬರುವಂತೆ ಶ್ರೀಲಂಕಾ ತಂಡದ ಕ್ರಿಕೆಟ್​ ಸದಸ್ಯತ್ವವನ್ನು ರದ್ದು ಮಾಡಿರುವುದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ಐಸಿಸಿ) ಇಂದು (10) ಪ್ರತಿಕಾ ಹೇಳಿಕೆಯಲ್ಲಿ ತಿಳಿಸಿದೆ.

    ನಿನ್ನೆ (ನ.09) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಗ್ರೂಪ್​ ಹಂತದ ತನ್ನ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ ಹೀನಾಯ ಸೋಲು ಅನುಭವಿಸಿ ವಿಶ್ವಕಪ್​ ಅಭಿಯಾನವನ್ನು ಮುಗಿಸಿದ ಒಂದು ದಿನದ ಬೆನ್ನಲ್ಲೇ ಐಸಿಸಿಯಿಂದ ಈ ನಿರ್ಧಾರ ಹೊರಬಿದ್ದಿದೆ. 1996ರ ವಿಶ್ವಕಪ್ ಚಾಂಪಿಯನ್‌ಗಳು 2023ರ ಆವೃತ್ತಿಯಲ್ಲಿ ಆಡಿದ ಒಂಬತ್ತು ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ.

    ಐಸಿಸಿ ಮಂಡಳಿಯು ಇಂದು ಸಭೆ ನಡೆಸಿ, ಶ್ರೀಲಂಕಾ ತಂಡವು ಕ್ರಿಕೆಟ್ ಸದಸ್ಯನಾಗಿ ತನ್ನ ಜವಾಬ್ದಾರಿಗಳನ್ನು ಗಂಭೀರವಾಗಿ ಉಲ್ಲಂಘಿಸುತ್ತಿದೆ ಎಂದು ತೀರ್ಮಾನಿಸಿದೆ. ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಸದಸ್ಯತ್ವ ರದ್ದಾಗಿದೆ. ಲಂಕಾ ಸರ್ಕಾರ ಕ್ರಿಕೆಟ್ ಮಂಡಳಿಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಐಸಿಸಿ ಸಭೆಯಲ್ಲಿ ಕಂಡುಬಂದಿದ್ದು, ಇದು ಐಸಿಸಿ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ ಇಂತಹ ಮಹತ್ವದ ತೀರ್ಮಾನವನ್ನು ಐಸಿಸಿ ತೆಗೆದುಕೊಂಡಿದೆ.

    ಶ್ರೀಲಂಕಾ ತಂಡ ಆತಿಥೇಯ ಭಾರತದ ವಿರುದ್ಧ 302 ರನ್‌ಗಳ ಭಾರೀ ಅಂತರದಿಂದ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಲಂಕಾ ಸರ್ಕಾರವು ತನ್ನ ಕ್ರಿಕೆಟ್​ ಮಂಡಳಿಯನ್ನು ವಜಾಗೊಳಿಸಿತು. ಕ್ರೀಡಾ ಸಚಿವ ರೋಷನ್ ರಣಸಿಂಗ್ ಈ ತೀರ್ಮಾನ ತೆಗೆದುಕೊಂಡರು. ಲಂಕಾ ಸರ್ಕಾರದ ಈ ಹಸ್ತಕ್ಷೇಪ ಐಸಿಸಿ ನಿಯಮಗಳಿಗೆ ವಿರುದ್ಧವಾಗಿದ್ದು, ಲಂಕಾ ಕ್ರಿಕೆಟ್ ಮಂಡಳಿಯನ್ನು ಐಸಿಸಿ ಸಸ್ಪೆಂಡ್​ ಮಾಡಿದೆ.

    ನವೆಂಬರ್​ 21ರಂದು ನಡೆಯಲಿರುವ ಐಸಿಸಿಯ ಮುಂದಿನ ಸಭೆಯಲ್ಲಿ ಮುಂದಿನ ತೀರ್ಮಾನವನ್ನು ಐಸಿಸಿ ತೆಗೆದುಕೊಳ್ಳಲಿದೆ. ಅಲ್ಲಿಯವರೆಗೂ ಲಂಕಾ ಕ್ರಿಕೆಟ್​ ಅಮಾನತಿನಲ್ಲಿರಲಿದ್ದು, ಈ ಅವಧಿಯಲ್ಲಿ ಯಾವುದೇ ಪಂದ್ಯಾವಳಿಗಳಲ್ಲಿ ಸಿಂಹಳಿಯರು ಪಾಲ್ಗೊಳ್ಳುವಂತಿಲ್ಲ. ದ್ವಿಪಕ್ಷಿಯ ಸರಣಿಗಳಲ್ಲೂ ಭಾಗವಹಿಸುವಂತಿಲ್ಲ. ಇದರಿಂದಾಗಿ ಮುಂದಿನ ವರ್ಷ ನಡೆಯಲಿರುವ ಅಂಡರ್-19 ವಿಶ್ವಕಪ್ ಟೂರ್ನಿಯನ್ನು ಲಂಕಾ ಮಿಸ್​ ಮಾಡಿಕೊಳ್ಳುವ ಸಾಧ್ಯತೆ ಇದೆ. (ಏಜೆನ್ಸೀಸ್​)

    ದಕ್ಷಿಣ ಆಫ್ರಿಕಾಗೆ ಜಯ: ಸೋಲಿನೊಂದಿಗೆ ವಿಶ್ವಕಪ್​ ಅಭಿಯಾನ ಮುಗಿಸಿದ ಅಫ್ಘಾನ್​

    ಯಾಕಾಗಲ್ಲ ಈಗಲೂ ಸಾಧ್ಯವಿದೆ! ಸಮೀಸ್​ ತಲುಪಲು ತಮ್ಮದೇ ರಣತಂತ್ರ ವಿವರಿಸಿದ ಪಾಕ್​ ಕ್ಯಾಪ್ಟನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts