More

    ದಕ್ಷಿಣ ಆಫ್ರಿಕಾಗೆ ಜಯ: ಸೋಲಿನೊಂದಿಗೆ ವಿಶ್ವಕಪ್​ ಅಭಿಯಾನ ಮುಗಿಸಿದ ಅಫ್ಘಾನ್​

    ಅಹಮದಾಬಾದ್​: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು (ನ.10) ನಡೆದ ವಿಶ್ವಕಪ್​ ಟೂರ್ನಿಯ 42ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ 5 ವಿಕೆಟ್​ಗಳ ಜಯ ದಾಖಲಿಸಿತು. ಈಗಾಗಲೇ ಹರಿಣಗಳ ಪಡೆ ಸಮೀಸ್​ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದರೆ, ಆಫ್ಘಾನ್​ ಸೋಲಿನೊಂದಿಗೆ ಗ್ರೂಪ್​ ಹಂತದ ಲೀಗ್​ ಅಭಿಯಾನವನ್ನು ಕೊನೆಗೊಳಿಸಿತು.

    ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಆಫ್ಘಾನ್​ ಪಡೆ ನಿಗದಿತ 50 ಓವರ್​​ಗಳಲ್ಲಿ 50 10 ವಿಕೆಟ್​ ನಷ್ಟಕ್ಕೆ 244 ರನ್​ ಕಲೆಹಾಕಿತು. ತಂಡದ ಪರ ಅಜ್ಮತುಲ್ಲಾ ಒಮರ್ಜಾಯ್ (97 ರನ್​, 107 ಎಸೆತ, 7 ಬೌಂಡರಿ, 3 ಸಿಕ್ಸರ್​) ಹೊರತುಪಡಿಸಿದರೆ, ಉಳಿದ ಯಾವೊಬ್ಬ ಬೌಲರ್​ಗಳು ಕೂಡ ನಿರೀಕ್ಷಿತ ಪ್ರದರ್ಶನವನ್ನು ನೀಡಲಿಲ್ಲ.

    ದಕ್ಷಿಣ ಆಫ್ರಿಕಾ ಪರ ಮಾರಕ ಬೌಲಿಂಗ್​ ದಾಳಿ ನಡೆಸಿದ ಜೆರಾಲ್ಡ್ ಕೊಯೆಟ್ಜಿ ಪ್ರಮುಖ 4 ವಿಕೆಟ್​ ಕಬಳಿಸಿದರು. ಉಳಿದಂತೆ ಲುಂಗಿ ಎನ್ಗಿಡಿ ಮತ್ತು ಕೇಶವ್​ ಮಹಾರಾಜ್​ ತಲಾ ಎರಡೆರಡು ವಿಕೆಟ್​ ಕಬಳಿಸಿದರೆ, ಆಂಡಿಲೆ ಫೆಹ್ಲುಕ್ವಾಯೊ ಒಂದು ವಿಕೆಟ್​ಗೆ ತೃಪ್ತಿಪಟ್ಟುಕೊಂಡರು.

    ಆಫ್ಘಾನ್​ ಪಡೆ ನೀಡಿದ 245 ರನ್​ಗಳ ಸವಾಲಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ, 47.3 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 247 ರನ್​ ಕಲೆಹಾಕುವ ಮೂಲಕ ಜಯ ದಾಖಲಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ ಇನ್ನೂ ಎರಡು ಅಂಕಗಳೊಂದಿಗೆ 14 ಅಂಕ ಪಡೆದು ಎರಡನೇ ಸ್ಥಾನವನ್ನು ಭದ್ರವಾಗಿ ಉಳಿಸಿಕೊಂಡಿತು. ತಂಡದ ಪರ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (76), ಕ್ವಿಂಟನ್​ ಡಿಕಾಕ್​ (41) ಹಾಗೂ ಆಂಡಿಲೆ ಫೆಹ್ಲುಕ್ವಾಯೊ (39) ಉತ್ತಮ ಪ್ರದರ್ಶನ ನೀಡಿದರು.

    ಆಫ್ಘಾನ್​ ಪರ ಮೊಹಮ್ಮದ್​ ನಬಿ ಮತ್ತು ರಶೀದ್​ ಖಾನ್​ ತಲಾ ಎರಡು ವಿಕೆಟ್​ ಕಬಳಿಸಿದರೆ, ಮುಜೀಬ್​ ಉರ್​ ರೆಹಮಾನ್​ ಒಂದು ವಿಕೆಟ್​ಗೆ ತೃಪ್ತಿಪಟ್ಟುಕೊಂಡರು. (ಏಜೆನ್ಸೀಸ್​)

    ಯಾಕಾಗಲ್ಲ ಈಗಲೂ ಸಾಧ್ಯವಿದೆ! ಸಮೀಸ್​ ತಲುಪಲು ತಮ್ಮದೇ ರಣತಂತ್ರ ವಿವರಿಸಿದ ಪಾಕ್​ ಕ್ಯಾಪ್ಟನ್​

    VIDEO| ಪ್ರಥಮ್​ ಬಿಗ್​ಬಾಸ್​ ಹೋಗೋಕೆ ಹೆಚ್ಚು ಸಹಾಯ ಮಾಡಿದ್ದೇ ಇವರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts