More

    ಯಾಕಾಗಲ್ಲ ಈಗಲೂ ಸಾಧ್ಯವಿದೆ! ಸಮೀಸ್​ ತಲುಪಲು ತಮ್ಮದೇ ರಣತಂತ್ರ ವಿವರಿಸಿದ ಪಾಕ್​ ಕ್ಯಾಪ್ಟನ್​

    ನವದೆಹಲಿ: ನಿನ್ನೆ (ನ.09) ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್​ ಭರ್ಜರಿ ಗೆಲುವು ದಾಖಲಿಸಿ, ಸೆಮಿಫೈನಲ್​ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಪಾಕಿಸ್ತಾನಕ್ಕೆ ಸೆಮೀಸ್​ ಹಾದಿ ಬಹುತೇಕ ಮುಚ್ಚಿದಂತಾಗಿದೆ. ಒಂದು ವೇಳೆ ಪಾಕ್​ ಸೆಮೀಸ್​ ತಲುಪಬೇಕೆಂದರೆ, ಉಳಿದ ಒಂದು ಪಂದ್ಯದಲ್ಲಿ ಪವಾಡವೇ ಜರುಗಬೇಕಿದೆ. ಆದರೆ, ಅದು ಅಸಾಧ್ಯವಾಗಿದೆ. ಹೀಗಾಗಿ ನಾಯಕ ಬಾಬರ್​ ಅಜಾಮ್​ ಪಡೆ ತವರಿಗೆ ಮರಳಲು ಗಂಟುಮೂಟೆ ಕಟ್ಟುವುದೇ ಸರಿ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದ್ದು, ಇದರ ನಡುವೆಯೇ ಬಾಬರ್​ ಅಜಾಮ್​ ನಾವು ಸಮೀಸ್​ ತಲುಪುವ ಸಾಮರ್ಥ್ಯವಿದೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ, ಸಮೀಸ್​ಗೆ ತಲುಪಲು ತಮ್ಮದೇ ಸ್ಟ್ರಾಟಜಿಯನ್ನು ವಿವರಿಸಿದ್ದಾರೆ.

    ಬಾಬರ್​ ಅಜಾಮ್​ ಹೇಳಿದ್ದೇನು?
    ಶುಕ್ರವಾರ (ನ.10) ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಬರ್​ ಅಜಾಮ್​, ಒಂದು ವೇಳೆ ಫಖರ್​ ಜಮಾನ್​ ಅವರು 20 ರಿಂದ 30 ಓವರ್​ ಕ್ರೀಸ್​ನಲ್ಲಿದ್ದರೆ ನಾವು ದೊಡ್ಡ ಸ್ಕೋರ್​ ಮಾಡುತ್ತೇವೆ ಎಂದಿದ್ದಾರೆ. ನಿರ್ಣಾಯಕ ಪಂದ್ಯಕ್ಕಾಗಿ ತನ್ನ ತಂಡದ ನೀಲನಕ್ಷೆಯನ್ನು ರೂಪಿಸಿರುವ ಅಜಾಮ್​, ಕ್ರಿಕೆಟ್‌ನಲ್ಲಿ ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ನಡೆಯಬಹುದು, ನಾವು ಪಂದ್ಯಾವಳಿಯನ್ನು ಉನ್ನತ ಮಟ್ಟದಲ್ಲಿ ಮುಗಿಸಲು ಪ್ರಯತ್ನಿಸುತ್ತೇವೆ ಎಂದು ಹೇಳುವ ಮೂಲಕ ಕ್ರಿಕೆಟ್‌ನ ಅನಿರೀಕ್ಷಿತ ಸ್ವರೂಪವನ್ನು ಒತ್ತಿ ಹೇಳಿದರು.

    ತಮ್ಮ ಪ್ಲಾನ್​ ಬಗ್ಗೆ ಮಾತನಾಡಿದ ಅಜಾಮ್​, ರನ್​ರೇಟ್​ ಮೇಲೆ ಹೆಚ್ಚು ಗಮನ ಹರಿಸುವುದಾಗಿ ಹೇಳಿದರು. ಮೊದಲ 10 ಓವರ್​ಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಅಜಾಮ್​, ಫಖರ್ ಜಮಾನ್ ಅವರ ಪ್ರಮುಖ ಪಾತ್ರವನ್ನು ತಿಳಿಸುತ್ತಾ ಬ್ಯಾಟಿಂಗ್‌ಗೆ ನಿರ್ದಿಷ್ಟ ತಂತ್ರಗಳನ್ನು ವಿವರಿಸಿದರು. ಒಂದು ವೇಳೆ ಫಖರ್​ ಜಮಾನ್​ ಅವರು 20 ರಿಂದ 30 ಓವರ್​ ಕ್ರೀಸ್​ನಲ್ಲಿದ್ದರೆ ನಾವು ಅಂದುಕೊಂಡಿದ್ದನ್ನು ಸಾಧಿಸುತ್ತೇವೆ. ಪಂದ್ಯದ ವೇಳೆ ಇಫ್ತಿಕರ್ ಅಹ್ಮದ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಪಾತ್ರವೂ ತುಂಬಾ ಪ್ರಮುಖವಾಗಿರುತ್ತದೆ ಎಂದು ಅಜಮ್ ಆತ್ಮವಿಶ್ವಾಸದಿಂದ ಹೇಳಿದರು.

    ಈ ಟೂರ್ನಿಯಲ್ಲಿ ಕೇಳಿಬಂದ ಸಾಕಷ್ಟು ಟೀಕೆಗಳ ಬಗ್ಗೆ ಮಾತನಾಡಿದ ಬಾಬರ್​ ಅಜಾಮ್​, ನನ್ನ ಮೇಲೆ ಯಾವುದೇ ಒತ್ತಡವಿಲ್ಲ, ನಾನು ಕಳೆದ ಮೂರು ವರ್ಷಗಳಿಂದ ಉತ್ತಮ ಪ್ರದರ್ಶನದೊಂದಿಗೆ ತಂಡವನ್ನು ಮುನ್ನಡೆಸಿದ್ದೇನೆ. ಟಿವಿಯಲ್ಲಿ ಕುಳಿತು ಕೆಲವೊಂದಿಷ್ಟನ್ನು ಹೇಳುವುದು ತುಂಬಾ ಸುಲಭ, ನನಗೆ ಸಲಹೆ ನೀಡಲು ಬಯಸುವವರು ನನ್ನ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ತಿರುಗೇಟು ನೀಡಿದರು.

    ಪಾಕ್​ ಮುಂದಿರುವ ಸವಾಲುಗಳೇನು?
    ಕಿವೀಸ್​ ಪಡೆ ಲಂಕಾದೊಂದಿಗೆ ದಾಖಲೆಯ ಜಯದೊಂದಿಗೆ ಸಮಿಫೈನಲ್​ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಪಾಕ್​ ಸಮೀಸ್​ ಸ್ಥಾನ ಕಿವೀಸ್​ ಫಲಿತಾಂಶದ ಮೇಲೆ ಅವಲಂಬಿತವಾಗಿತ್ತು. ಈಗಲೂ ಪಾಕಿಸ್ತಾನಕ್ಕೆ ಸಮೀಸ್​ ಪ್ರವೇಶ ಪಡೆಯಲು ಅವಕಾಶವಿದ್ದರೂ ವಾಸ್ತವವಾಗಿ ಕಿವೀಸ್ ನಾಕೌಟ್‌ಗೆ ಅರ್ಹತೆ ಪಡೆಯುವ ನಾಲ್ಕನೇ ಮತ್ತು ಅಂತಿಮ ತಂಡವಾಗಿದೆ. ಪಾಕ್​ ಸಮೀಸ್​ ಹಾದಿ ಪಡೆಯಲು ಇರುವ ಅಸಾಧ್ಯದ ಲೆಕ್ಕಾಚಾರ ಹೀಗಿದೆ. ನ.11ರಂದು ಪಾಕ್​, ಇಂಗ್ಲೆಂಡ್​ ತಂಡವನ್ನು ಎದುರಿಸಲಿದೆ. ಇದು ಉಭಯ ತಂಡಗಳ ಅಂತಿಮ ಲೀಗ್​ ಪಂದ್ಯವಾಗಿದೆ. ಒಂದು ವೇಳೆ ಪಾಕ್​ ಮೊದಲ ಬ್ಯಾಟ್​ ಮಾಡಿದರೆ 300 ರನ್​ಗಳ ಬೃಹತ್​ ಗುರಿ ನೀಡಿ, ಎದುರಾಳಿ ತಂಡವನ್ನು ಕೇವಲ 13 ರನ್​​ಗೆ ಕಟ್ಟಿಹಾಕಬೇಕಿದೆ. ಒಂದು ವೇಳೆ ಪಾಕ್​ ಮೊದಲು ಬೌಲಿಂಗ್​ ಮಾಡಿದರೆ, ಇಂಗ್ಲೆಂಡ್​ ತಂಡವನ್ನು ಕೇವಲ 50 ರನ್​ಗಳಿಗೆ ಕಟ್ಟಿಹಾಕಿ, ಕೇವಲ 2.3 ಓವರ್​ಗಳಲ್ಲಿ 50 ರನ್​ಗಳನ್ನು ಗಳಿಸಬೇಕಿದೆ. ಆದರೆ, ಇದು ಅಸಾಧ್ಯದ ಮಾತು. ಅಷ್ಟಕ್ಕೂ ಪಾಕ್​ ಎದುರಿಸುತ್ತಿರುವ ತಂಡ ಕಿಕೆಟ್​ ಶಿಶುವಲ್ಲ ಬದಲಾಗಿ ಕ್ರಿಕೆಟ್​ ಜನಕನಾಗಿದ್ದು, ಪಾಕ್​ ಸಮೀಸ್​ ಆಸೆಯನ್ನು ಮರೆಯುವುದೇ ಒಳಿತು. (ಏಜೆನ್ಸೀಸ್​)

    ಪಾಕ್​ ಮುಂದಿರೋದು ಅಂತಿಂಥ ಸವಾಲಲ್ಲ ತಿಪ್ಪರಲಾಗ ಹಾಕಿದ್ರೂ ಆಗಲ್ಲ! ಈ ನಾಲ್ವರ ನಡುವೆ ಸೆಮೀಸ್ ಕದನ ಫಿಕ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts