More

    ಪಾಕ್​ ಮುಂದಿರೋದು ಅಂತಿಂಥ ಸವಾಲಲ್ಲ ತಿಪ್ಪರಲಾಗ ಹಾಕಿದ್ರೂ ಆಗಲ್ಲ! ಈ ನಾಲ್ವರ ನಡುವೆ ಸೆಮೀಸ್ ಕದನ ಫಿಕ್ಸ್

    ನವದೆಹಲಿ: ಅ. 5ರಿಂದ ಆರಂಭವಾದ ಏಕದಿನ ವಿಶ್ವಕಪ್​ ಹಬ್ಬ ಮಹತ್ವದ ಘಟ್ಟಕ್ಕೆ ಬಂದು ತಲುಪಿದೆ. ಲೀಗ್​ ಹಂತದ ಪಂದ್ಯಗಳು ಮುಗಿಯುವ ಹಂತಕ್ಕೆ ಬಂದಿದ್ದು, ಇದೀಗ ಎಲ್ಲೆಡೆ ಸಮಿಫೈನಲ್​ ಫೀವರ್ ಶುರುವಾಗಿದೆ. ಸಮೀಸ್​ ಹಂತಕ್ಕೆ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಯನ್ನು ಭಾರತ ಹೊಂದಿದ್ದರೆ, 2 ಮತ್ತು 3ನೇ ಸ್ಥಾನದಲ್ಲಿ ಕ್ರಮವಾಗಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳಿವೆ. ನಾಲ್ಕನೇ ಸ್ಥಾನದಲ್ಲಿ ನ್ಯೂಜಿಲೆಂಡ್​ ಇದೆ. ಪಾಕಿಸ್ತಾನಕ್ಕೆ ಇನ್ನೂ ಒಂದು ಪಂದ್ಯ ಬಾಕಿ ಇರುವುದರಿಂದ ಸಮೀಸ್​ ಆಸೆ ಜೀವಂತವಾಗಿದೆ. ಆದರೆ, ಈ ಆಸೆ, ಆಸೆಯಾಗೇ ಉಳಿಯಲಿದೆ ಎಂಬುದನ್ನು ಅಂಕಿ-ಅಂಶಗಳು ನಿರೂಪಿಸಿವೆ. ಬಾಬರ್​ ಅಜಾಮ್​ ಪಡೆ ತಿಪ್ಪರಲಾಗ ಹೊಡೆದರೂ ಸಮೀಸ್​ ಕನಸು ನನಸಾಗುವುದು ಅಸಾಧ್ಯ. ಒಂದರ್ಥದಲ್ಲಿ ಹೇಳುವುದಾದರೆ, ಪಾಕ್​ ಪಾಲಿಗೆ ಭಾರೀ ಪವಾಡವೇ ನಡೆಯಬೇಕಿದೆ.

    ಪಾಕ್​ ಸಮೀಸ್​ ಹಾದಿ ಬಹುತೇಕ ಬಂದ್​
    ಇಂದು (ನ.9) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಟೂರ್ನಿಯ 41ನೇ ಹಾಗೂ ನ್ಯೂಜಿಲೆಂಡ್​ ತಂಡದ ಲೀಗ್​ ಹಂತದ ಕೊನೆಯ ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಕಿವೀಸ್​ ಪಡೆ 5 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದ್ದು, ಪಾಕ್​ ತಂಡದ ಸಮೀಸ್​ ಹಾದಿಯನ್ನು ಬಹುತೇಕ ಮುಚ್ಚಿದೆ. ಲಂಕಾ ನೀಡಿದ್ದ 172 ರನ್​ಗಳ ಗುರಿಯನ್ನು ಕಿವೀಸ್​ ಪಡೆ ಕೇವಲ 23.2 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ ತಲುಪಿದ್ದು, ಪಾಕ್​ ಸಮೀಸ್​ ಹಾದಿಗೆ ತಣ್ಣೀರೆರಚಿದೆ.

    ಪಾಕ್​ ಮುಂದಿರುವುದು ಅಂತಿಂಥ ಸವಾಲಲ್ಲ!
    ಸದ್ಯ ಕಿವೀಸ್​ ಪಡೆದ ಲಂಕಾದೊಂದಿಗೆ ದಾಖಲೆಯ ಜಯದೊಂದಿಗೆ ಸಮಿಫೈನಲ್​ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಪಾಕ್​ ಸಮೀಸ್​ ಸ್ಥಾನ ಕಿವೀಸ್​ ಫಲಿತಾಂಶದ ಮೇಲೆ ಅವಲಂಬಿತವಾಗಿತ್ತು. ಈಗಲೂ ಪಾಕಿಸ್ತಾನಕ್ಕೆ ಸಮೀಸ್​ ಪ್ರವೇಶ ಪಡೆಯಲು ಅವಕಾಶವಿದ್ದರೂ ವಾಸ್ತವವಾಗಿ ಕಿವೀಸ್ ನಾಕೌಟ್‌ಗೆ ಅರ್ಹತೆ ಪಡೆಯುವ ನಾಲ್ಕನೇ ಮತ್ತು ಅಂತಿಮ ತಂಡವಾಗಿದೆ. ಪಾಕ್​ ಸಮೀಸ್​ ಹಾದಿ ಪಡೆಯಲು ಇರುವ ಅಸಾಧ್ಯದ ಲೆಕ್ಕಾಚಾರ ಹೀಗಿದೆ. ನ.11ರಂದು ಪಾಕ್​, ಇಂಗ್ಲೆಂಡ್​ ತಂಡವನ್ನು ಎದುರಿಸಲಿದೆ. ಇದು ಉಭಯ ತಂಡಗಳ ಅಂತಿಮ ಲೀಗ್​ ಪಂದ್ಯವಾಗಿದೆ. ಒಂದು ವೇಳೆ ಪಾಕ್​ ಮೊದಲ ಬ್ಯಾಟ್​ ಮಾಡಿದರೆ 300 ರನ್​ಗಳ ಬೃಹತ್​ ಗುರಿ ನೀಡಿ, ಎದುರಾಳಿ ತಂಡವನ್ನು ಕೇವಲ 13 ರನ್​​ಗೆ ಕಟ್ಟಿಹಾಕಬೇಕಿದೆ. ಒಂದು ವೇಳೆ ಪಾಕ್​ ಮೊದಲು ಬೌಲಿಂಗ್​ ಮಾಡಿದರೆ, ಇಂಗ್ಲೆಂಡ್​ ತಂಡವನ್ನು ಕೇವಲ 50 ರನ್​ಗಳಿಗೆ ಕಟ್ಟಿಹಾಕಿ, ಕೇವಲ 2.3 ಓವರ್​ಗಳಲ್ಲಿ 50 ರನ್​ಗಳನ್ನು ಗಳಿಸಬೇಕಿದೆ. ಆದರೆ, ಇದು ಅಸಾಧ್ಯದ ಮಾತು. ಅಷ್ಟಕ್ಕೂ ಪಾಕ್​ ಎದುರಿಸುತ್ತಿರುವ ತಂಡ ಕಿಕೆಟ್​ ಶಿಶುವಲ್ಲ ಬದಲಾಗಿ ಕ್ರಿಕೆಟ್​ ಜನಕನಾಗಿದ್ದು, ಪಾಕ್​ ಸಮೀಸ್​ ಆಸೆಯನ್ನು ಮರೆಯುವುದೇ ಒಳಿತು.

    ಸಮೀಸ್​ನಲ್ಲಿ ಮುಖಾಮುಖಿಯಾಗುವ ತಂಡಗಳು
    ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ಸಮೀಸ್​ ಪ್ರವೇಶ ಪಡೆದಿದ್ದು, ನವೆಂಬರ್​ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸಮಿಫೈನಲ್​ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್​ ಮುಖಾಮುಖಿಯಾಗಲಿವೆ. ನ.16ರಂದು ಕೋಲ್ಕತದ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸಮಿಫೈನಲ್​ನಲ್ಲಿ ಪ್ರಸ್ತುತ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.

    ನ.19ಕ್ಕೆ ವಿಶ್ವಕಪ್​ ಹಬ್ಬಕ್ಕೆ ವಿದ್ಯುಕ್ತ ತೆರೆ
    ಎರಡೂ ಸಮಿಫೈನಲ್​ಗಳಲ್ಲಿ ಗೆಲ್ಲುವ ತಂಡಗಳು ನ. 19ರಂದು ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ನಡೆಯಲಿರುವ ಅಂತಿಮ ಹಾಗೂ ಫೈನಲ್​ ಪಂದ್ಯದಲ್ಲಿ ಸೆಣಸಾಡಲಿದ್ದು, ಗೆಲ್ಲುವ ತಂಡ ವಿಶ್ವಕಪ್​ ಟ್ರೋಫಿಯ ಜತೆಗೆ 4 ಮಿಲಿಯನ್​ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ. ರನ್ನರ್​ ಅಪ್​ ತಂಡಗಳು 2 ಮಿಲಿಯನ್​ ಡಾಲರ್​ ಬಹುಮಾನ ಮೊತ್ತ ಹಾಗೂ ಲೀಗ್​ ಹಂತದಲ್ಲಿ ವಿಜೇತರಾದ ಪ್ರತಿ ತಂಡಕ್ಕೆ ತಲಾ 40 ಸಾವಿರ ಡಾಲರ್​ ಬಹುಮಾನ ಮೊತ್ತವನ್ನು ಪಡೆಯಲಿವೆ. (ಏಜೆನ್ಸೀಸ್​)

    ಲಂಕಾ ವಿರುದ್ಧ ಭರ್ಜರಿ ಗೆಲುವು: ಕಿವೀಸ್​ ಪಡೆಯ ಸಮೀಸ್​ ಸ್ಥಾನ ಬಹುತೇಕ ಖಚಿತ, ಪಾಕ್​ ಹಾದಿ ಮತ್ತಷ್ಟು ಕಠಿಣ

    ಸಮೀಸ್​ನಲ್ಲಿ ಬಲಿಷ್ಠ ಭಾರತ ಸೋಲಿಸಲು ಇರುವುದೊಂದೆ ಆಯ್ಕೆ… ಇದು ಗಿಲ್​ಕ್ರಿಸ್ಟ್​ ತಂತ್ರಗಾರಿಕೆ!

    ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts