More

    ಲಂಕಾ ವಿರುದ್ಧ ಭರ್ಜರಿ ಗೆಲುವು: ಕಿವೀಸ್​ ಪಡೆಯ ಸಮೀಸ್​ ಸ್ಥಾನ ಬಹುತೇಕ ಖಚಿತ, ಪಾಕ್​ ಹಾದಿ ಮತ್ತಷ್ಟು ಕಠಿಣ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು (ನ.9) ನಡೆದ ವಿಶ್ವಕಪ್​ ಟೂರ್ನಿಯ 41ನೇ ಹಾಗೂ ನ್ಯೂಜಿಲೆಂಡ್​ ತಂಡದ ಲೀಗ್​ ಹಂತದ ಕೊನೆಯ ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 5 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಕಿವೀಸ್​ ಪಡೆ ಸಮೀಸ್​ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಕಿವೀಸ್​ ಗೆಲುವು ಪಾಕಿಸ್ತಾನ ಸಮೀಸ್​ ಆಸೆಗೆ ಬಹುದೊಡ್ಡ ಸವಾಲವನ್ನು ತಂದೊಡ್ಡಿದೆ.

    ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಶ್ರೀಲಂಕಾ, 46.4 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 171ರನ್​ಗಳು ಸಾಧಾರಣ ಮೊತ್ತವನ್ನು ಕಲೆಹಾಕಿತು. ಲಂಕಾ ಪರ ಕುಶಾಲ್​ ಪೆರೆರಾ (51) ಮತ್ತು ಮಹೇಶ್ ತೀಕ್ಷಣ (38) ಹೊರತಪಡಿಸಿದರೆ ಉಳಿದ ಯಾವೊಬ್ಬ ಬ್ಯಾಟ್ಸ್​ಮನ್​ಗಳು ಕೂಡ ಕಿವೀಸ್​ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಲಿಲ್ಲ.

    ಕಿವೀಸ್​ ಪರ ಮಾರಕ ಬೌಲಿಂಗ್​ ದಾಳಿ ಮಾಡಿದ ಟ್ರೆಂಟ್​ ಬೌಲ್ಟ್​ ಪ್ರಮುಖ 3 ವಿಕೆಟ್​ ಕಬಳಿಸಿದರೆ, ಲುಕಿ ಫರ್ಗ್ಯೂಸನ್​, ಸ್ಯಾಂಟ್ನರ್​, ರಾಚಿನ್​ ರವೀಂದ್ರ ತಲಾ 2 ವಿಕೆಟ್​ ಪಡೆದು ಮಿಂಚಿದರು. ಉಳಿದಂತೆ ಟಿಮ್​ ಸೌಥಿ 1 ವಿಕೆಟ್​ಗೆ ತೃಪ್ರಿಪಟ್ಟುಕೊಂಡರು.

    ಲಂಕಾ ನೀಡಿದ 172 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಕಿವೀಸ್​ ಪಡೆ ಕೇವಲ 23.2 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ ಗುರಿ ಮುಟ್ಟುವ ಮೂಲಕ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ ಸಮೀಸ್​ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿತು. ಕಿವೀಸ್​ ಪರ ಡೆವನ್​ ಕ್ಯಾನ್​ವೇ (45), ರಾಚಿನ್​ ರವೀಂದ್ರ (42) ಮತ್ತು ಡರೈಲ್​ ಮಿಚೆಲ್​ (43) ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದರು.

    ಲಂಕಾ ಪರ ಆ್ಯಂಜೆಲೋ ಮ್ಯಾಥೀವ್ಸ್​ 2 ವಿಕೆಟ್​ ಪಡೆದರೆ, ಮಹೇಶ್ ತೀಕ್ಷಣ ಹಾಗೂ ದುಷ್ಮಂತ್​ ಚಮೀರಾ ತಲಾ ಒಂದೊಂದು ವಿಕೆಟ್​ ಪಡೆದರು.

    ಪಾಕ್​ ಮುಂದಿದೆ ಬಹುದೊಡ್ಡ ಸವಾಲು
    ಸದ್ಯ ಬಾಬರ್​ ಅಜಾಮ್​ ನೇತೃತ್ವದ ಪಾಕ್​ ತಂಡಕ್ಕೆ ಇನ್ನೂ ಸಮೀಸ್​ ಆಸೆ ಜೀವಂತವಾಗಿದೆ. ಆದರೆ, ಭಾರೀ ಸವಾಲನ್ನು ಪಾಕ್​ ತಂಡ ಎದುರಿಸಬೇಕಾಗಿದೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ, ಪವಾಡವೇ ನಡೆಯಬೇಕಿದೆ. ನ್ಯೂಜಿಲೆಂಡ್ ತಂಡ ಲಂಕಾ ವಿರುದ್ಧ ಭಾರೀ ಅಂತರದಲ್ಲಿ ಗೆಲುವು ಸಾಧಿಸುವುದರಿಂದ ಪಾಕ್​ಗೆ ಸಮೀಸ್​ ಹಾದಿ ಮತ್ತಷ್ಟು ದುರ್ಗಮವಾಗಿದೆ. ನ.11ರಂದು ಇಂಗ್ಲೆಂಡ್​ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಪಾಕ್​ ಗೆದ್ದರೆ ಮಾತ್ರ ಸಾಲದು 200ಕ್ಕೂ ಅಧಿಕ ರನ್​ಗಳ ಅಂತರದಿಂದ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದು ವೇಳೆ ಪಾಕ್​ ಸಮೀಸ್​ ಸ್ಥಾನ ತಪ್ಪಿದರೆ, ಭಾರತದ ವಿರುದ್ಧ ನ್ಯೂಜಿಲೆಂಡ್​ ಸಮಿಫೈನಲ್​ನಲ್ಲಿ ಮುಖಾಮುಖಿಯಾಗಲಿದೆ.

    ಲಂಕಾ ವಿರುದ್ಧ ಕಿವೀಸ್​ ಗೆದ್ದರೂ ಪಾಕಿಸ್ತಾನಕ್ಕಿದೆ ಭಾರತದ ವಿರುದ್ಧ ಸೆಮೀಸ್​ನಲ್ಲಿ ಕಾದಾಡುವ ಅವಕಾಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts