More

    ಲಂಕಾ ವಿರುದ್ಧ ಕಿವೀಸ್​ ಗೆದ್ದರೂ ಪಾಕಿಸ್ತಾನಕ್ಕಿದೆ ಭಾರತದ ವಿರುದ್ಧ ಸೆಮೀಸ್​ನಲ್ಲಿ ಕಾದಾಡುವ ಅವಕಾಶ!

    ನವದೆಹಲಿ: ಪ್ರಸಕ್ತ ವಿಶ್ವಕಪ್ ಟೂರ್ನಿಯೂ ಮಹತ್ವದ ಘಟಕ್ಕೆ ಬಂದಿದೆ. ಈಗಾಗಲೇ ಭಾರತ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಮೂರು ತಂಡಗಳು ಸೆಮಿಫೈನಲ್​ ಸ್ಥಾನ​ ಖಚಿತಪಡಿಸಿಕೊಂಡಿವೆ. ಉಳಿದಿರುವ ಇನ್ನೊಂದು ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದ್ದು, ನ್ಯೂಜಿಲೆಂಡ್​ ಮತ್ತು ಪಾಕಿಸ್ತಾನ ಈ ಎರಡು ತಂಡಗಳಲ್ಲಿ ಯಾರು ಸಮಿಫೈನಲ್​ ಪ್ರವೇಶ ಮಾಡಲಿದ್ದಾರೆ ಎಂಬ ಕುತೂಹಲವಿದೆ.

    ಇಂದು (ನ.09) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್​ ಮತ್ತು ಶ್ರೀಲಂಕಾ ನಡುವೆ 41ನೇ ಪಂದ್ಯ ನಡೆಯುತ್ತಿದ್ದು, ಕಿವೀಸ್​ ಪಾಲಿಗೆ ಇದು ಸಮೀಸ್​ಗೇರಲು ಗೆಲ್ಲಲೇಬೇಕಾದ ಪಂದ್ಯವಾಗಿದೆ. ಇನ್ನೊಂದೆಡೆ ಪಾಕಿಸ್ತಾನಕ್ಕೂ ಸಮೀಸ್​ಗೇರುವ ಆಸೆಯನ್ನು ಜೀವಂತವಾಗಿ ಇರಿಸಿಕೊಂಡಿದೆ. ನಾಲ್ಕನೇ ಸ್ಥಾನದಲ್ಲಿ ಯಾರು ಉಳಿಯುತ್ತಾರೋ ಅವರು ಭಾರತದ ವಿರುದ್ಧ ಸಮಿಫೈನಲ್​ನಲ್ಲಿ ಸೆಣಸಾಡಲಿದೆ.

    ಪ್ರಸ್ತುತ ಸ್ಥಿತಿಯ ಪ್ರಕಾರ, ನ್ಯೂಜಿಲೆಂಡ್​ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ಸಹ 8 ಅಂಕಗಳನ್ನು ಹೊಂದಿದ್ದರೂ ನ್ಯೂಜಿಲೆಂಡ್​, ಅಧಿಕ ರನ್​ರೇಟ್​ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಮೂರು ತಂಡಗಳಿಗೂ ಒಂದೊಂದು ಪಂದ್ಯ ಬಾಕಿ ಇದ್ದು, ಉಳಿದ ಪಂದ್ಯಗಳನ್ನು ಗೆದ್ದಲ್ಲಿ ತಲಾ 10 ಅಂಕಗಳನ್ನು ಹೊಂದಲಿದೆ. ಈ ಮೂರು ತಂಡಗಳಲ್ಲಿ ನ್ಯೂಜಿಲೆಂಡ್​ ಇಂದು ಲಂಕಾ ವಿರುದ್ಧ ಸೆಣಸಾಡುತ್ತಿದ್ದು, ಈ ಪಂದ್ಯವನ್ನು ಗೆದ್ದರೆ ಸಮೀಸ್​ ಸ್ಥಾನ ಬಹುತೇಕ ಖಚಿತವಾಗಲಿದೆ.

    ಪಾಕಿಸ್ತಾನದ ಲೆಕ್ಕಾಚಾರವೇನು?
    ಬಾಬರ್​ ಅಜಾಮ್​ ನೇತೃತ್ವದ ಪಾಕ್​ ತಂಡಕ್ಕೂ ಸಮೀಸ್​ ಆಸೆ ಜೀವಂತವಾಗಿದೆ. ಒಂದು ವೇಳೆ ಲಂಕಾ ವಿರುದ್ಧ ನ್ಯೂಜಿಲೆಂಡ್​ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಆಫ್ಘಾನ್​ ಸೋತು, ನ.11ರಂದು ಇಂಗ್ಲೆಂಡ್​ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಪಾಕ್​ ಗೆದ್ದರೆ ನಿರಾಯಾಸವಾಗಿ ಪಾಕ್​ ಸಮಿಫೈನಲ್​ ಪ್ರವೇಶ ಮಾಡಲಿದೆ.

    ನ್ಯೂಜಿಲೆಂಡ್​ ಗೆದ್ದರೆ: ಒಂದು ವೇಳೆ ಲಂಕಾ ವಿರುದ್ಧ ನ್ಯೂಜಿಲೆಂಡ್​ ಗೆದ್ದಲ್ಲಿ ಪಾಕ್​ಗೆ ಸಮೀಸ್​ ಆಸೆ ಇನ್ನೂ ಜೀವಂತವಾಗಿರಲಿದೆ. ಅದು ಹೇಗೆಂದರೆ, ಲಂಕಾ ವಿರುದ್ಧ ನ್ಯೂಜಿಲೆಂಡ್‌ ಗೆಲುವಿಗಿಂತ ಕನಿಷ್ಠ 130 ರನ್‌ಗಳ ಅಂತರದಿಂದ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಗೆಲ್ಲಬೇಕಾಗಿದೆ. ಉದಾಹರಣೆಗೆ ನ್ಯೂಜಿಲೆಂಡ್ ತಂಡ ಲಂಕಾ ವಿರುದ್ಧ​ 30 ರನ್​ ಅಂತರದಿಂದ ಗೆದ್ದರೆ ಪಾಕಿಸ್ತಾನ, ಕಿವೀಸ್​ ತಂಡದ ರನ್​ರೇಟ್ ಮೀರಿಸಲು 160 ರನ್ ಅಂತರದಿಂದ ಗೆಲ್ಲಬೇಕಾಗುತ್ತದೆ. ​
    ಮುಖ್ಯವಾಗಿ ಗಮನಿಸಬೇಕಾದ ಸನ್ನಿವೇಶದಲ್ಲಿ, ನ್ಯೂಜಿಲೆಂಡ್ ಇಂದು ರಾತ್ರಿ ಸುಮಾರು 150 ಎಸೆತಗಳಲ್ಲಿ ಲಂಕಾ ವಿರುದ್ಧ ಗೆದ್ದರೆ, ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನದ ಹೋರಾಟವನ್ನು ನಿಜವಾಗಿಯೂ ಕಷ್ಟಕ್ಕೆ ದೂಡುತ್ತದೆ. ಪಾಕಿಸ್ತಾನವು ಇಂಗ್ಲೆಂಡ್ ವಿರುದ್ಧ 270+ ರನ್‌ಗಳ ಬೃಹತ್ ಅಂತರದಿಂದ ಅಥವಾ 275 ಎಸೆತಗಳು ಬಾಕಿಯಿರುವಾಗಲೇ ಗೆಲ್ಲಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದರೆ, ಇದು ಸಣ್ಣ ಸಾಧನೆಯಂತೂ ಅಲ್ಲ.

    ಆಫ್ಘಾನ್​ಗೂ ಇದೆ ಅವಕಾಶ
    ಆಫ್ಘಾನ್​ ತಂಡ ಕಿವೀಸ್​ ಮತ್ತು ಪಾಕ್​ ತಂಡಗಳ ರನ್​ರೇಟ್​ಗಿಂತ ಹಿಂದುಳಿದಿದ್ದರೂ ಈಗಲೂ ಆಫ್ಘಾನ್​ಗೆ ಸಮೀಸ್​ ಆಸೆ ಜೀವಂತವಾಗಿದೆ. ಆದರೆ, ಪವಾಡ ನಡೆಯಬೇಕಷ್ಟೇ. ಉಳಿದಿರುವ ಒಂದೊಂದು ಪಂದ್ಯಗಳಲ್ಲಿ ನ್ಯೂಜಿಲೆಂಡ್​ ಮತ್ತು ಪಾಕಿಸ್ತಾನ ಸೋಲಬೇಕು ಮತ್ತು ಆಫ್ಘಾನಿಸ್ತಾನ ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲಬೇಕಿದೆ. ಒಂದು ವೇಳೆ ಇದು ನಡೆದಿದ್ದಲ್ಲಿ ಆಫ್ಘಾನ್​ ಸಮಿಫೈನಲ್​ ಹಂತಕ್ಕೆ ಏರಲಿದ್ದು, ಭಾರತದೊಂದಿಗೆ ಸೆಣಸಾಡಲಿದೆ.

    ಸದ್ಯದ ಸನ್ನಿವೇಶ ನೋಡಿದರೆ ಇಂದು ನಡೆಯುತ್ತಿರುವ ಪಂದ್ಯದಲ್ಲಿ ನ್ಯೂಜಿಲೆಂಡ್​ ಲಂಕಾ ವಿರುದ್ಧ ಸುಲಭ ಗೆಲುವು ಸಾಧಿಸುವ ಸಾಧ್ಯತೆ ಇದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಶ್ರೀಲಂಕಾ 46.4 ಓವರ್​ಗಳಲ್ಲಿ 171 ರನ್​ಗಳ ಸಾಧಾರಣ ಮೊತ್ತಕ್ಕೆ ಸರ್ವಪತನ ಕಂಡಿದೆ. ಗುರಿಬೆನ್ನತ್ತಿರುವ ನ್ಯೂಜಿಲೆಂಡ್​ ಗೆಲುವು ಸಾಧಿಸುವ ಸಾಧ್ಯತೆ ಇದೆ. (ಏಜೆನ್ಸೀಸ್​)

    80 ಲಕ್ಷ ರೂ. ವಿಮೆ ಹಣಕ್ಕಾಗಿ ಭಿಕ್ಷುಕನನ್ನು ಕೊಂದು ತನ್ನದೇ ಸಾವೆಂದು ಬಿಂಬಿಸಿದ ಕಿರಾತಕ 17 ವರ್ಷದ ಬಳಿಕ ಅರೆಸ್ಟ್!

    ಪೊಳ್ಳು ಗ್ಯಾರಂಟಿಗಳಿಂದಾಗಿ ದೀಪಾವಳಿ ಹೊತ್ತಲ್ಲೇ ರಾಜ್ಯ ದಿವಾಳಿ: ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆ ಕೊಟ್ಟಿದ್ದೇಕೆ ಮಾಜಿ ಸಿಎಂ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts