VIDEO | ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಭಮನ್​​ ಗಿಲ್ ಕೊಟ್ಟ ಶಾಕ್​ಗೆ ಹೆದರಿದ ವಿರಾಟ್​​ ಕೊಹ್ಲಿ

virat
Published on

ಬೆಂಗಳೂರು: ಕ್ರಿಕೆಟ್​ ಎನ್ನುವುದು ಇಂದಿನ ಯುವ ಪೀಳಿಗೆಯಲ್ಲಿ ಸಖತ್​ ಕ್ರೇಜ್​​ ಹುಟ್ಟಿಸಿರುವ ಆಟವಾಗಿದೆ. ಸೆಲೆಬ್ರೆಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೂ ಕ್ರಿಕೆಟ್​​ ಗಮನ ಸೆಳೆಯುತ್ತದೆ. ಕ್ರಿಕೆಟ್​ ಆಟಗಾರರ ಆಟದ ವೈಖರಿ ಮಾತ್ರವಲ್ಲ ಅವರ ಪ್ರತಿಯೊಂದು ಹೆಜ್ಜೆಯನ್ನು ಫ್ಯಾನ್ಸ್​​ ಫಾಲೋ ಮಾಡುತ್ತಿರುತ್ತಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ವಿಶ್ವಕಪ್​ ಪಂದ್ಯದಲ್ಲಿ ಆತಿಥೇಯ ಭಾರತ, ಎದುರಾಳಿ ನೆದರ್ಲೆಂಡ್ಸ್​ ವಿರುದ್ಧ 160 ರನ್​ಗಳ ಭಾರೀ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಅಜೇಯ ಓಟವನ್ನು ಮುಂದುವರಿಸಿದೆ. ನಿನ್ನೆ ಪಂದ್ಯದಲ್ಲಿ ಟೀಮ್​ ಇಂಡಿಯಾ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ಸಂಘಟಿತ ಪ್ರದರ್ಶನವನ್ನು ನೀಡಿತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಅರ್ಧಶತಕ ಬಾರಿಸಿದರು. ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಇಬ್ಬರೂ ಶತಕ ಬಾರಿಸಿದರು. ಈ ಪಂದ್ಯ ಸ್ಮರಣೀಯ ಕ್ಷಣವೊಂದಕ್ಕೆ ಸಾಕ್ಷಿಯಾಯಿತು.

ನಿನ್ನೆ ಪಂದ್ಯ ಪ್ರಾರಂಭವಾಗುವ ಮೊದಲು ಭಾರತ ತಂಡದ ಆಟಗಾರರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್​ ಪ್ರ್ಯಾಕ್ಟಿಸ್​​ ಮಾಡಿದ್ದಾರೆ. ಈ ವೇಳೆ ವಿರಾಟ್​​ ಕೊಹ್ಲಿ ಅವರಿಗೆ ಶುಭನಮ್​ ಗಿಲ್​ ಅವರು ಚಮಕ್​​ ಕೊಟ್ಟಿಸಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

ವಿಡಿಯೋದಲ್ಲಿ ಏನಿದೆ?: ಭಾರತ ತಂಡದ ಆಟಗಾರರು ಪ್ರಾಕ್ಟಿಸ್​​ ಮಾಡುತ್ತಿರುತ್ತಾರೆ. ಈ ವೇಳೆ ವಿರಾಟ್​​ ಬ್ಯಾಟ್​​ ಹಿಡಿದುಕೊಂಡು ಮುಂದೆ ಸಾಗುತ್ತಿದ್ದರು. ಈ ವೇಳೆ ಶುಭಮನ್​​ ಗಿಲ್ ಕಾಲನ್ನು ಮೇಲಕ್ಕೆ ಎತ್ತಿ ಎಕ್ಸಸೈಜ್​​ ಮಾಡುತ್ತಾ ಹಿಂದೆ ಇಂದ ಬರುತ್ತಾರೆ. ಈ ವೇಳೆ ವಿರಾಟ್​​ ಒಂದು ಕ್ಷಣ ಹೆದರಿ ನಿಲ್ಲುತ್ತಾರೆ. ಈ ವೇಳೆ ತಮಾಷೆಯಾಗಿ ವಿರಾಟ್, ಶುಭಮನ್​​ ಗಿಲ್ ಕಡೆ ​​ ಬ್ಯಾಟ್​​ ಬಿಸಿ ಹೊಡೆಯುವಂತೆ ಮಾಡುತ್ತಾರೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಈ ವಿಡಿಯೋ ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿ, ಸೋ...ಫನ್ನಿ.... ಎಂದು ಕಾಮೆಂಟ್​​ ಮಾಡುತ್ತಿದ್ದಾರೆ. ಈ ವಿಡಿಯೋ ವಿರಾಟ್​​ ಅಭಿಮಾನಿಗಳಿಗೆ ಸಖತ್​ ಇಷ್ಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net