BBKS10: ಶಾಲೆಗೆ ಚಕ್ಕರ್​ ಹಾಕುವಂತಿಲ್ಲ! ಶಿಕ್ಷಕಿ ತನಿಷಾ ಮಾತು ಕೇಳದ ವರ್ತೂರು ಮಾಡಿದ್ದು ಕಿತಾಪತಿ

ವಿಜಯವಾಣಿ (39)
Published on

ಬೆಂಗಳೂರು: ಬಿಗ್ ಬಾಸ್​ ಕನ್ನಡ ಸೀಸನ್​ 10ರ ಸ್ಪರ್ಧಿಗಳು ಇದೀಗ 11ನೇ ವಾರಕ್ಕೆ ಕಾಲಿಟ್ಟಿದ್ದು, ನಾಮಿನೇಷನ್​ ಬಿಸಿ ತಟ್ಟಿದ ಬೆನ್ನಲ್ಲೇ ಬಿಗ್​ ಬಾಸ್​ ಮನೆಯ ಸದಸ್ಯರೆಲ್ಲರಿಗೂ ಸದ್ಯ ಅವರ ಬಾಲ್ಯಕ್ಕೆ ಕರೆದೊಯ್ದಿದ್ದಾರೆ. ಬಿಗ್ ಬಾಸ್​ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾಗಿ ಟಾಸ್ಕ್ ಆರಂಭಿಸಿರುವ ಸ್ಪರ್ಧಿಗಳು ಭಾರೀ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.

ಶಾಲೆಯ ಮಕ್ಕಳಾಗಿ ಕಾಣಿಸಿಕೊಂಡಿರುವ ಸ್ಪರ್ಧಿಗಳ ಪೈಕಿ ತನಿಷಾ ಹೆಡ್​ ಮಿಸ್ ಆಗಿದ್ದಾರೆ. ಕಾರ್ತಿಕ್, ಸಂಗೀತಾ ಮುಂದಿನ ಬೆಂಚ್​ನಲ್ಲಿ ಕುಳಿತು ಮಸ್ತಿ ಮಾಡಿದ್ರೆ, ಅತ್ತ ವರ್ತೂರು ಸಂತೋಷ್ ಕಾಲೆಳೆಯುವ ಪ್ರಯತ್ನದಲ್ಲಿ ಇತರೆ ಸದಸ್ಯರು ಮಜಾ ಮಾಡಿದ್ದಾರೆ.

ವರ್ತೂರು ಸಂತೋಷ್​ ಅವರನ್ನು ಬೆಂಚ್ ಮೇಲೆ ನಿಲ್ಲಿಸಿದ ಶಿಕ್ಷಕಿ ತನಿಷಾ, ವರ್ತೂರು ಮಾತು, ತಲೆಹರಟೆಗೆ ನಾಚಿ ನೀರಾಗಿದ್ದಾರೆ. ಇಷ್ಟು ದಿನ ಮನೆಯೊಳಗೆ ಮೂಡಿದ್ದ ಬೇಸರ, ಕೋಪ-ತಾಪಗಳ ಮಧ್ಯೆ ಇಂದು ಮಕ್ಕಳ ನಗುವಿನ ತರಲೆ-ತಮಾಷೆ ಮಾತ್ರ ವೀಕ್ಷಕರಿಗೆ ಕಾಣ ಸಿಗಲಿದೆ. ಇಂದಿನ ಸಂಚಿಕೆಯಲ್ಲಿ ನಗುವಿಗೆ ಕಿಂಚಿತ್ತು ಕೊರತೆಯಿಲ್ಲ ಎಂಬುದು ಸದ್ಯ ಬಿಡುಗಡೆಯಾಗಿರುವ ಪ್ರೋಮೋ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net