

ರಾಜಸ್ಥಾನ: ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ ಹತ್ಯೆಯಲ್ಲಿ ಭಾಗಿಯಾಗಿದ್ದ ಶೂಟರ್‌ಗಳಲ್ಲಿ ಓರ್ವ ವ್ಯಕ್ತಿಗೆ ಶಸ್ತ್ರಾಸ್ತ್ರ ಮತ್ತು ವಸತಿ ವ್ಯವಸ್ಥೆ ಮಾಡಿದ್ದ ಮಹಿಳೆಯನ್ನು ಇದೀಗ ಪೊಲೀಸರು ಬಂಧಿಸಿದ್ದು, ಘಟನೆ ರಾಜಸ್ಥಾನದ ಜೈಪುರದಲ್ಲಿ ಸೋಮವಾರ (ಡಿ. 11) ವರದಿಯಾಗಿದೆ.
ಮಹಿಳೆ, ಪೂಜಾ ಸೈನಿ ಮತ್ತು ಆಕೆಯ ಪತಿ ಮಹೇಂದ್ರ ಮೇಘವಾಲ್ ಡಿಸೆಂಬರ್ 5 ರಂದು ಹತ್ಯೆ ನಡೆಸುವ ಮುನ್ನ ಸುಮಾರು ಒಂದು ವಾರ ಜೈಪುರದಲ್ಲಿ ದಂಪತಿಗಳ ಬಾಡಿಗೆ ಫ್ಲಾಟ್‌ನಲ್ಲಿ ತಂಗಿದ್ದ ಶೂಟರ್‌ಗಳಲ್ಲಿ ಒಬ್ಬನಾದ ನಿತಿನ್ ಫೌಜಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನಗಾಗಿ ಎರಡು ಪಿಸ್ತೂಲುಗಳನ್ನು ತೆಗೆದುಕೊಂಡ ಫೌಜಿ, ರಾಥೋರ್‌ಗಾಗಿ ಒಂದು ಪಿಸ್ತೂಲು ಮತ್ತು ಎರಡು ಮ್ಯಾಗಜೀನ್‌ಗಳನ್ನು ತೆಗೆದುಕೊಂಡಿದ್ದ. ಆರೋಪಿ ಫೌಜಿಗೆ ಮಹಿಳೆ ಆಹಾರದ ವ್ಯವಸ್ಥೆಯನ್ನು ಕೂಡ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮೀರ್ ಎಂದು ಕರೆಯಲ್ಪಡುವ ಇತಿಹಾಸ ಶೀಟರ್ ಮೇಘವಾಲ್ ಪ್ರಸ್ತುತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಬಲೆ ಬೀಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಸ್ಥಾನದ ಭೋಂಡ್ಸಿ ಜೈಲಿನ ಮೂವರು ಕೈದಿಗಳನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿದ್ದಾರೆಂದು ವರದಿಯಾಗಿದೆ. ಅವರನ್ನೆಲ್ಲಾ ಜೈಪುರ ಪೊಲೀಸರು ಗೋಗಾಮೆಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆಯ ಪ್ರಮುಖ ಶೂಟರ್ ನಿತಿನ್ ಫೌಜಿಯೊಂದಿಗೆ ಮೂವರು ಸಂಪರ್ಕದಲ್ಲಿದ್ದರು ಎಂದು ಪೊಲೀಸರು ಉಲ್ಲೇಖಿಸಿದ್ದಾರೆ. ಅವರಲ್ಲಿ ಇಬ್ಬರು ಫೌಜಿಯೊಂದಿಗೆ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬುದು ತಿಳಿದುಬಂದಿದೆ. ಇಬ್ಬರು ಶೂಟರ್‌ಗಳಾದ ನಿತಿನ್ ಫೌಜಿ ಮತ್ತು ರೋಹಿತ್ ರಾಥೋಡ್ ಮತ್ತು ಅವರ ಸಹಚರರಲ್ಲಿ ಒಬ್ಬರಾದ ಉಧಮ್ ಸಿಂಗ್ ಅವರನ್ನು ದೆಹಲಿ ಪೊಲೀಸರು ಮತ್ತು ರಾಜಸ್ಥಾನ ಪೊಲೀಸರ ಜಂಟಿ ತಂಡ ಶನಿವಾರ ರಾತ್ರಿ ಚಂಡೀಗಢದಲ್ಲಿ ಬಂಧಿಸಿದೆ.
ಆರೋಪಿಗಳನ್ನು ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮ್ಯಾಜಿಸ್ಟ್ರೇಟ್ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ನವೆಂಬರ್ 5 ರಂದು ಜೈಪುರದ ಅವರ ಮನೆಯೊಳಗೆ ಅಪರಿಚಿತ ವ್ಯಕ್ತಿಗಳು ಗೊಗಮೆಡಿಯನ್ನು ಗುಂಡಿಕ್ಕಿ ಕೊಂದಿದ್ದರು. ಕೊಲೆಯಾದ ಕೂಡಲೇ, ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿದ್ದ ದರೋಡೆಕೋರ ರೋಹಿತ್ ಗೋಡಾರಾ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).