ಸೆಮೀಸ್‌ಗೇರಿದ ಕರ್ನಾಟಕ: ವೈಶಾಕ್ ವಿಜಯ್ ಕುಮಾರ್  ಬಿಗಿ ಬೌಲಿಂಗ್ ದಾಳಿ

New-Project-3-4
Published on

ರಾಜ್‌ಕೋಟ್: ಸವಾಂರ್ಗಿಣ ನಿರ್ವಹಣೆ ತೋರಿದ ಕರ್ನಾಟಕ ತಂಡ ದೇಶೀಯ ಏಕದಿನ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಸೆಮಿೈನಲ್‌ಗೆ ಲಗ್ಗೆಯಿಟ್ಟಿದೆ. ಸೊಮವಾರ ನಡೆದ ಕ್ವಾರ್ಟರ್‌ೈನಲ್ ಪಂದ್ಯದಲ್ಲಿ ವೇಗಿ ವೈಶಾಕ್ ವಿಜಯ್ ಕುಮಾರ್ (44ಕ್ಕೆ4) ಬಿಗಿ ಬೌಲಿಂಗ್ ದಾಳಿ ಹಾಗೂ ಆರಂಭಿಕ ಆರ್.ಸಮರ್ಥ್ (72*ರನ್, 133 ಎಸೆತ, 7 ಬೌಂಡರಿ) ಸಮಯೋಚಿತ ಬ್ಯಾಟಿಂಗ್ ಬಲದಿಂದ ಕರ್ನಾಟಕ 7 ವಿಕೆಟ್‌ಗಳಿಂದ ವಿದರ್ಭ ತಂಡದ ಎದುರು ಭರ್ಜರಿ ಗೆಲುವು ದಾಖಲಿಸಿದೆ.

ಸನೋಸರ ಕ್ರೀಡಾಂಗಣದ ‘ಎ’ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ವಿದರ್ಭ, 44.5 ಓವರ್‌ಗಳಲ್ಲಿ 173 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ನಾಯಕ ಮಯಾಂಕ್ ಅಗರ್ವಾಲ್ (51 ರನ್, 64 ಎಸೆತ, 6 ಬೌಂಡರಿ,1 ಸಿಕ್ಸರ್) ಹಾಗೂ ಉಪನಾಯಕ ಆರ್.ಸಮರ್ಥ್ ಮೊದಲ ವಿಕೆಟ್‌ಗೆ ಒದಗಿಸಿದ 82 ರನ್‌ಗಳ ಉತ್ತಮ ಆರಂಭದ ಬಲದಿಂದ ಕರ್ನಾಟಕ, 40.3 ಓವರ್‌ಗಳಲ್ಲಿ 3 ವಿಕೆಟ್‌ಗೆ 177 ರನ್‌ಗಳಿಸಿ ಉಪಾಂತ್ಯಕ್ಕೇರಿತು.

ವಿದರ್ಭ: 44.5 ಓವರ್‌ಗಳಲ್ಲಿ 173 (ಅಕ್ಷಯ್ 32, ಕರುಣ್ ನಾಯರ್ 5, ಯಶ್ 38, ಶುಭಂ 41, ದರ್ಶನ್ 20, ವೈಶಾಕ್ 44ಕ್ಕೆ4, ಮನೋಜ್ ಭಾಂಡಗೆ 27ಕ್ಕೆ2).
ಕರ್ನಾಟಕ: 40.3 ಓವರ್‌ಗಳಲ್ಲಿ 3 ವಿಕೆಟ್‌ಗೆ 177 (ಸಮರ್ಥ್ 72*, ಮಯಾಂಕ್ 51, ನಿಕಿನ್ ಜೋಸ್ 31, ಶ್ರೀಜೀತ್ 15, ಹರ್ಷ ದುಬೆ 32ಕ್ಕೆ2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net