

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನ್ನರ್ ಪಟ್ಟ ಯಾರಿಗೆ ಎಂಬ ಒಂದೇ ಒಂದು ಪ್ರಶ್ನೆ ಸದ್ಯ ವೀಕ್ಷಕರನ್ನು ಬೆಂಬಿಡದೆ ಕಾಡುತ್ತಿದ್ದು, ಯಾರಾಗಲಿದ್ದಾರೆ ಈ ಸೀಸನ್ನ ಅಧಿಪತಿ ಎಂಬುದನ್ನು ಭಾನುವಾರದ ಸಂಚಿಕೆಯ ಅಂತಿಮ ಕ್ಷಣದವರೆಗೂ ಕಾದು ನೋಡಬೇಕಿದೆ. ಈ ಮಧ್ಯೆ ನಿನ್ನೆ ನಡೆದ ಗ್ರ್ಯಾಂಡ್ ಫಿನಾಲೆಯ ಮೊದಲ ದಿನದಂದು ಫೈನಲಿಸ್ಟ್ ಸ್ಥಾನದಲ್ಲಿ ಕುಳಿತ್ತಿದ್ದ ಟಾಪ್ ಆರು ಸ್ಪರ್ಧಿಗಳ ಪೈಕಿ ತುಕಾಲಿ ಸಂತೋಷ್ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಇದೀಗ ಫಿನಾಲೆ ಹಣಾಹಣಿಯಲ್ಲಿದ್ದ ಕಾರ್ತಿಕ್, ಸಂಗೀತಾ, ವಿನಯ್, ವರ್ತೂರು ಸಂತೋಷ್ ಮತ್ತು ಪ್ರತಾಪ್ ಪೈಕಿ ಮತ್ತೊಬ್ಬರು ಇದೀಗ ಶಾಕಿಂಗ್ ರೀತಿಯಲ್ಲಿ ಎಲಿಮಿನೇಟ್ ಆಗಿದ್ದಾರೆ.
ಇದನ್ನೂ ಓದಿ: ಜೈಘೋಷಗಳ ಮಧ್ಯೆ ಅದ್ದೂರಿ ರಥೋತ್ಸವ
ಇಂದು ಫಿನಾಲೆಯ ಕೊನೆಯ ಹಂತವಾಗಿದ್ದು, ಯಾರು ಗೆಲುವಿನ ಕಿರೀಟ್ ಧರಿಸಿ, ಸೀಸನ್ 10ರ ಪಟ್ಟವನ್ನು ಅಲಂಕರಿಸಲಿದ್ದಾರೆ ಎಂಬುದು ಇನ್ನೇನು ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ. ಈ ಮಧ್ಯೆ ಫಿನಾಲೆಯ ಟಾಪ್ ಐದು ಸರ್ಧಿಗಳ ಪೈಕಿ ಮತ್ತೊಬ್ಬರು ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಹೊರಬಂದಿದ್ದಾರೆ. ಮನೆಯೊಳಗೆ ಸರ್ಪ್ರೈಸ್ ಎಂಟ್ರಿ ಕೊಟ್ಟ ನಮ್ರತಾ, ಸುದೀಪ್ ಹಸ್ತಾಂತರಿಸಿದ ಚೀಟಿಯನ್ನು ಎಲ್ಲರ ಮುಂದೆ ತರೆದಿದ್ದಾರೆ.
ಈ ಚೀಟಿಯಲ್ಲಿ ಯಾರು ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ಬರೆಯಲಾಗಿದೆ. ಇವರು ನಮ್ರತಾಗೆ ಕೂಡ ಆಪ್ತರು ಎಂಬುದು ಇಲ್ಲಿ ಗಮನಾರ್ಹ. ಐದು ಸ್ಪರ್ಧಿಗಳ ಮುಂದೆ ಡ್ಯಾನ್ಸ್ ಪ್ರದರ್ಶನ ನೀಡಿದ ನಮ್ರತಾ, ತಮ್ಮೊಂದಿಗೆ ಎಲಿಮಿನೇಟ್ ಆದವರನ್ನು ಕರೆದುಕೊಂಡು ಹೋಗಿದ್ದಾರೆ ಎಂಬುದು ಸದ್ಯದ ಸುಳಿವು. ಅಷ್ಟಕ್ಕೂ ಹೊರಬಂದವರು ಯಾರು? ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.