IPL 2024: ಗಾಯದಿಂದ ಚೇತರಿಸಿಕೊಂಡ ಹಾರ್ದಿಕ್ ಪಾಂಡ್ಯ​; ಮುಂಬೈ ತಂಡವನ್ನು ಮುನ್ನಡೆಸಲು ಸಜ್ಜು!

ವಿಜಯವಾಣಿ - 2024-01-28T163818.364
Published on

ಹೊಸದಿಲ್ಲಿ: 2023ರ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಆ್ಯಂಕಲ್​ ಇಂಜುರಿಯಾದ ಕಾರಣ ಟೂರ್ನಿಯಿಂದ ಹೊರಗುಳಿದ ಟೀಮ್ ಇಂಡಿಯಾದ ಸ್ಟಾರ್​ ಅಲ್​​ರೌಂಡರ್​ ಹಾರ್ದಿಕ್ ಪಾಂಡ್ಯ, ಇದೀಗ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಕುರಿತು ಹೊಸ ಪೋಸ್ಟ್​ ಮೂಲಕ ಮಾಹಿತಿ ನೀಡಿದ್ದಾರೆ.

ಗುಜರಾತ್ ಟೈಟನ್ಸ್​ ತಂಡದ ನಾಯಕನಾಗಿ ತಂಡವನ್ನು ಎರಡು ಬಾರಿ ಫೈನಲ್​ಗೆ ಕರೆದೊಯ್ದು ಒಂದು ಬಾರಿ ಟ್ರೋಫಿ ತಂದುಕೊಟ್ಟ ಈ ಸ್ಟಾರ್​ ಆಟಗಾರನ ಯಶಸ್ಸನ್ನು ಕೊಂಡಾಡಿದ ಅವರ ಅಭಿಮಾನಿಗಳು, ಪಾಂಡ್ಯ ಪರ್ಫೆಕ್ಟ್​ ಕ್ಯಾಪ್ಟನ್ ಎಂದು ಮೆಚ್ಚಿದ್ದರು. ಆದ್ರೆ, ಹಾರ್ದಿಕ್​ ತೆಗೆದುಕೊಂಡ ಆ ಒಂದು ನಿರ್ಣಯ ಫ್ಯಾನ್ಸ್​ಗಳ ದಿಢೀರ್​ ಬೇಸರಕ್ಕೆ ಕಾರಣವಾಯಿತು.

ಗುಜರಾತ್ ಬಿಟ್ಟು ಮತ್ತೇ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ ಹಾರ್ದಿಕ್​, ಭಾರೀ ಮೊತ್ತದ ಬೇಡಿಕೆಯನ್ನು ಮುಂದಿಟ್ಟು ಮುಂಬೈ ಸೇರಿದರು. ಈ ವಿಷಯ ಮುನ್ನೆಲೆಗೆ ಬರುತ್ತಿದ್ದಂತೆ ತೀವ್ರ ಬೇಸರ ಹೊರಹಾಕಿದ ಕ್ರಿಕೆಟ್ ಅಭಿಮಾನಿಗಳು, ನಾಯಕನಾಗಿ ರೋಹಿತ್ ಶರ್ಮಾ ಮುಂದುವರೆಯುವುದು ಸೂಕ್ತ ಎಂದು ಅಭಿಪ್ರಾಯಿಸಿದರು.

ಈ ವಿವಾದಗಳ ಬೆನ್ನಲ್ಲೇ ಮುಂಬೈ ತಂಡಕ್ಕೆ ಕ್ಯಾಪ್ಟನ್​ ಆಗಿ ಆಡಲಿರುವ ಪಾಂಡ್ಯ ಇಂಜುರಿಯಿಂದ ಹಿಂತಿರುಗುವುದು ಅನುಮಾನ ಎಂದು ಅನೇಕರು ಅಂದುಕೊಂಡಿದ್ದರು. ಆದ್ರೆ, ಇದೀಗ ಗಾಯದಿಂದ ಚೇತರಿಸಿಕೊಂಡ ಹಾರ್ದಿಕ್​ ತಾವು 2024ರ ಐಪಿಎಲ್​ನಲ್ಲಿ ತಂಡವನ್ನು ಮುನ್ನಡೆಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net