More

    ಕರ್ನಾಟಕ ಸುವರ್ಣ ಸಂಭ್ರಮ ರಥಯಾತ್ರೆ ವಿಜಯಪುರ ಜಿಲ್ಲೆಗೆ ಆಗಮನ

    ಆಲಮೇಲ: ತಾಲೂಕಿನ ಗಡಿಗ್ರಾಮ ದೇವಣಗಾಂವ ಭೀಮಾ ನದಿ ತೀರದ ಸೇತುವೆಯ ಮೇಲೆ ಕರ್ನಾಟಕ ಸುವರ್ಣ ಸಂಭ್ರಮ ರಥಯಾತ್ರೆಗೆ ಆಲಮೇಲ ತಾಲೂಕಾಡಳಿತ ವತಿಯಿಂದ ಶನಿವಾರ ಅದ್ದೂರಿ ಸ್ವಾಗತ ಮಾಡಿಕೊಳ್ಳಲಾಯಿತು.

    ಕಲಬುರಗಿ ಜಿಲ್ಲೆಯ ಅಜಲಪುರ ತಾಲೂಕಿನಿಂದ ವಿಜಯಪುರ ಜಿಲ್ಲೆಗೆ ರಥಯಾತ್ರೆ ಆಗಮಿಸಿತು. ತಹಸೀಲ್ದಾರ್ ಸುರೇಶ ಚಾವಲರ ನೇತೃತ್ವದಲ್ಲಿ ದೇವಣಗಾಂವ ಗ್ರಾಪಂ ಅಧ್ಯಕ್ಷೆ ರೇಣುಕಾ ನಡುವಿನಕೇರಿ ರಥಕ್ಕೆ ಪೂಜೆ ಸಲ್ಲಿಸಿ, ಹೂಮಾಲೆ ಹಾಕಿ, ಆರತಿ ಬೆಳಗಿ ಸ್ವಾಗತ ಮಾಡಿಕೊಂಡರು.

    ಶಾಲಾ ಮಕ್ಕಳ ಕೋಲಾಟ, ಜಯಘೋಷ, ಕನ್ನಡದ ಕವಿಗಳ ಭಾವಚಿತ್ರಗಳು, ಕನ್ನಡ ಧ್ವಜ ಎಲ್ಲೆಡೆ ರಾರಾಜಿಸಿದವು. ಡೊಳ್ಳು ಕುಣಿತ, ಹಲಗೆಮೇಳ, ಚಿಟ್ಟಹಲಗೆ, ಮುತ್ತೈದೆಯರು ಕುಂಭ, ಆರತಿಯೊಂದಿಗೆ ರಥಯಾತ್ರೆ ನಡೆಯಿತು. ಕನ್ನಡ ಗೀತೆಗಳ ಗಾಯನಕ್ಕೆ ನೆರೆದಿದ್ದ ಯುವಕರು, ಮಕ್ಕಳು, ಹಿರಿಯರು, ಮಹಿಳೆಯರು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

    ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಗ್ರಾಮದ ಹಿರಿಯರ ಒತ್ತಾಯಕ್ಕೆ ತಹಸೀಲ್ದಾರ್ ಸುರೇಶ ಚಾವಲರ ಹೆಜ್ಜೆ ಹಾಕಿದರು. ವಿವಿಧ ಸಂಘಗಳ ಮಹಿಳೆಯರು ಕೂಡ ಹೆಜ್ಜೆ ಹಾಕಿ ಸಂಭ್ರಮಿಸಿದರು. ಪಿಡಿಒ ಸಂಜು ದೊಡಮನಿ ಅವರೊಂದಿಗೆ ಹಿರಿಯ ಮುಖಂಡರು ಡೊಳ್ಳು ಬಾರಿಸಿ ಸಂಭ್ರಮ ಹಂಚಿಕೊಂಡರು.

    ಬಿಇಒ ಆರ್ಿ ಬಿರಾದಾರ, ಎಂ.ಎ.ಅತ್ತಾರ, ಎ.ಎಸ್.ಮುಕಿಹಾಳ, ತಾಪಂ ಎಡಿ ಸಿದ್ದು ಅಂಕಲಗಿ, ರವಿ ಬಿರಾದಾರ, ಪ್ರಾಚಾರ್ಯ ಸುರೇಶ ಗಂಗನಳ್ಳಿ, ಶ್ರೀನಿವಾಸ ಕಾಂಬಳೆ, ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ, ಅಶೋಕ ಕೊಳಾರಿ, ಶ್ರೀಶೈಲ ಮಠಪತಿ, ಪ್ರಭು ವಾಲಿಕಾರ, ಎನ್.ಎ.ಬಂಡಗರ, ಸಿದ್ದಯ್ಯ ಮಠಪತಿ, ಶರಣಪ್ಪ ಗುಬ್ಬೆವಾಡ, ಶಿವಪುತ್ರಗೌಡ ಕಡ್ಲೇವಾಡ, ಸಿದ್ದರಾಮ ಹಂಗರಗಿ, ಷಣ್ಮುಖಪ್ಪ ಸೊಮನಾಯಕ, ದವಲಪ್ಪ ಬಡದಾಳ, ಮುತ್ತು ಕಲಶೆಟ್ಟಿ, ವಿಠ್ಠಲ ಯರಗಲ್, ಶಂಕರಲಿಂಗ ನಡುವಿನಕೇರಿ, ನಿಂಗಪ್ಪ ಅಳ್ಳಗಿ, ಸಿದ್ದು ಹೀರಾಪುರ, ಬಸವರಾಜ ಹೀರಾಪುರ, ಅನೀಲ ಸಿಂದಗಿ, ಪ್ರಕಾಶ ಗಂಗನಳ್ಳಿ, ದತ್ತಾತ್ರೆಯ ಸೊನ್ನ, ಅಶೋಕ ಗಂಗನಳ್ಳಿ, ಶಿವು ಕಾಟಕರ ಇತರರಿದ್ದರು.

    ಭೀಮಾ ಸೇತುವೆಯಿಂದ ಪ್ರಗತಿಪರ ಶಿಕ್ಷಣ ಸಂಸ್ಥೆಯ ಆವರಣದವರೆಗೆ ರಥ ಸಂಚರಿಸಿತು. ಶಾಲಾ ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ವಿವಿಧ ಸಂಘಟನೆಗಳ ಕಾರ್ಯಕರ್ತರು ರಥಯಾತ್ರೆಯಲ್ಲಿ ಭಾಗವಹಿಸಿದ್ದರು. ಆಲಮೇಲ ಎಸ್‌ಐ ಕುಮಾರ ಹಾಡಕಾರ ಹಾಗೂ ಸಿಬ್ಬಂದಿ ಬಂದೋಬಸ್ತ್ ಕೈಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts