ಡ್ರೋನ್​ ಪ್ರತಾಪ್​ಗೆ ಸಿಹಿ ಮುತ್ತು ಕೊಟ್ಟ ಸಂಗೀತಾ; ವಿಡಿಯೋ ವೈರಲ್

Prathap Sangeetha
Published on

ಬೆಂಗಳೂರು: ಕನ್ನಡ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದ್ದು, ಒಂದಿಲ್ಲೊಂದು ವಿಚಾರಕ್ಕೆ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಮನೆಯಲ್ಲಿ  ಸ್ಫರ್ಧಿಗಳು ಗೆಲ್ಲಬೇಕೆಂಬ ಹಂಬಲದೊಂದಿಗೆ ಒಂದಿಲ್ಲೊಂದು ಸ್ಟ್ರಾಟರ್ಜಿ ಮಾಡುತ್ತಿದ್ದಾರೆ.

ಇದೀಗ ಹೊರಬಂದಿರುವ ಸುದ್ದಿ ಪ್ರಕಾರ ಬಿಗ್​ಬಾಸ್​ ಮನೆಯ ಕೊನೆಯ ಟಾಸ್ಕ್​ ಆಡಿಸಲಾಗಿದ್ದು, ಅತ್ಯುತ್ತಮ ಹಾಗೂ ಕಳಪೆಯನ್ನು ನೀಡಲಾಗಿದೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಪ್ರತಾಪ್​ಗೆ ಮನೆ ಸದಸ್ಯರು ಕಳಪೆ ಪಟ್ಟ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

ಮನೆಯ ಬಹುತೇಕ ಸದಸ್ಯರು ಡ್ರೋನ್​ ಪ್ರತಾಪ್​ ಅವರಿಗೆ ಕಳಪೆ ಪಟ್ಟ ನೀಡಿದ್ದು, ಆದರೆ, ಮನೆಯ ಕ್ಯಾಪ್ಟನ್​ ಸಂಗೀತಾ ನನ್ನ ಪ್ರಕಾರ ಟಾಸ್ಕ್​ ವಿಚಾರಕ್ಕೆ ಬರುವುದಾದರೆ ಈ ಮನೆಯಲ್ಲಿ ಯಾರು ಕಳಪೆ ಇಲ್ಲ ಎಂದು ಹೇಳಿದ್ದಾರೆ. ಬಳಿಕ ಕಳಪೆ ಪಟ್ಟ ಪಡೆದಿರುವ ಆಟಗಾರನಿಗೆ ನೀಡಲಾಗುವ ಬಟ್ಟೆಯನ್ನು ಪ್ರತಾಪ್​ ಅವರಿಗೆ ಸಂಗೀತಾ ಹಸ್ತಾಂತರಿಸಿದ್ದಾರೆ.

Sangeetha Pratap

ಸಂಗೀತಾ ಹಾಗೂ ಪ್ರತಾಪ್​ ನಡುವಿನ ಬಾಂಡಿಂಗ್​ ಈ ಬಾರಿಯ ಬಿಗ್​ಬಾಸ್​ನಲ್ಲಿ ಹೆಚ್ಚು ಗಮನ ಸೆಳೆದಿದ್ದು, ಪ್ರತಿಯೊಂದು ಸಂದರ್ಭದಲ್ಲಿ ಸಂಗೀತಾ ಅವರು ಡ್ರೋನ್​ ಪ್ರತಾಪ್​ ಅವರನ್ನು ಸಪೋರ್ಟ್​ ಮಾಡಿದ್ದಾರೆ. ಪ್ರತಾಪ್​ಗೆ ಮನೆಮಂದಿ ಕಳಪೆ ಪಟ್ಟ ನೀಡಿದಾಗ ಸಂಗೀತಾ ಭಾವುಕರಾಗಿರುವುದನ್ನು ನೋಡಬಹುದಾಗಿದೆ.

ಪ್ರತಾಪ್​ ಜೈಲನ್ನು ಪ್ರವೇಶಿಸುವ ವೇಳೆ ಸಂಗೀತಾ ಪ್ರೀತಿಯ ತಮ್ಮನಿಗೆ ಮುತ್ತನ್ನು ನೀಡಿದ್ದು, ಇಬ್ಬರ ನಡುವಿನ ಆತ್ಮೀಯತೆಯನ್ನು ತೋರಿಸುತ್ತಿದೆ. ಯಾರು ನನ್ನ ಪಕ್ಕದಲ್ಲಿ ನಿಲ್ಲುತ್ತಾರೋ ಅವರು ಜೈಲಿಗೆ ಹೋಗುತ್ತಾರೆ. ಇದೇ ಈ ಮನೆಯಲ್ಲಿ ನಡೆಯುತ್ತಿರುವುದು ಎಂದು ಸಂಗೀತಾ ಬೇಸರ ಹೊರಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net