More

  ಭಾರತ-ಅಫ್ಘಾನಿಸ್ತಾನ ಟಿ-20 ಪಂದ್ಯ; ಅಂಪೈರ್​ ನಿರ್ಧಾರಕ್ಕೆ ಹಿಟ್​ಮ್ಯಾನ್​ ಕೊಟ್ಟ ರಿಯಾಕ್ಷನ್​ ವೈರಲ್​

  ಬೆಂಗಳೂರು: ಬುಧವಾರವಷ್ಟೇ (ಜನವರಿ 17) ಮುಕ್ತಾಯಗೊಂಡ ಭಾರತ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಸೂಪರ್​ ಓವರ್​ನಲ್ಲಿ ಜಯಗಳಿಸಿದ ಟೀಂ ಇಂಡಿಯಾ ಹಲವು ದಾಖಲೆಗಳನ್ನು ಬರೆದಿದೆ. ಇನ್ನು ಪಂದ್ಯದ ವೇಳೆ ರೋಹಿತ್​ ಶರ್ಮಾ ಹಾಗೂ ಅಂಪೈರ್​ ನಡುವೆ ನಡೆದ ಸ್ವಾರಸ್ಯಕರ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಎಲ್ಲರ ಗಮನ ಸೆಳೆದಿದೆ.

  ಸಾಮಾನ್ಯವಾಗಿ ಪಂದ್ಯ ನಡೆಯುವ ವೇಳೆ ಗಂಭೀರವಾಗಿ ಕಾಣುವ ಟೀಂ ಇಂಡಿಯಾ ನಾಯಕ ರೋಹಿತ್​ ಶರ್ಮಾ ಹಾಸ್ಯದ ಮೂಲಕವೂ ತಮ್ಮ ಅಸಮಾಧಾನವನ್ನು ಮೈದಾನದಲ್ಲಿ ಹೊರಹಾಕಿರುವುದನ್ನು ಹಲವು ಬಾರಿ ನೋಡಿದ್ದೇವೆ. ಅದೇ ರೀತಿಯ ದೃಶ್ಯ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮೂರನೇ ಟಿ-20 ಪಂದ್ಯದಲ್ಲಿ ಕಂಡು ಬಂದಿದ್ದು, ಎಲ್ಲರ ಹುಬ್ಬೇರಿಸಿದೆ.

  ಪಂದ್ಯದ ವೇಳೆ ಆನ್​​ಫೀಲ್ಡ್ ಅಂಪೈರ್ ವೀರೇಂದ್ರ ಶರ್ಮಾ ಜೊತೆ ಹಿಟ್​​ಮ್ಯಾನ್​ ನಡೆಸಿರುವ ಸಂಭಾಷಣೆ ಸ್ಟಂಪ್​ ಮೈಕ್​ನಲ್ಲಿ ರೆಕಾರ್ಡ್​​​ ಆಗಿದ್ದು, ಅಂಪೈರ್​ ನಿರ್ಧಾರದಿಂದ ರೋಹಿತ್​ ಶರ್ಮಾ ಅಸಮಾಧಾನಗಗೊಂಡಿರುವುದನ್ನು ಸ್ಪಷ್ಟವಾಗಿ ಕೇಳಬಹುದಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

  ಇದನ್ನು ಓದಿ: ಗೂಳಿಗೆ ಜೀವಂತ ಹುಂಜ ತಿನ್ನಿಸಿ ವಿಕೃತಿ; ಯುಟ್ಯೂಬರ್​ ವಿರುದ್ಧ ಬಿತ್ತು ಕೇಸ್

  ನಡೆದಿದ್ದೇನು?

  ಭಾರತದ ಇನ್ನಿಂಗ್ಸ್​ನ ಎರಡನೇ ಓವರ್​ನಲ್ಲಿ ಅಜ್ಮತುಲ್ಲಾ ಒಮರ್​ಜಾಯ್​ ಎಸೆದ  ಮೊದಲ ಎಸೆತ ರೋಹಿತ್ ಅವರ ಬ್ಯಾಟ್‌ನ ಒಳ ಅಂಚಿಗೆ ತಾಗಿ ಆ ಬಳಿಕ ಅವರ ಪ್ಯಾಡ್‌ಗೆ ಬಡಿದು ಫೈನ್ ಲೆಗ್‌ನಲ್ಲಿ ಬೌಂಡರಿ ಗೆರೆ ದಾಟಿತು. ಆದರೆ, ಆನ್​ಪೀಲ್ಡ್​ ಅಂಪೈರ್​ ವೀರೇಂದ್ರ ಶರ್ಮಾ ಇದನ್ನು ಲೆಗ್​ಬೈಸ್​ ಎಂದು ತೀರ್ಪು ನೀಡಿದರು. ಆ ವೇಳೆಗೆ ಅಂಪೈರ್​ ನಿರ್ಧಾರ ರೋಹಿತ್​ ಶರ್ಮಾ ಗಮನಕ್ಕೆ ಬಂದಿರಲಿಲ್ಲ.

  ಇದನ್ನೂ ಓದಿ: ಫೆಬ್ರವರಿ 16ರಂದು ರಾಜ್ಯ ಬಜೆಟ್​ ಮಂಡನೆ

  ಬಳಿಕ ಪಂದ್ಯದ ಮೂರನೇ ಓವರ್​ನಲ್ಲಿ ಬ್ಯಾಟಿಂಗ್​ಗೆ ಇಳಿದ ರೋಹಿತ್​ ಶರ್ಮಾ ಸ್ಕೋರ್​ ಬೋರ್ಡ್​ನತ್ತ ಕಣ್ಣು ಹಾಯಿಸಿದ್ದು, ಅವರಿಗೆ ಶಾಕ್​ ಕಾದಿತ್ತು. ಏಕೆಂದರೆ ರೋಹಿತ್ ಅವರ ಸ್ಕೋರ್‌ನ ಮುಂದೆ ಸೊನ್ನೆ ಬರೆದಿರುವುದು ಕಂಡಿತು. ಣವೇ ಅಂಪೈರ್ ವೀರೇಂದ್ರ ಶರ್ಮಾ ಜೊತೆ ಮಾತನಾಡಲು ಆರಂಭಿಸಿದ ರೋಹಿತ್, ಹೇ ವೀರು ನೀವು ಮೊದಲ ಚೆಂಡನ್ನು ಲೆಗ್ ಬೈ ನೀಡಿದ್ದೀರಾ? ಚೆಂಡು ಸ್ಪಷ್ಟವಾಗಿ ನನ್ನ ಬ್ಯಾಟ್‌ಗೆ ತಾಗಿತು. ನಾನು ಈಗಾಗಲೇ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದೇನೆ ಎಂದು ಹೇಳಿರುವ ಮಾತು ಸ್ಟಂಪ್​ ಮೈಕ್​ನಲ್ಲಿ ರೆಕಾರ್ಡ್​ ಆಗಿದೆ.

  ಇದನ್ನೂ ಓದಿ: ಗೃಹಜ್ಯೋತಿ ನಿಯಮದಲ್ಲಿ ಮಹತ್ವದ ಬದಲಾವಣೆ; ಏನದು?

  ಇದಲ್ಲದೆ ಭಾರತದ ಇನ್ನಿಂಗ್ಸ್​ನ 14ನೇ ಓವರ್​ನಲ್ಲಿ ರೋಹಿತ್ ಮತ್ತು ಅಂಪೈರ್ ವೀರೇಂದ್ರ ಶರ್ಮಾ ನಡುವೆ ಮತ್ತೊಮ್ಮೆ ವಾಗ್ವಾದ ನಡೆದಿದೆ. ವೇಗಿ ಸಲೀಂ ಸೈಫಿ ಫುಟ್​ ಟಾಸ್​ ಎಸದರು. ಹೈಟ್​ ಕಾರಣದಿಂದಾಗಿ ರೋಹಿತ್​ ಶರ್ಮಾ ನೋಬಾಲ್​ ನೀಡುವಂತೆ ಅಂಪೈರ್ ಬಳಿ ಮನವಿ ಮಾಡಿದರು. ರೋಹಿತ್​ ಮನವಿಗೆ ಅಂಪೈರ್​ ವೀರೇಂದ್ರ ಶರ್ಮಾ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದ ಅಸಮಾಧಾನಗೊಂಡ ರೋಹಿತ್​ ಓವರ್ ಮುಗಿದ ನಂತರವೂ ಅವರು ಅಂಪೈರ್ ಮುಂದೆ ನೋ ಬಾಲ್ ಬಗ್ಗೆ ಚರ್ಚೆ ನಡೆಸುತ್ತಿದ್ದರು.

  ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಕೆಲವರು ಅಂಪೈರ್ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನೂ ಕೆಲವರು ರೋಹಿತ್​ ಶರ್ಮಾ ನಡೆಯನ್ನು ಟೀಕಿಸಿದ್ದು, ಅಂಪೈರ್​ ನಿರ್ಧಾರವೇ ಅಂತಿಮ ಎಂದು ಕಮೆಂಟ್​ ಮಾಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts