More

    ಗೂಳಿಗೆ ಜೀವಂತ ಹುಂಜ ತಿನ್ನಿಸಿ ವಿಕೃತಿ; ಯುಟ್ಯೂಬರ್​ ವಿರುದ್ಧ ಬಿತ್ತು ಕೇಸ್

    ಚೆನ್ನೈ: ವರ್ಷದ ಮೊದಲ ಹಬ್ಬ ಸಂಕ್ರಾಂತಿ ಪ್ರಯುಕ್ತ ತಮಿಳುನಾಡಿನಲ್ಲಿ ಗೂಳಿಗಳನ್ನು ಮಣಿಸಲಾಗುವ ಜಲ್ಲಿಕಟ್ಟು ಸ್ಫರ್ಧೆಯನ್ನು ಆಯೋಜಿಸಲಾಗಿದ್ದು, ಈಗಾಗಲೇ ಹಲವು ವಿಚಾರಗಳಿಗೆ ಈ ಕ್ರೀಡೆ ಹೆಸರುವಾಸಿಯಾಗಿದೆ. ಸ್ಫರ್ಧೆಯಲ್ಲಿ ಭಾಗಿಯಾಗುವ ಗೂಳಿಗಳಿಗೆ ಹೆಂಡ ಕುಡಿಸಿ ಖಾರದ ಪುಡಿಯನ್ನು ಕಣ್ಣುಗಳಿಗೆ ಮೆತ್ತಲಾಗುತ್ತದೆ ಎಂಬ ದೂರುಗಳು ಸಹ ಕೇಳಿಬಂದಿವೆ.

    ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ತಮಿಳುನಾಡಿನ ಸೇಲಂ ಜಿಲ್ಲೆಯ ತಾರಮಂಗಲಂನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಯುಟ್ಯೂಬರ್ ವಿರುದ್ಧ FIR ದಾಖಲಿಸಿದ್ದು, ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.

    ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಜೀವಂತ ಹುಂಜವನ್ನು ಬಲವಂತವಾಗಿ ಗೂಳಿಗೆ ತಿನ್ನಿಸುತ್ತಿರುವುದನ್ನು ನೋಡಬಹುದಾಗಿದೆ. ಸುಮಾರು 2 ನಿಮಿಷ ಇರುವ ಈ ವಿಡಿಯೋದಲ್ಲಿ ಜಲ್ಲಿಕಟ್ಟುವಿನಲ್ಲಿ ಭಾಗಿಯಾಗುವ ಗೂಳಿ ಬಲವಂತವಾಗಿ ಅಗೆದು ತಿನ್ನುತ್ತಿರುವುದನ್ನು ನೋಡಬಹುದಾಗಿದೆ. ಈ ವಿಡಿಯೋವನ್ನು ರಘು ಎಂಬಾತ ತನ್ನ ಯುಟ್ಯೂಬ್​ ಚಾನೆಲ್​ನಲ್ಲಿ ಪೋಸ್ಟ್​ ಮಾಡಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

    ಇದನ್ನೂ ಓದಿ: ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಆಹ್ವಾನ ತಿರಸ್ಕಾರ: ಅಂಬೇಡ್ಕರ್ ಮೊಮ್ಮಗ ನೀಡಿದ ಕಾರಣವೇನು?

    ಈ ಕುರಿತು ಪ್ರೆತಿಕ್ರಿಯಿಸಿರುವ ಪ್ರಾಣಿಪ್ರಿಯ ಅರುಣ್​, ಗೂಳಿ ಸಸ್ಯಾಹಾರಿ ಪ್ರಾಣಿಯಾಗಿದ್ದು, ಅದಕ್ಕೆ ಹುಂಜವನ್ನು ತಿನ್ನಿಸುವ ಮೂಲಕ ವಿಕೃತಿ ಮೆರೆಯಲಾಗಿದೆ. ಒಂದು ವೇಳೆ ಜಲ್ಲಿಕಟ್ಟು ಪಂದ್ಯಾವಳಿಯಲ್ಲಿ ಈ ಎತ್ತು ಗೆದ್ದರೆ ಇದನ್ನು ನೋಡಿಕೊಂಡು ಅನೇಕ ಮಾಲೀಕರು ಇದನ್ನೇ ಅನುಸರಿಸುತ್ತಾರೆ. ಪೊಲೀಸರು ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ತಾರಮಂಗಲಂ ಪೊಲೀಸ್​ ಠಾಣಾಧಿಕಾರಿ, ಘಟನೆ ಸಂಬಂಧ ಪ್ರಾಣಿಪ್ರಿಯರು ಹಾಗೂ ಹಲವರು ವೈರಲ್​ ವಿಡಿಯೋ ಕುರಿತು ಆಕ್ಷೇಪವೆತ್ತಿದ ಬೆನ್ನಲ್ಲೇ FIR ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಯುಟ್ಯೂಬರ್​ಗಾಗಿ ಶೋಧ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts